ಶೇ.10ರಷ್ಟು ಆಮದು ಸುಂಕ ಜಾರಿ: ಟ್ರಂಪ್

ವಾಷಿಂಗ್ಟನ್ :  ಹಲವು ದೇಶಗಳ ಆಮದು ಸರಕುಗಳ ಮೇಲೆ ವ್ಯಾಪಕ ಸುಂಕ ಹೇರಿಕೆ ಮಾಡಿದ್ದನ್ನು ಅಮೆರಿಕಾ ಸುಪ್ರೀಂ ಕೋರ್ಟ್ ರದ್ದು ಮಾಡಿದ್ದ ಬೆನ್ನಲ್ಲಿಯೇ, ಮುಂದಿನ ಐದು ತಿಂಗಳವರೆಗೆ ಶೇ.10 ರಷ್ಟು ಸುಂಕ ಜಾರಿಯಲ್ಲಿರಲಿದೆ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಹೇಳಿದ್ದಾರೆ.

ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮಿತಿ ಮೀರಿ ವಿಧಿಸಿದ್ದ ಸುಂಕಗಳಲ್ಲಿ ಕೆಲವನ್ನು ಅಮೆರಿಕಾದ ಸುಪ್ರೀಂ ಕೋರ್ಟ್ ರದ್ದುಗೊಳಿಸಿದ್ದಲ್ಲದೆ, ವಿಶ್ವದ ಬಹುತೇಕ ದೇಶಗಳ ಮೇಲೆ ಹೊಸ ಸುಂಕ ಹೇರುವಾಗ ಅಸ್ತಿತ್ವದಲ್ಲಿರುವ ಅಧಿಕಾರ ವ್ಯಾಪ್ತಿಯನ್ನು ಟ್ರಂಪ್ ಅವರು ಮೀರಿದ್ದಾರೆ ಎಂದು ಕೋರ್ಟ್ ಟೀಕಿಸಿತ್ತು. ಅಲ್ಲದೆ, ಟ್ರಂಪ್ ಅವರು ಹಲವು ದೇಶಗಳ ಆಮದು ಸರಕುಗಳ ಮೇಲೆ ಹೇರಿದ್ದ ವ್ಯಾಪಕ ಸುಂಕಗಳನ್ನು ರದ್ದು ಮಾಡಿ ಶುಕ್ರವಾರ ಅಮೆರಿಕದ ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು.

ಈ ತೀರ್ಪಿನ ಬೆನ್ನಲ್ಲೇ, ಟ್ರಂಪ್ 1974ರ ವ್ಯಾಪಾರ ಕಾಯ್ದೆಯ ಪ್ರಕಾರ ಎಲ್ಲ ದೇಶಗಳ ಮೇಲೆ ಶೇ.10 ರಷ್ಟು ಸುಂಕವನ್ನು ವಿಧಿಸುವ ಕಾರ್ಯಕಾರಿ ಆದೇಶಕ್ಕೆ ಸಹಿ ಹಾಕಿದ್ದಾರೆ. ಅಲ್ಲದೇ, ಸದ್ಯ ವಿವಿಧ ದೇಶಗಳ ಮೇಲೆ ಅಸ್ತಿತ್ವದಲ್ಲಿರುವ ಸುಂಕಗಳನ್ನು ರದ್ದುಗೊಳಿಸುವ ಆದೇಶಕ್ಕೂ ಸಹಿ ಹಾಕಿದ್ದಾರೆ. ಫೆಬ್ರುವರಿ 24ರಿಂದ ಈ ಆದೇಶ ಜಾರಿಗೆ ಬರಲಿದ್ದು, ಇದರೊಂದಿಗೆ ಭಾರತದಿಂದ ಆಮದು ಮಾಡಿಕೊಳ್ಳುವ ಸರಕುಗಳು ಶೇ 10ರಷ್ಟು ಕಡಿಮೆ ಪ್ರತಿಸುಂಕ ಎದುರಿಸಬೇಕಾಗುತ್ತದೆ. ಸದ್ಯ, ಈವರೆಗೆ ಇದು ಶೇ 18ರಷ್ಟಿತ್ತು.

More articles

Latest article

Most read