ಬೆಂಗಳೂರು : ಲೋಕಭವನದ ಗಾಜಿನ ಮನೆಯಲ್ಲಿ ಪಶ್ಚಿಮಾಭಿಮುಖವಾಗಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಿತು. ಕಾರ್ಯಕ್ರಮದಲ್ಲಿ ಸಿಎಂ ಡಿ.ಕೆ.ಶಿವಕುಮಾರ್, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಡಿಸಿಎಂ ಪರಮೇಶ್ವರ ಸೇರಿದಂತೆ ಹಲವರು ಇದ್ದರು.
ಡಾ. ಅಜಯ್ ಧರ್ಮಸಿಂಗ್ ಮೊದಲ ಬಾರಿಗೆ ಸಚಿವರಾಗಿ ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಹೆಚ್.ಸಿ.ಬಾಲಕೃಷ್ಣ ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಕೆ.ಎಸ್.ಬಸವಂತಪ್ಪ ಮೊದಲ ಬಾರಿಗೆ ಸಚಿವರಾಗಿ ಬಸವೇಶ್ವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.
ಬಸವರಾಜ ರಾಯರೆಡ್ಡಿ ಪ್ರಮಾಣ ವಚನ ಸ್ವೀಕರಿಸಿದರು. ಎನ್. ಚಲವರಾಯಸ್ವಾಮಿ ದೇವರ ಹಾಗೂ ಅಜ್ಜನ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಲಕ್ಷ್ಮಣ ಸವದಿ, ಎಸ್.ಮಧು ಬಂಗಾರಪ್ಪ, ಎಸ್.ಎಸ್. ಮಲ್ಲಿಕಾರ್ಜುನ, ಬಿ.ನಾಗೇಂದ್ರ, ಪಿ.ಎಂ. ನರೇಂದ್ರಸ್ವಾಮಿ ಅವರು ಅಂಬೇಡ್ಕರ್ ಹಾಗೂ ಗಂಗಾಧರ ಅಜ್ಜಯ್ಯನ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು.
ಸಿ. ಪುಟ್ಟರಂಗಶೆಟ್ಟಿ , ಟಿ.ರಘುಮೂರ್ತಿ, ರಿಜ್ವಾನ್ ಆರ್ಷದ್, ರುದ್ರಪ್ಪ ಲಮಾಣಿ, ಕೆ.ಎಂ.ಶಿವಲಿಂಗೇಗೌಡ, ವಿಜಯಾನಂದ ಕಾಶಪ್ಪನವರ್, ಜಮೀರ್ ಅಹಮದ್ ಖಾನ್ ಇಂಗ್ಲೀಷ್‌ನಲ್ಲಿ ಓದಿ ಪ್ರಮಾಣ ವಚನ ಸ್ವೀಕರಿಸದರು.
ಗಾಯತ್ರಿ ಶಾಂತೇಗೌಡ ಅವರನ್ನು ಹೊರತುಪಡಿಸಿ ಉಳಿದವರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು.

