ಚಿತ್ತೂರು : ನೆರೆಯ ಆಂಧ್ರಪ್ರದೇಶ ಚಿತ್ತೂರು ಜಿಲ್ಲೆ ವಿ ಕೋಟ ಪಟ್ಟಣದಲ್ಲಿ ಪತ್ರಕರ್ತನೊರ್ವನ ಭೀಕರ ಹತ್ಯೆಯಾಗಿದೆ.
ಕೋಲಾರ ಜಿಲ್ಲೆಯ ಗಡಿಯಲ್ಲಿರುವ ವಿ.ಕೋಟ ಪಟ್ಟಣದಲ್ಲಿ ಆಂಧ್ರಪ್ರದೇಶದ ಪ್ರಮುಖ ದಿನಪತ್ರಿಕೆ “ಆಂದ್ರಜ್ಯೋತಿ” ಪತ್ರಿಕೆಯಲ್ಲಿ ವರದಿಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದ ಜಗನ್ ಮೋಹನ್ ರೆಡ್ಡಿ ಹತ್ಯೆಯಾದ ಪತ್ರಕರ್ತ.
ಮುಂಜಾನೆ ತಮ್ಮ ಸಹವರ್ತಿ ಪತ್ರಕರ್ತರೊಂದಿಗೆ ನಡೆದುಕೊಂಡು ಹೋಗುತ್ತಿದ್ದಾಗ ಜಗನಮೋಹನ್ ರೆಡ್ಡಿಯನ್ನು ಅಪರಿಚಿತ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆ ಮಾಡಿದ್ದಾರೆ. ಸ್ಥಳೀಯ ಪತ್ರಕರ್ತರು ಹತ್ಯೆ ಆರೋಪಿಯನ್ನು ಬಂಧಿಸುವಂತೆ ಒತ್ತಾಯಿಸಿದ್ದಾರೆ.
ಘಟನಾ ಸ್ಥಳಕ್ಕೆ ಸ್ಥಳಕ್ಕೆ ಚಿತ್ತೂರು ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ತುಷಾರ್ ದುಡಿ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು ಪ್ರಕರಣ ದಾಖಲಿಸಿ ಕೊಂಡಿರುವ ವಿಕೋಟಾ ಪೊಲೀಸರು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.

