ಖಾಸಗಿ ಸ್ವಾಮ್ಯದ ಬಂಕ್‌ಗಳಲ್ಲಿ ಪೆಟ್ರೋಲ್‌, ಡಿಸೇಲ್‌ ಬೆಲೆ ಹೆಚ್ಚಳ

ಬೆಂಗಳೂರು :  ಖಾಸಗಿ ಸ್ವಾಮ್ಯದ ಶೆಲ್‌ ಪೆಟ್ರೋಲ್‌ ಬಂಕ್‌ ತನ್ನ ಸಾಮಾನ್ಯ ಮತ್ತು  ಪ್ರೀಮಿಯಂ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಹೆಚ್ಚಿಸಿದೆ. 15 ದಿನಗಳಲ್ಲಿ ಮೂರನೇ ಬಾರಿಗೆ ಹೆಚ್ಚಿಸಲಾಗಿದೆ.

ಪ್ರೀಮಿಯಂ ಜೊತೆಗೆ ಸಾಮಾನ್ಯ ಪೆಟ್ರೋಲ್, ಡೀಸೆಲ್ ದರವೂ ಏರಿಕೆಯಾಗಿದೆ. ಸಾಮಾನ್ಯ ಪೆಟ್ರೋಲ್ ದರ ಮೊದಲು 106 ರೂ.ನಿಂದ 108.50 ರೂ. ಆಗಿತ್ತು. ನಾಲ್ಕು ದಿನದ ಹಿಂದೆ 112 ರೂ.ಗೆ ಏರಿಕೆ ಆಗಿತ್ತು. ಈಗ 119.8 ರೂ.ಗೆ ಏರಿಕೆಯಾಗಿದೆ. ಸಾಮಾನ್ಯ ಪೆಟ್ರೋಲ್ ದರ ಲೀಟರ್‌ಗೆ 7 ರೂ.ನಷ್ಟು ಹೆಚ್ಚಳವಾಗಿದೆ. ಪ್ರೀಮಿಯಂ ಪೆಟ್ರೋಲ್ ದರ ಲೀಟರ್‌ಗೆ 122.42 ರೂ.ನಿಂದ 129.8ಕ್ಕೆ ಏರಿಕೆಯಾಗಿದೆ.

ಸಾಮಾನ್ಯ ಡೀಸೆಲ್ 91 ರೂ.ನಿಂದ 93.50 ರೂ.ಗೆ ಏರಿಕೆ ಆಗಿತ್ತು. ನಾಲ್ಕು ದಿನದ ಹಿಂದೆ ಲೀಟರ್ ಡಿಸೇಲ್ 98 ರೂ. ಆಗಿತ್ತು. ಇಂದು 123ಕ್ಕೆ ಏರಿಕೆಯಾಗಿದೆ. ಡೀಸೆಲ್ ದರ 25 ರೂ. ಹೆಚ್ಚಳವಾಗಿದೆ. ಪ್ರೀಮಿಯಂ ಡೀಸೆಲ್ ಪ್ರತಿ ಲೀಟರ್‌ಗೆ 108.50 ರಿಂದ 133ಕ್ಕೆ ಏರಿಕೆಯಾಗಿದೆ.

ದೆಹಲಿಯಲ್ಲಿ ಭಾರೀ ಏರಿಕೆ
ನವದೆಹಲಿಯಲ್ಲಿ ಪ್ರೀಮಿಯಂ ಪೆಟ್ರೋಲ್, ಡೀಸೆಲ್ ಬೆಲೆಗಳನ್ನು ಹೆಚ್ಚಿಸಲಾಗಿದೆ ದೆಹಲಿಯಲ್ಲಿ ಈಗ XP100 ಪೆಟ್ರೋಲ್ ಲೀಟರ್‌ಗೆ 160 ರೂ. ಇದು ಮೊದಲು 149 ರೂ. ಇತ್ತು. ಎಕ್ಸ್‌ಟ್ರಾ ಗ್ರೀನ್ ಪ್ರೀಮಿಯಂ ಡೀಸೆಲ್ ಈಗ ಲೀಟರ್‌ಗೆ 92.99 ರೂ. ಇದು ಮೊದಲು 91.49 ರೂ. XP100 100-ಆಕ್ಟೇನ್ ಪೆಟ್ರೋಲ್ ಆಗಿದೆ. ಉತ್ತಮ ಎಂಜಿನ್ ಕಾರ್ಯಕ್ಷಮತೆಗಾಗಿ ಇದು ಹೈ-ಎಂಡ್ ಕಾರುಗಳು ಮತ್ತು ಸೂಪರ್‌ಬೈಕ್‌ಗಳಿಗೆ ಉದ್ದೇಶಿಸಲಾಗಿದೆ.

ಇಂಡಿಯನ್ ಆಯಿಲ್ ಬೆಲೆ ಏರಿಕೆಯ ಹಿಂದಿನ ಅಧಿಕೃತ ಕಾರಣವನ್ನು ನೀಡಿಲ್ಲ. ಮಧ್ಯಪ್ರಾಚ್ಯ ಸಂಘರ್ಷ ಮತ್ತು ಪೂರೈಕೆ ಅಡಚಣೆಗಳಿಂದಾಗಿ ಜಾಗತಿಕ ತೈಲ ಮತ್ತು ಇಂಧನ ಬೆಲೆಗಳು ಏರಿಕೆಯಾಗಿರುವುದರಿಂದ ಇದು ಬಂದಿದೆ.

ಇದಕ್ಕೂ ಮೊದಲು, ಮಾರ್ಚ್ 27 ರಂದು, ಸರ್ಕಾರವು ನಿಯಮಿತ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಲೀಟರ್‌ಗೆ 10 ರೂ.ಗಳಷ್ಟು ಕಡಿತಗೊಳಿಸಿತ್ತು. ಜಾಗತಿಕ ವೆಚ್ಚಗಳು ಹೆಚ್ಚುತ್ತಿರುವ ಹೊರತಾಗಿಯೂ ತೈಲ ಕಂಪನಿಗಳು ಸಾಮಾನ್ಯ ಪಂಪ್ ಬೆಲೆಗಳನ್ನು ಸ್ಥಿರವಾಗಿಡಲು ಇದು ಸಹಾಯ ಮಾಡಿತ್ತು. 

More articles

Latest article

Most read