ಬಿಡಬ್ಲ್ಯೂಎಸ್‌ಎಸ್‌ಬಿ ಗುತ್ತಿಗೆ ಕಾರ್ಮಿಕರಿಗೆ ಪರಿಷ್ಕೃತ ಕನಿಷ್ಠ ವೇತನ ಪಾವತಿಗೆ ಜಲಮಂಡಳಿ ಸೂಚನೆ

ಬೆಂಗಳೂರು : ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹೊರಗುತ್ತಿಗೆ ನೌಕರರಿಗೆ 2026-27ನೇ ಸಾಲಿನ ಪರಿಷ್ಕೃತ ಕನಿಷ್ಠ ವೇತನ ಹಾಗೂ ವೇರಿಯಬಲ್ ಡಿಯರ್‌ನೆಸ್ ಅಲೋಯನ್ಸ್ ಪಾವತಿಸುವಂತೆ ಸೂಚಿಸಲಾಗಿದೆ ಎಂದು ಜಲಮಂಡಳಿಯ ಮುಖ್ಯ ಆಡಳಿತಾಧಿಕಾರಿ ಹಾಗೂ ಕಾರ್ಯದರ್ಶಿ ಪ್ರಸನ್ನ ಕುಮಾರ್ ವಿ.ಕೆ. ತಿಳಿಸಿದ್ದಾರೆ.

ಬುಧವಾರ ನಗರದ ಫ್ರೀಡಂಪಾರ್ಕ್ನಲ್ಲಿ ಸಮಾನ ಕೆಲಸಕ್ಕೆ ಸಮಾನ ವೇತನ, ಗುತ್ತಿಗೆ ಪದ್ಧತಿಯನ್ನು ರದ್ದುಪಡಿಸಿ ಪೌರ ಕಾರ್ಮಿಕರ ಮಾದರಿಯ ನೇರ ವೇತನ (ಡಿಪಿಎಸ್) ಪದ್ಧತಿ ಜಾರಿಮಾಡಬೇಕು, ವೇರಿಯಬಲ್ ಡಿಯರ್‌ನೆಸ್ ಅಲೋಯನ್ಸ್(ವಿಡಿಎ) ಪಾವತಿಸಬೇಕು ಎಂದು ಆಗ್ರಹಿಸಿ BWSSB ಗುತ್ತಿಗೆ ಕಾರ್ಮಿಕರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಧರಣಿ ಸತ್ಯಾಗ್ರಹದಲ್ಲಿ ಭಾಗವಹಿಸಿ ಕಾರ್ಮಿಕರ ಅಹವಾಲನ್ನು ಸ್ವೀಕರಿಸಿ ಮಾತನಾಡಿದರು.

ರಾಜ್ಯ ಕಾರ್ಮಿಕ ಇಲಾಖೆಯ ಆದೇಶದಂತೆ 2026ರ ಎಪ್ರಿಲ್ 1 ರಿಂದ 2027ರ ಮಾರ್ಚ್ 31ರ ವರೆಗೆ ಅನ್ವಯವಾಗುವ ಪರಿಷ್ಕೃತ ಕನಿಷ್ಠ ವೇತನದ ದರವನ್ನು ಹೊರಗುತ್ತಿಗೆ ನೌಕರರಿಗೆ ಪಾವತಿಸಬೇಕು. ಜಲಮಂಡಳಿಯ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡುತ್ತಿರುವ ಹೊರಗುತ್ತಿಗೆ ನೌಕರರಿಗೆ ಅನ್ವಯಿಸುವ ಝೋನ್-1 ಮತ್ತು ಝೋನ್-2ರ, ಪರಿಷ್ಕೃತ ದರದಂತೆ ಪಾವತಿಸಬೇಕಾದ ಮೊತ್ತವನ್ನು ಲೆಕ್ಕಹಾಕಿ ಈಗಾಗಲೇ ಗುತ್ತಿಗೆದಾರರಿಗೆ ಪಾವತಿಸಿರುವ ಮೊತ್ತವನ್ನು ಕಡಿತಗೊಳಿಸಿ ಉಳಿದ ವ್ಯತ್ಯಾಸದ ಹಣವನ್ನು ಗುತ್ತಿಗೆದಾರರಿಗೆ ಪಾವತಿಸುವಂತೆ ಸಂಬAಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಪ್ರಸನ್ನ ಕುಮಾರ್ ಹೇಳಿದರು.

ಮುಂದಿನ ದಿನಗಳಲ್ಲಿ ಕಾರ್ಮಿಕರು ಏನೇ ಸಮಸ್ಯೆ ಇದ್ದರೂ ಗಮನಕ್ಕೆ ತರಬೇಕು. ಅಧ್ಯಕ್ಷರು, ಸಚಿವರ ಗಮನಕ್ಕೆ ತಂದು ಅದನ್ನು ಪರಿಹರಿಸಲು ಪ್ರಯತ್ನ ಮಾಡುತ್ತೇವೆ. ನೀಡಿರುವ ಮನವಿಯಲ್ಲಿ ಕೂಡಲೇ ಯಾವುದೆಲ್ಲ ಬೇಡಿಕೆಗಳನ್ನು ತಕ್ಷಣದಲ್ಲಿ ಈಡೇರಿಸಲು ಸಾಧ್ಯವಿದಿಯೋ ಅದೆಲ್ಲವನ್ನೂ ಜಾರಿ ಮಾಡಲು ಪ್ರಯತ್ನಿಸುತ್ತೇನೆೆ. ಸರಕಾರದ ಮಟ್ಟದಲ್ಲಿ ಯಾವುದು ಬಗೆಹರೆಯಬೇಕೋ, ಅದನ್ನು ನಾವು ಸರಕಾರದ ಗಮನಕ್ಕೆ ತರುತ್ತೇವೆ ಎಂದು ಅವರು ತಿಳಿಸಿದರು.

ನಮ್ಮಲ್ಲಿ ಹೊರಗುತ್ತಿಗೆ, ರೆಗ್ಯುಲರ್ ಎನ್ನುವ ಯಾವ ತಾರತಮ್ಯವೂ ಇಲ್ಲ. ಎಲ್ಲ ಕಾರ್ಮಿಕರೂ ಒಂದೇ. ಮನುಷ್ಯನ ಜೀವ ಅತ್ಯಮೂಲ್ಯವಾದದ್ದು, ಅದನ್ನು ಯಾವ ಕಾರಣಕ್ಕೂ ನಿರ್ಲಕ್ಷ್ಯ ಮಾಡುವುದಿಲ್ಲ. ಅದಕ್ಕೆ ಕಾನೂನಾತ್ಮಕವಾಗಿ ಏನು ಪರಿಹಾರ ಬರಬೇಕೋ ಅದರ ಕುರಿತು ಚರ್ಚೆ ಮಾಡುತ್ತೇವೆ. ಏಜೆನ್ಸಿ ಅವರ ತಪ್ಪು ಮಾಡಿದ್ದರೆ ಅವರಿಗೆ ಕ್ಷಮೆ ಇಲ್ಲ, ಏಜನ್ಸಿಯನ್ನೇ ಬದಲಾಯಿಸೋಣ. ನಿಮ್ಮ ಕುಂದುಕೊರತೆಗಳಿಗೆ ನಾವು ಸಹಕರಿಸುತ್ತೇವೆ. ಇನ್ನು ಮುಂದೆ ನಡೆಯುವ ಎಲ್ಲ ಸಭೆಗಳಿಗೂ ಹಾಜರಾಗುತ್ತೇವೆ ಎಂದು ಪ್ರಸನ್ನ ಕುಮಾರ್ ಭರವಸೆ ನೀಡಿದರು.

ಧರಣಿ ಸತ್ಯಾಗ್ರಹದಲ್ಲಿ ಕಾರ್ಮಿಕ ಇಲಾಖೆಯ ಅಧಿಕಾರಿ ತಮ್ಮಯ್ಯ, ಬಿಡಬ್ಲೂö್ಯಎಸ್‌ಎಸ್‌ಬಿ ಗುತ್ತಿಗೆ ಕಾರ್ಮಿಕರ ಸಂಘದ ಪದಾಧಿಕಾರಿಗಳಾದ ರವಿ ಮೋಹನ್, ಸತೀಶ್, ನಾರಾಯಣ, ಕರ್ನಾಟಕ ಜನಶಕ್ತಿ ರಾಜ್ಯಾಧ್ಯಕ್ಷ ನೂರ್ ಶ್ರೀಧರ್, ಕೆಎಸ್‌ಎಸ್‌ನ ಪದಾಧಿಕಾರಿಗಳಾದ ಸುಷ್ಮಾ, ವರದರಾಜೇಂದ್ರ, ಚನ್ನಮ್ಮ, ಜೆಸಿಟಿಯು ಪದಾಧಿಕಾರಿ ಕೆ.ವಿ.ಭಟ್ ಸೇರಿದಂತೆ ಹಲವರು ಭಾಗವಹಿಸಿದ್ದರು.

ಬಹುಮುಖ್ಯ ಬೇಡಿಕೆಗಳು:
• ಎಲ್ಲ ಕಾರ್ಮಿಕರಿಗೂ ಮೂಲ ಭೂತ ಹಕ್ಕಾಗಿರುವ ಬೋನಸ್, ಡಿಎ, ಅರಿಯರ್ಸ್ ಬಿಡುಗಡೆ ಮಾಡಬೇಕು.
• ಪ್ರತಿ ತಿಂಗಳ ವೇತನ 1 ರಿಂದ 7ನೇ ತಾರೀಖಿನೊಳಗೆ ಕಾರ್ಮಿಕರ ಖಾತೆಗೆ ಜಮೆಯಾಗಬೇಕು.
• ಮಹಿಳಾ ಕಾರ್ಮಿಕರ ಸಮಸ್ಯೆ ಹೆರಿಗೆ ಭತ್ಯೆ 6 ತಿಂಗಳ ಸಂಬಳ ಸಹಿತ ರಜೆ ಜಾರಿಗೊಳಿಸಬೇಕು.
• ರಜೆ ದಿನಗಳು, ಕೆಲಸದ ಅವಧಿ, ಒಟಿ ನಿಗದಿಯಾಗಬೇಕು.
• ಗ್ರಾಮೀಣಭಾಗದಲ್ಲಿ ಮೂರು ತಿಂಗಳಿಗೊಮ್ಮೆ ಬರುವ ರಿಸ್ಕ್ ಅಲೋಯನ್ಸ್ ಪ್ರತಿ ತಿಂಗಳ ವೇತನದೊಂದಿಗೆ ಕೊಡಬೇಕು.
• ಕಚೇರಿಗಳಲ್ಲಿ ಮಹಿಳೆಯರ ಮೇಲಿನ ಮಾನಸಿಕ ಕಿರುಕುಳ ನಿಲ್ಲಬೇಕು.

More articles

Latest article

Most read