ಫೆ 27-28 ರಂದು ತಮಿಳುನಾಡಿಗೆ ಪ್ರಧಾನಿ ಬೇಟಿ

ನವದೆಹಲಿ : ಇಸ್ರೋದ ಎರಡನೇ ಬಾಹ್ಯಾಕಾಶ ಪೋರ್ಟ್‌ಗೆ ಅಡಿಪಾಯ ಹಾಕುವುದು ಸೇರಿದಂತೆ ಪಕ್ಷದ ಕಾರ್ಯಕ್ರಮಗಳು ಮತ್ತು ಯೋಜನೆಗಳನ್ನು ಉದ್ಘಾಟಿಸಲಿಸಲು ಪ್ರಧಾನಿ ನರೇಂದ್ರ ಮೋದಿ ಫೆಬ್ರವರಿ 27-28 ರಂದು ತಮಿಳುನಾಡಿಗೆ ಭೇಟಿ ನೀಡಲಿದ್ದಾರೆ.

ಲೋಕಸಭೆಗೆ ಇನ್ನೂ ಕೆಲವು ದಿನಗಳು ಬಾಕಿ ಉಳಿದ ಈ ಸಂದರ್ಭದಲ್ಲಿ ಪ್ರಧಾನಿ ತಮಿಳುನಾಡಿಗೆ ಬೇಟಿಕೊಡುತ್ತಿದ್ದಾರೆ. ತಿರುಪ್ಪೂರ್, ಮಧುರೈ, ತೂತುಕುಡಿ ಮತ್ತು ತಿರುನೆಲ್ವೇಲಿ ಜಿಲ್ಲೆಗಳಲ್ಲಿ ವಿವಿಧ ಸರ್ಕಾರಿ ಮತ್ತು ಪಕ್ಷದ ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ಸಾರ್ವಜನಿಕ ರ್ಯಾಲಿಯ ನಂತರ ತಮಿಳುನಾಡು ಜನರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಈ ಹಿಂದೆ ಪ್ರಧಾನಿ ಜನವರಿಯಲ್ಲಿ ಮೂರು ಬಾರಿ ದಕ್ಷಿಣ ಭಾರತದಲ್ಲಿ ಪ್ರವಾಸ ಮಾಡಿದ್ದಾರೆ. ಆಂಧ್ರಪ್ರದೇಶ, ಕೇರಳ, ತಮಿಳುನಾಡು ಮತ್ತು ಲಕ್ಷದ್ವೀಪಗಳಲ್ಲಿ ಅಭಿವೃದ್ಧಿ ಯೋಜನೆಗಳ ಉದ್ಘಾಟನೆಯನ್ನು ಮಾಡಿದ್ದರು.

ಫೆಬ್ರವರಿ 27 ರಂದು ಮಧ್ಯಾಹ್ನ 2.05 ಕ್ಕೆ ತಿರುವನಂತಪುರಂನಿಂದ ಸೂಲೂರು ವಿಮಾನ ನಿಲ್ದಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ತಲುಪಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಅಣ್ಣಾಮಲೈ ಹೇಳಿದ್ದಾರೆ.

More articles

Latest article

Most read