1.5 ತಿಂಗಳ ನಂತರ ಪ್ರಧಾನಿಗೆ ಅರಿವಾಗಿದೆ, ಶಿಕ್ಷಣ ಸಚಿವರು ರಾಜೀನಾಮೆ ನೀಡುವ ತನಕ ಪ್ರತಿಭಟನೆ : ಸಿಜೆಪಿ

ನವದೆಹಲಿ : ಪರೀಕ್ಷಾ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳ ವಿಚಾರಣೆಗೆ ತ್ವರಿತಗತಿ ನ್ಯಾಯಾಲಯಗಳನ್ನು ಸ್ಥಾಪಿಸುವ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರ ಘೋಷಣೆಗೆ ಪ್ರತಿಕ್ರಿಯಿಸಿದ ‘ಕಾಕ್ರೋಚ್ ಜನತಾ ಪಾರ್ಟಿ’ಯ (CJP) ರಾಷ್ಟ್ರೀಯ ವಕ್ತಾರ ಅಶುತೋಷ್ ರಂಕಾ, ಸರ್ಕಾರದ ಈ ಕ್ರಮಗಳು ಪದೇ ಪದೇ ನಡೆಯುತ್ತಿರುವ ಪ್ರಶ್ನೆಪತ್ರಿಕೆ ಸೋರಿಕೆಯ ಮೂಲ ಕಾರಣವನ್ನು ಪರಿಹರಿಸುವುದಿಲ್ಲ ಎಂದು ಹೇಳಿದರು.

“ಒಂದೂವರೆ ತಿಂಗಳ ಪ್ರತಿಭಟನೆಯ ನಂತರ ಪ್ರಧಾನಿಯವರು ಅಂತಿಮವಾಗಿ ಈ ವಿಷಯವನ್ನು ಗಮನಕ್ಕೆ ತೆಗೆದುಕೊಂಡಿರುವುದು ಒಳ್ಳೆಯದು,” ಎಂದು ಹೇಳಿದ ರಂಕಾ, ಪ್ರಶ್ನೆಪತ್ರಿಕೆ ಸೋರಿಕೆಯಾದ ನಂತರ ಅಪರಾಧಿಗಳಿಗೆ ಶಿಕ್ಷೆ ವಿಧಿಸುವುದರಿಂದ ಈ ದೊಡ್ಡ ಸಮಸ್ಯೆಗೆ ಪರಿಹಾರ ಸಿಗುವುದಿಲ್ಲ ಎಂದು ಪ್ರತಿಪಾದಿಸಿದರು.

“ಅಸಲಿಗೆ ಪ್ರಶ್ನೆಪತ್ರಿಕೆ ಸೋರಿಕೆ ಏಕೆ ಸಂಭವಿಸುತ್ತಿದೆ ಎಂಬುದೇ ನಿಜವಾದ ಪ್ರಶ್ನೆ. ವ್ಯವಸ್ಥೆಯನ್ನು ನಡೆಸುತ್ತಿರುವವರು ಹೊಣೆಗಾರಿಕೆಯನ್ನೂ ಹೊಂದಿಲ್ಲ ಹಾಗೂ ಸಮರ್ಥರೂ ಅಲ್ಲದಿರುವುದರಿಂದಲೇ ಈ ಸಮಸ್ಯೆ ಪದೇ ಪದೇ ಉಂಟಾಗುತ್ತಿದೆ,” ಎಂದು ಅವರು ಹೇಳಿದರು.

ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವವರೆಗೂ ಪ್ರತಿಭಟನೆ ಮುಂದುವರಿಯಲಿದೆ ಎಂದು ರಂಕಾ ಪುನರುಚ್ಚರಿಸಿದರು. “ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡುವವರೆಗೂ ನಾವು ಈ ಸ್ಥಳವನ್ನು ಬಿಟ್ಟು ಹೋಗುವುದಿಲ್ಲ,” ಎಂದು ಅವರು ಹೇಳಿದರು.

More articles

Latest article

Most read