‘ಇ-ಆಸ್ತಿ 2.0’ ಆಸ್ತಿ ದಾಖಲೆ ವ್ಯವಸ್ಥೆ ಲೋಕಾರ್ಪಣೆ, 35 ಲಕ್ಷಕ್ಕೂ ಹೆಚ್ಚು ಆಸ್ತಿಗಳ ಪೈಕಿ 23–24 ಲಕ್ಷಕ್ಕೂ ಹೆಚ್ಚು ಆಸ್ತಿ ದಾಖಲೆಗಳ ಗಣಕೀಕರಣ

ಬೆಂಗಳೂರು : ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿ  ಇ ಆಸ್ತಿ 2.0’ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲಾಗಿದ್ದು,  ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು ಇಂದು ಲೋಕಾರ್ಪಣೆ ಮಾಡಿದರು.

ಈ ವೇಳೆ ಮಾತನಾಡಿದ ಅವರು, ಹಳೆಯ ಕಾಲದಲ್ಲಿ ಆಸ್ತಿ ದಾಖಲೆಗಳು ಕಾಗದದ ರೂಪದಲ್ಲಿದ್ದು, ಅವುಗಳಲ್ಲಿ ತಿದ್ದುಪಡಿ, ಬದಲಾವಣೆ ಮಾಡುವ ಸಾಧ್ಯತೆಗಳಿದ್ದವು.  ಕಾನೂನುಗಳು ಸರಿಯಾಗಿದ್ದರೂ ಅವುಗಳ ಪಾಲನೆ ಮತ್ತು ಆಸ್ತಿ ದಾಖಲೆಗಳ ನಿರ್ವಹಣೆಯಲ್ಲಿ ಕೆಲವು ಲೋಪಗಳಿದ್ದವು. ಆದರೆ, 2000ನೇ ಇಸವಿಯಲ್ಲಿ ಭೂಮಿ ದಾಖಲೆಗಳ ಗಣಕೀಕರಣದ ಮೂಲಕ ಆಸ್ತಿ ದಾಖಲೆಗಳ ನಿರ್ವಹಣೆಯಲ್ಲಿ ದೇಶಕ್ಕೆ ಮಾದರಿಯಾಗುವಂತಹ ವ್ಯವಸ್ಥೆಯನ್ನು ನಮ್ಮ ರಾಜ್ಯ ಪರಿಚಯಿಸಿದೆ. ಇದರಿಂದ ಮಧ್ಯವರ್ತಿಗಳ ಹಸ್ತಕ್ಷೇಪ ಹಾಗೂ ಸಾರ್ವಜನಿಕರಿಗೆ ಆಗುತ್ತಿದ್ದ ತೊಂದರೆಗಳನ್ನು ಕಡಿಮೆ ಮಾಡಲು ಸಾಧ್ಯವಾಯಿತು ಎಂದು ತಿಳಿಸಿದರು.

ಇದೇ ರೀತಿ ದೇಶದಲ್ಲೇ ಅತ್ಯುತ್ತಮ ಆಸ್ತಿ ದಾಖಲೆ ವ್ಯವಸ್ಥೆಯನ್ನು ರೂಪಿಸುವ ನಿಟ್ಟಿನಲ್ಲಿ, ಅಂದಿನ ಉಪ ಮುಖ್ಯಮಂತ್ರಿಗಳಾದ ಶ್ರೀ ಡಿ.ಕೆ. ಶಿವಕುಮಾರ್ ಅವರ ನಿರ್ದೇಶನದೊಂದಿಗೆ ಇ-ಖಾತಾ ನೀಡುವ ವ್ಯವಸ್ಥೆಯನ್ನು ಆರಂಭಿಸಲಾಯಿತು.

ಬೆಂಗಳೂರಿನಲ್ಲಿ 35 ಲಕ್ಷಕ್ಕೂ ಹೆಚ್ಚು ಆಸ್ತಿ ಇದ್ದು, ಈ ಪೈಕಿ 23–24 ಲಕ್ಷಕ್ಕೂ ಹೆಚ್ಚು ಆಸ್ತಿ ದಾಖಲೆಗಳನ್ನು ಗಣಕೀಕರಣಗೊಳಿಸಿ ಡ್ರಾಫ್ಟ್ ಖಾತಾಗಳನ್ನು ಈಗಾಗಲೇ ವಿತರಿಸಲಾಗಿದೆ. ಇದರಲ್ಲಿ ಸುಮಾರು 11 ಲಕ್ಷ ಆಸ್ತಿ ಮಾಲೀಕರು ತಮ್ಮ ಅಂತಿಮ ಇ-ಖಾತಾವನ್ನು ಪಡೆದುಕೊಂಡಿದ್ದಾರೆ. ಉಳಿದವರು ಅಗತ್ಯ ಮಾಹಿತಿಯನ್ನು ಸಲ್ಲಿಸಿ ತಮ್ಮ ಅಂತಿಮ ಇ-ಖಾತಾವನ್ನು ಪಡೆಯಬಹುದಾಗಿದೆ ಎಂದು ತಿಳಿಸಿದರು.

ರಾಷ್ಟ್ರೀಯ ಇ-ಆಡಳಿತ 2025 ಚಿನ್ನದ ಪ್ರಶಸ್ತಿ

ಇ-ಖಾತಾ ವ್ಯವಸ್ಥೆಯ ತಂತ್ರಜ್ಞಾನ ಆಧಾರಿತ ಮತ್ತು ನಾಗರಿಕ ಕೇಂದ್ರಿತ ಸೇವೆಗಾಗಿ  ರಾಷ್ಟ್ರೀಯ ಇ-ಆಡಳಿತ 2025 ಚಿನ್ನದ ಪ್ರಶಸ್ತಿಯೂ ಲಭಿಸಿದೆ. ಈ ವ್ಯವಸ್ಥೆಯಿಂದ ಹಲವು ವರ್ಷಗಳಿಂದ ಸಾರ್ವಜನಿಕರಿಗೆ ಎದುರಾಗುತ್ತಿದ್ದ ಶೋಷಣೆ ಮತ್ತು ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಸಾಧ್ಯವಾಗಿದೆ. ಅನೇಕ ಪ್ರಕರಣಗಳಲ್ಲಿ ಆಸ್ತಿ ದಾಖಲೆಗಳಿಗೆ ಸಂಬಂಧಿಸಿದ ವಿವಾದಗಳು ಮತ್ತು ನ್ಯಾಯಾಲಯದ ಮೊರೆ ಹೋಗುವ ಪರಿಸ್ಥಿತಿಯನ್ನೂ ತಪ್ಪಿಸಲು ಇದು ಸಹಕಾರಿಯಾಗಿದೆ.

ಆದಾಗ್ಯೂ, ಪ್ರಸ್ತುತ ವ್ಯವಸ್ಥೆಯಲ್ಲಿ ಕೆಲವು ನ್ಯೂನತೆಗಳು ಹಾಗೂ ಸುಧಾರಣೆಗೆ ಅವಕಾಶಗಳಿರುವುದು ಗಮನಕ್ಕೆ ಬಂದು, ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಡಿ.ಕೆ. ಶಿವಕುಮಾರ್ ಸೂಚನೆಯಂತೆ ಮತ್ತಷ್ಟು ಸರಳ, ವೇಗದ, ಪಾರದರ್ಶಕ ಮತ್ತು ಜನಸ್ನೇಹಿ ವ್ಯವಸ್ಥೆಯಾಗಿ ‘ಇ-ಆಸ್ತಿ 2.0’ ಅನ್ನು ಅಭಿವೃದ್ಧಿಪಡಿಸಿ ಇಂದು ಲೋಕಾರ್ಪಣೆ ಮಾಡಲಾಗಿದೆ ಎಂದರು.

ಹಿಂದಿನ ವ್ಯವಸ್ಥೆಯಲ್ಲಿ ದಾಖಲೆಗಳನ್ನು ಅಪ್ಲೋಡ್ ಮಾಡುವ ಪ್ರಕ್ರಿಯೆ ಸೇರಿದಂತೆ ಕೆಲವು ಹಂತಗಳು ನಾಗರಿಕರಿಗೆ ಕಷ್ಟಕರವಾಗಿದ್ದವು. ಇದೀಗ ಇ-ಆಸ್ತಿ 2.0ನಲ್ಲಿ ಬಳಕೆದಾರರ ಅನುಭವವನ್ನು ಸುಧಾರಿಸಲಾಗಿದ್ದು, ಪ್ರಕ್ರಿಯೆಗಳನ್ನು ಮತ್ತಷ್ಟು ಸರಳಗೊಳಿಸಲಾಗಿದೆ.

ಖಾತಾದಲ್ಲಿ ಹೆಸರು ತಪ್ಪಾಗಿರುವುದು, ಹೆಸರು ಬದಲಾಗಿರುವುದು ಅಥವಾ ಹಿಂದಿನ ಮಾಲೀಕರ ಹೆಸರು ಮುಂದುವರಿದಿರುವುದು, ಆಸ್ತಿಯ ವಿಸ್ತೀರ್ಣ ದಾಖಲೆಗಳಿಗೆ ಹೊಂದಿಕೆಯಾಗದಿರುವುದು ಸೇರಿದಂತೆ ಹಲವು ತಿದ್ದುಪಡಿ ಸಂಬಂಧಿತ ದೂರುಗಳು ಬರುತ್ತಿದ್ದವು. ಇಂತಹ ಸಮಸ್ಯೆಗಳನ್ನು ಸುಲಭವಾಗಿ ಸರಿಪಡಿಸಿಕೊಳ್ಳಲು ಅಗತ್ಯ ವ್ಯವಸ್ಥೆಯನ್ನು ಇ-ಆಸ್ತಿ 2.0ನಲ್ಲಿ ಕಲ್ಪಿಸಲಾಗಿದೆ ಎಂದು ತಿಳಿಸಿದರು.

ಸಂಬಂಧಿತ ಇಲಾಖೆಗಳ ವ್ಯವಸ್ಥೆಗಳೊಂದಿಗೂ ಸಂಯೋಜನೆ:

ಇ-ಆಸ್ತಿ 2.0 ವ್ಯವಸ್ಥೆಯನ್ನು ಕಾವೇರಿ ವ್ಯವಸ್ಥೆಯೊಂದಿಗೆ ಸಂಯೋಜಿಸಲಾಗಿದ್ದು, ಬೆಂಗಳೂರು ಜಲಮಂಡಳಿ ಹಾಗೂ ಬೆಸ್ಕಾಂ ಸೇರಿದಂತೆ ಸಂಬಂಧಿತ ಇಲಾಖೆಗಳ ವ್ಯವಸ್ಥೆಗಳೊಂದಿಗೂ ಸಮನ್ವಯಗೊಳಿಸಲಾಗಿದೆ. ಇದರಿಂದ ನಾಗರಿಕರು ವಿವಿಧ ಕಚೇರಿಗಳಿಗೆ ಅಲೆದಾಡುವ ಅಗತ್ಯ ಕಡಿಮೆಯಾಗಲಿದೆ. ಮಧ್ಯವರ್ತಿಗಳ ಹಸ್ತಕ್ಷೇಪಕ್ಕೂ ಇದರಿಂದ ಮತ್ತಷ್ಟು ಕಡಿವಾಣ ಬೀಳಲಿದೆ. ಅಲ್ಲದೇ, ನಾಗರಿಕರು ತಮ್ಮ ಆಸ್ತಿಯ ದಾಖಲೆಗಳ ಪ್ರಸ್ತುತ ಸ್ಥಿತಿಯನ್ನು ಆನ್ಲೈನ್ ಮೂಲಕವೇ ತಿಳಿದುಕೊಳ್ಳಬಹುದಾಗಿದೆ.

ಸುಧಾರಿತ, ಪಾರದರ್ಶಕ ಹಾಗೂ ಜನಸ್ನೇಹಿ ವ್ಯವಸ್ಥೆ

ಇ-ಆಸ್ತಿ 2.0ನಲ್ಲಿ AI ತಂತ್ರಜ್ಞಾನವನ್ನು ದಾಖಲೆಗಳ ಪರಿಶೀಲನೆ ಹಾಗೂ ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆಗೆ ಸಹಕಾರಿಯಾಗುವಂತೆ ಬಳಸಲಾಗಿದೆ. ಹೊರನಾಡಿನಲ್ಲಿ ವಾಸಿಸುವ ಆಸ್ತಿ ಮಾಲೀಕರಿಗೂ ಅನುಕೂಲವಾಗುವಂತೆ ಡಿಜಿಟಲ್ ಸಹಿ ಸೇರಿದಂತೆ ಮತ್ತಷ್ಟು ಡಿಜಿಟಲ್ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿದೆ.

ಖಾತಾ ಬೈಫರ್ಕೇಶನ್ಗಾಗಿ ಆನ್ಲೈನ್ ಮಾಡ್ಯೂಲ್

ಮುಂದಿನ ಸೋಮವಾರದಿಂದ ಖಾತಾ ಬೈಫರ್ಕೇಶನ್ಗಾಗಿ ಆನ್ಲೈನ್ ಮಾಡ್ಯೂಲ್ನ್ನು ಸಹ ಲಭ್ಯಗೊಳಿಸಲಾಗುವುದು. ನಿಯಮಾನುಸಾರ ಇರುವ 20,000 ಚದರ ಅಡಿವರೆಗೆ ವಿಸ್ತೀರ್ಣದ ಆಸ್ತಿಗಳ ಬೈಫರ್ಕೇಶನ್ಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗುತ್ತದೆ. ಆನ್ಲೈನ್ನಲ್ಲಿಯೇ ಅಗತ್ಯ ಪ್ಲಾನ್ಗಳನ್ನು ಅಪ್ಲೋಡ್ ಮಾಡಿ ಬೈಫರ್ಕೇಶನ್ ಪ್ರಕ್ರಿಯೆ ಪೂರ್ಣಗೊಳಿಸಿ ಇ-ಖಾತಾವನ್ನೂ ಪಡೆಯಬಹುದಾಗಿದೆ.

More articles

Latest article

Most read