ನಾಲ್ಕು ರಾಜ್ಯಗಳಲ್ಲಿ ಗುರುತಿನ ಚೀಟಿ ಹೊಂದಿರುವ ಆರೋಪ : ನಟ ಪ್ರಕಾಶ್‌ ರಾಜ್‌ಗೆ ಜಾಮೀನು

ಬೆಂಗಳೂರು  : ಒಂದಕ್ಕಿಂತ ಹೆಚ್ಚು ರಾಜ್ಯಗಳಲ್ಲಿ ಅಕ್ರಮವಾಗಿ ಮತದಾರರ ಗುರುತಿನ ಚೀಟಿ ಹೊಂದಿದ್ದಾರೆಂಬ ಆರೋಪ ಪ್ರಕರಣದಲ್ಲಿ ವಿಚಾರಣೆ ನಡೆಸಿದ ಕೋರ್ಟ್ ಪ್ರಕಾಶ್‌ ರಾಜ್‌ಗೆ  ಎಸಿಜೆಎಂ ಕೋರ್ಟ್ ಜಾಮೀನು ಮಂಜೂರು ಮಾಡಿದೆ.
ನಟ ಪ್ರಕಾಶ್‌ ರಾಜ್‌, ತಮಗೆ ವಾರಂಟ್ ಬಂದಿಲ್ಲ. ಮಾಧ್ಯಮಗಳಲ್ಲಿ ವರದಿ ನೋಡಿ ಕೋರ್ಟ್ ಗೆ ಬಂದಿದ್ದಾರೆ ಎಂದು ನಟನ ಪರ ವಕೀಲರು ವಾದ ಮಾಡಿದ್ದಾರೆ.  ಈ ಪ್ರಕರಣ ಪ್ರಶ್ನಿಸಿ ಹೈಕೋರ್ಟ್ ಗೆ ಪ್ರಕಾಶ್ ರಾಜ್ ಅರ್ಜಿ ಸಲ್ಲಿಸಿದ್ದಾರೆ. 

ತಮಿಳುನಾಡಿನ ವೋಟರ್ ಐಡಿ ಡಿಲೀಟ್ ಮಾಡಲಾಗಿದೆ, ಹೈಕೋರ್ಟ್ ನಲ್ಲಿ ಸಲ್ಲಿಸಿರೋ ಅರ್ಜಿ ಇನ್ನೂ ವಿಚಾರಣೆಗೆ ಬಂದಿಲ್ಲ. 48ನೇ ಎಸಿಜೆಎಂ ಕೋರ್ಟ್ ನಲ್ಲಿ ಪ್ರಕಾಶ್ ರಾಜ್ ಪರ ವಕೀಲರ ವಾದ. ಪ್ರಕಾಶ ರಾಜ್ ಪರ ವಕೀಲರ ಹೇಳಿಕೆ ದಾಖಲಿಸಿಕೊಂಡು, ನಾಲ್ಕು ಸಾವಿರ ರೂಪಾಯಿ ಶ್ಯೂರಿಟಿ ನೀಡುವಂತೆ ಷರತ್ತು ವಿಧಿಸಿ ನ್ಯಾಯಾಲಯ ಜಾಮೀನು ನೀಡಿದೆ. 

ನಟ ಪ್ರಕಾಶ್ ರಾಜ್ ವಿರುದ್ಧ ನಾಲ್ಕು ವೋಟರ್ ಐಡಿ ಹೊಂದಿರುವ ಆರೋಪ ಕೇಳಿಬಂದಿತ್ತು. ಬೆಂಗಳೂರಿನ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ನಟನ ವಿರುದ್ಧ ಜಾಮೀನು ರಹಿತ ವಾರಂಟ್ ಜಾರಿ ಮಾಡಿತ್ತು. ವಾರಂಟ್ ರೀಕಾಲ್ ಮಾಡಿಸಲು ನ್ಯಾಯಾಲಯಕ್ಕೆ ಖುದ್ದು ಹಾಜರಾಗಿದ್ದರು.

More articles

Latest article

Most read