ಬೆಂಗಳೂರು : ರಾಜ್ಯದಲ್ಲಿನ ಅತಿವೃಷ್ಟಿ, ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ನೂತನ ಸಚಿವರಿಗೆ ಜಿಲ್ಲೆಗಳನ್ನು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಿಯೋಜಿಸಿದ್ದಾರೆ. ತಕ್ಷಣ ಪ್ರವಾಸ ಕೈಗೊಂಡು, ಖುದ್ದು ಪ್ರತಿಯೊಂದು ತಾಲ್ಲೂಕುಗಳಲ್ಲಿನ ಪರಿಸ್ಥಿತಿಯನ್ನು ಪರಿವೀಕ್ಷಣೆ ನಡೆಸಿ. ವಾಸ್ತವ ಸ್ಥಿತಿಯ ವರದಿಯನ್ನು ಕೂಡಲೇ ಉಪ ಮುಖ್ಯ ಮಂತ್ರಿ ಹಾಗೂ ಕಂದಾಯ ಸಚಿವರಿಗೆ ಸಲ್ಲಿಸುವಂತೆ ಸೂಚಿಸಿದ್ದಾರೆ.
“ಸಚಿವ ಸಂಪುಟ ವಿಸ್ತರಣೆಯಾಗುವ ಹಿನ್ನೆಲೆಯಲ್ಲಿ ಸ್ಥಳೀಯ ನಾಯಕರಿಂದ ಪರಿಹಾರ ಘೋಷಣೆ ಮಾಡಿಸಲು ತೀರ್ಮಾನಿಸಿದ್ದೇವೆ. ನಾಳೆಯಿಂದ ನೀವುಗಳು ನಿಮಗೆ ಜವಾಬ್ದಾರಿ ವಹಿಸುವ ಜಿಲ್ಲೆಗಳಿಗೆ ಹೋಗಿ, ಅತಿವೃಷ್ಟಿ ಹಾಗೂ ಅನಾವೃಷ್ಟಿ ಬಗ್ಗೆ ಸ್ಥಳಕ್ಕೆ ಹೋಗಿ ಪರಿಶೀಲನೆ ಮಾಡಬೇಕು. ನಂತರ ಕಂದಾಯ ಸಚಿವರಿಗೆ ವರದಿ ನೀಡಬೇಕು. ವಿರೋಧ ಪಕ್ಷದ ನಾಯಕರು ಅಧಿವೇಶನ ನಡೆಸಲು ಬಿಡುವುದಿಲ್ಲ ಎಂದು ಹೇಳುತ್ತಿದ್ದಾರೆ. ಅವರು ಕಂದಾಯ ಸಚಿವರಾಗಿದ್ದವರು. ಸಾಕಷ್ಟು ಅನುಭವಸ್ಥರು. ಅವರಿಗೆ ಸಮಯ ಬಂದಾಗ ಉತ್ತರ ನೀಡೋಣ. ನಾನು ಈಗಾಗಲೇ ಬೆಳಗಾವಿ, ಚಿತ್ರದುರ್ಗ, ಕಲಬುರ್ಗಿ ವಿಭಾಗಗಳಲ್ಲಿ ಸಭೆ ಮಾಡಿದ್ದು, ಮೈಸೂರು ವಿಭಾಗದ ಸಭೆಯನ್ನು ಶೀಘ್ರವೇ ಮಾಡಲಾಗುವುದು. ಎಲ್ಲರ ಸಲಹೆ ಪಡೆಯಲಾಗಿದ್ದು, ಕುಡಿಯುವ ನೀರಿನ ಉದ್ದೇಶಕ್ಕೆ ಪ್ರತಿ ವಿಧಾನಸಭೆಗೆ 1 ಕೋಟಿ ಅನುದಾನ ನೀಡಲಾಗಿದೆ. ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಹೋಗಿ ವರದಿ ನೀಡಬೇಕು. ನಂತರ ಸರ್ಕಾರ ತೀರ್ಮಾನ ಮಾಡಲಿದೆ. ಎಲ್ಲಾ ಪಕ್ಷದ ಜನಪ್ರತಿನಿಧಿಗಳನ್ನು ಕರೆದುಕೊಂಡು ಹೋಗಿ ಪರಿಶೀಲನೆ ಮಾಡಬೇಕು ಎಂದು ಸೂಚನೆ ನೀಡಲಾಗಿದೆ” ಎಂದು ಮಾಹಿತಿ ನೀಡಿದರು.
ಸಚಿವರಿಗೆ ಹಂಚಿಕೆ ಮಾಡಿರುವ ಜಿಲ್ಲೆ
ಡಾ. ಜಿ. ಪರಮೇಶ್ವರ – ತುಮಕೂರು,
ರಘುಮೂರ್ತಿ -ಚಿತ್ರದುರ್ಗ
ಬಿ.ಎಸ್. ಸುರೇಶ್ (ಭೈರತಿ) – ಚಿಕ್ಕಬಳ್ಳಾಪುರ
ಕೆ.ಹೆಚ್. ಮುನಿಯಪ್ಪ – ಬೆಂಗಳೂರು ಗ್ರಾಮಾಂತರ
ರಾಮಲಿಂಗಾ ರೆಡ್ಡಿ – ಕೋಲಾರ
ಹೆಚ್.ಸಿ. ಬಾಲಕೃಷ್ಣ – ಬೆಂಗಳೂರು ದಕ್ಷಿಣ
ಬಿ.ಜೆಡ್. ಜಮೀರ್ ಅಹ್ಮದ್ ಖಾನ್ – ಜಯನಗರ
ಕೆ.ಜೆ. ಜಾರ್ಜ್ – ಚಿಕ್ಕಮಗಳೂರು
ಕೆ.ಎಂ.ಶಿವಲಿಂಗೇ ಗೌಡ – ಹಾಸನ
ಮಧು ಬಂಗಾರಪ್ಪ -ಶಿವಮೊಗ್ಗ
ವಿಜಯಾನಂದ ಕಾಶಪ್ಪನವರ – ಬಾಗಲಕೋಟೆ
ಬಸವರಾಜ ರಾಯರೆಡ್ಡಿ – ಗದಗ
ಎಸ್.ಎಸ್. ಮಲ್ಲಿಕಾರ್ಜುನ – ದಾವಣಗೆರ
ರುದ್ರಪ್ಪ ಲಮಾಣಿ – ಹಾವೇರಿ
ಸತೀಶ್ ಜಾರಕಿಹೊಳಿ – ಬೆಳಗಾವಿ
ಸಂತೋಷ್ ಲಾಡ್ – ಧಾರವಾಡ
ಲಕ್ಷ್ಮಣ ಸವದಿ – ಉತ್ತರಕನ್ನಡ
ಪ್ರಿಯಾಂಕ್ ಖರ್ಗೆ – ಕಲಬುರ್ಗಿ
ಅಜಯ್ ಧರಂ ಸಿಂಗ್ – ರಾಯಚೂರು
ಈಶ್ವರ್ ಖಂಡ್ರೆ – ಬೀದರ್
ಯು.ಟಿ.ಖಾದರ್ – ದಕ್ಷಿಣ ಕನ್ನಡ & ಉಡುಪಿ
ಪಿ.ಎಂ.ನರೇಂದ್ರಸ್ವಾಮಿ -ಕೊಡಗು
ಯತೀಂದ್ರ ಸಿದ್ದರಾಮಯ್ಯ – ಮೈಸೂರು

