ಅಮೃತಾಂಜನ್ ಎಲ್ಲರಿಗೂ ನೆನಪಿದ್ದೇ ಇರುತ್ತೆ ಅಲ್ವಾ. ಶಾರ್ಟ್ ಮೂವಿಯಲ್ಲಿಯೇ ಎಷ್ಟು ನಕ್ಕಿದ್ದು. ಒಮ್ಮೆ ನೋಡಿದ್ದವರು ಮತ್ತೆ ಮತ್ತೆ ನೋಡುವಂತೆ ಮಾಡಿದ್ದು ಅಮೃತಾಂಜನ್. ಈಗ ಅದೇ ತಂಡ ಜೊತೆಯಾಗಿ ಶಾರ್ಟ್ ಮೂವಿಯನ್ನ ಬೆಳ್ಳಿ ತೆರೆಮೇಲೆ ತಂದಿದ್ದಾರೆ. ಇಂದಿನಿಂದ ರಾಜ್ಯಾದ್ಯಂತ ರಿಲೀಸ್ ಆಗಿದೆ. ಇದರ ನಡುವೆ ಇಡೀ ಸಿನಿಮಾ ತಂಡ ಖುಷಿ ಪಡುವಂತ ಘಟನೆಯೊಂದು ಸಂಭವಿಸಿದೆ. ಅದು ಯಶ್ ಅವರ ಕಡೆಯಿಂದ.
ಯಶ್ ಪ್ಯಾನ್ ಇಂಡಿಯಾ ಸ್ಟಾರ್. ಬರೀ ಸ್ಟಾರ್ ಅಲ್ಲ ಎಲ್ಲಾ ಇಂಡಸ್ಟ್ರೀ ಇಷ್ಟಪಡುವ, ಬೇಡಿಕೆ ಇರುವ, ಎಲ್ಲಾ ಭಾಷೆಯ ಅಭಿಮಾನಿಗಳು ಹೊತ್ತು ಮೆರೆಸುವಂತ ಹೀರೋ. ಟಾಕ್ಸಿಕ್ ಸಿನಿಮಾ ಮೂಲಕ ಮತ್ತೊಂದು ರೆಕಾರ್ಡ್ ಮಾಡೋದಕ್ಕೆ ರೆಡಿಯಾಗ್ತಿದ್ದಾರೆ. ರಾಮಾಯಣ ಶೆಡ್ಯೂಲ್, ಟಾಕ್ಸಿಕ್ ಬ್ಯುಸಿಯ ನಡುವೆ ಈ ಹೊಸ ತಂಡವನ್ನ ಹಾರೈಸಿದ್ದಾರೆ ಅಂದ್ರೆ ಚಿತ್ರತಂಡಕ್ಕೆ ಆನೆ ಬಲ ಬಂದಷ್ಟು ಸಂತಸವಾಗದೆ ಇರುತ್ತಾ ಹೇಳಿ. ಹೌದು ರಾಕಿ ಬಾಯ್ ತಮ್ಮ ಮಿಲಿಯನ್ ಗಟ್ಟಲೆ ಫಾಲೋವರ್ಸ್ ಇರುವಂತ ಸೋಷಿಯಲ್ ಮೀಡಿಯಾದಲ್ಲಿ ಚಿತ್ರತಂಡದವರನ್ನ ಟ್ಯಾಗ್ ಮಾಡಿ ವಿಶ್ ಮಾಡಿದ್ದಾರೆ.

`ನಿಮ್ಮ ಕೆಲಸವನ್ನು ನಾನು ಕೂಡ ಆನಂದಿಸಿದ್ದೇನೆ. ನೀವೂಗಳು ದೊಡ್ಡ ಕನಸು ಕಾಣುತ್ತಿರುವುದು, ಅದನ್ನು ಈಡೇರಿಸಿಕೊಳ್ಳುವುದಕ್ಕೆ ಪ್ರಯತ್ನ ಪಡುತ್ತಿರುವುದನ್ನು ನೋಡುವುದಕ್ಕೇನೆ ಸಂತೋಷವಾಗುತ್ತದೆ. ಒಂದು ಕಂಟೆಂಟ್ ರಚಿಸಿ, ಅದನ್ನ ಸಿನಿಮಾದ ತನಕ ತಂದಿರುವ ನಿಮ್ಮ ಪ್ರಯಾಣವೇ ಎಲ್ಲವನ್ನು ಹೇಳುತ್ತದೆ. ನಿಮ್ಮ ಹಾದಿ ಇನ್ನಷ್ಟು ಕನಸು ಕಾಣುವವರಿಗೆ ಸ್ಪೂರ್ತಿಯಾಗುತ್ತದೆ. ಅಮೃತಾಂಜನ್ ತಂಡಕ್ಕೆ ಶುಭವಾಗಲಿ ಎಂದು ಹಾರೈಸಿದ್ದಾರೆ.
ಜ್ಯೋತಿರಾವ್ ಮೋಹಿತ್ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ. ಉಳಿದಂತೆ ಗೌರವ್ ಶೆಟ್ಟಿ, ಶ್ರೀಭವ್ಯಾ, ಕಾರ್ತಿಕ್ ರೆಡ್ಡಿ, ಸುಧಾಕರ್, ಪಾಯಲ್ ಚೆಂಗಪ್ಪ ಇದರಲ್ಲಿ ನಟಿಸಿದ್ದು, ರಾಘವೇಂದ್ರ ಸಂಗೀತ ಸಂಯೋಜನೆಯ ಮೂರು ಹಾಡುಗಳಿವೆ. ಸುಮಂತ್ ಆಚಾರ್ಯ ಕ್ಯಾಮೆರಾ ವರ್ಕ್ ಮಾಡಿದ್ದಾರೆ.


