ರಷ್ಯಾ ವಿಮಾನ ಪತನ : 29 ಮಂದಿ ಸಾವು

ರಷ್ಯಾ :  ರಷ್ಯಾದ ಮಿಲಿಟರಿ ವಿಮಾನವೊಂದು ಬುಧವಾರ ಕ್ರೈಮಿಯಾದಲ್ಲಿ ಪತನಗೊಂಡು, ಅದರಲ್ಲಿದ್ದ 29 ಜನರು ಸಾವನ್ನಪ್ಪಿದ್ದಾರೆ ಎಂದು ರಷ್ಯಾ ದೇಶದ ರಕ್ಷಣಾ ಸಚಿವಾಲಯ ತಿಳಿಸಿದೆ.

ರಷ್ಯಾದ ಸುದ್ದಿ ಸಂಸ್ಥೆ ಟಾಸ್ ಪ್ರಕಾರ, ವಾಡಿಕೆಯ ಹಾರಾಟದ ಸಮಯದಲ್ಲಿ ವಿಮಾನವು, ಅಧಿಕಾರಿಗಳೊಂದಿಗೆ ಸಂಪರ್ಕ ಕಳೆದುಕೊಂಡಿದೆ. ನಂತರ ಆನ್ -26 ವಿಮಾನದ ಅವಶೇಷಗಳು ಕ್ರೈಮಿಯಾದಲ್ಲಿ ಪತ್ತೆಯಾಗಿವೆ ಎಂದು ತಿಳಿಸಿದೆ.

ತಾಂತ್ರಿಕ ದೋಷದಿಂದಾಗಿ ವಿಮಾನವು ನಿಯಂತ್ರಣ ಕಳೆದುಕೊಂಡು ಬಂಡೆಗೆ ಡಿಕ್ಕಿ ಹೊಡೆದಿದೆ. ವಿಮಾನ ಅಪಘಾತದಲ್ಲಿ ಆರು ಸಿಬ್ಬಂದಿ ಮತ್ತು 23 ಪ್ರಯಾಣಿಕರು ಸಾವನ್ನಪ್ಪಿದ್ದಾರೆ.

ಮಂಗಳವಾರ ಸ್ಥಳೀಯ ಸಮಯ 18:00 ರ ಸುಮಾರಿಗೆ ವಿಮಾನದೊಂದಿಗಿನ ಸಂಪರ್ಕ ಕಡಿತಗೊಂಡಿದೆ ಎಂದು ಟಾಸ್ ವರದಿ ಮಾಡಿದೆ. ನಂತರ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯ ನಂತರ ಅವಶೇಷಗಳನ್ನು ಪತ್ತೆಹಚ್ಚಲಾಯಿತು.

More articles

Latest article

Most read