ಹುಬ್ಬಳ್ಳಿಯಲ್ಲಿ ಕೊಳೆಗೇರಿ ಅಭಿವೃದ್ಧಿ ಮಂಡಳಿ ನಿರ್ಮಿಸಿರುವ 42,345 ಮನೆಗಳ ಲೋಕಾರ್ಪಣೆ, ಹಕ್ಕುಪತ್ರ ವಿತರಣೆ

ಹುಬ್ಬಳ್ಳಿ: ಪ್ರಧಾನಮಂತ್ರಿ ಆವಾಸ್ ಯೋಜನೆ ಮತ್ತು ಮುಖ್ಯಮಂತ್ರಿ ವಿಶೇಷ ಅನುದಾನದಡಿ ವಸತಿ ಇಲಾಖೆ ಮತ್ತು ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿಯು ನಿರ್ಮಿಸಿರುವ ಒಟ್ಟು 42,345 ಮನೆಗಳ ಲೋಕಾರ್ಪಣೆ ಮತ್ತು ಹಕ್ಕುಪತ್ರಗಳ ವಿತರಣಾ ಸಮಾರಂಭ ಇಲ್ಲಿನ ಮಂಟೂರು ರಸ್ತೆಯಲ್ಲಿ ನಡೆಯಿತು.

ಬೆಂಗಳೂರಿನಲ್ಲಿ 5,731 ಮನೆಗಳು ಧಾರವಾಡ ಜಿಲ್ಲೆಯಲ್ಲಿ 2,169 ಮನೆಗಳು, ಸೇರಿ ರಾಜ್ಯದ ವಿವಿಧ ಭಾಗಗಳಲ್ಲಿ ಒಟ್ಟು 42,345 ಮನೆಗಳನ್ನು ನಿರ್ಮಿಸಲಾಗಿದೆ. ಏಕಕಾಲಕ್ಕೆ ವರ್ಚ್ಯುಯಲ್ ಮೂಲಕ ಮುಖ್ಯಮಂತ್ರಿಯವರು ಲೋಕಾರ್ಪಣೆ ಮಾಡಿದರು. ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಮನೆಗಳ ಹಕ್ಕುಪತ್ರಗಳನ್ನು ಸಾಂಕೇತಿಕವಾಗಿ ಫಲಾನುಭವಿಗಳಿಗೆ ವಿತರಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಿಲ್ಲಾಡಳಿತದಿಂದ ಗೌರವ ವಂದನೆ ಸ್ವೀಕರಿಸಿದರು. ಇದೇ ವೇಳೆ ಕಾರ್ಯಕ್ರಮಕ್ಕೆ ಆಗಮಿಸಿದ ಎಐಸಿಸಿ ಅಧ್ಯಕ್ಷರೂ, ರಾಜ್ಯಸಭೆಯ ಪ್ರತಿಪಕ್ಷದ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಅವರನ್ನು ಹುಬ್ಬಳ್ಳಿ ಹೋಟೆಲಿನಲ್ಲಿ ಭೇಟಿಯಾಗಿ ಕುಶಲೋಪರಿ ವಿಚಾರಿಸಿದರು. ಸಚಿವರಾದ ಕೆ.ಹೆಚ್.ಮುನಿಯಪ್ಪ, ಹೆಚ್.ಸಿ.ಮಹದೇವಪ್ಪ, ಜಮೀರ್ ಅಹಮದ್ ಖಾನ್, ಮಾಜಿ ಸಚಿವರಾದ ನಾಗೇಂದ್ರ ಸೇರಿ ಹಲವು ಪ್ರಮುಖರು ಉಪಸ್ಥಿತರಿದ್ದರು.

ಹುಬ್ಬಳ್ಳಿ ನಗರದಲ್ಲಿ ಮನೆ ಪಡೆದ ಕೆಲವು ಫಲಾನುಭವಿಗಳ ಅನಿಸಿಕೆಗಳು ಹೀಗಿವೆ:

ಹುಬ್ಬಳ್ಳಿಯ ಮಂಟೂರ ರಸ್ತೆ ನಿವಾಸಿ ಸರೋಜಾದೇವಿ ನಾಗೇಂದ್ರಸಾ ಪೂಜಾರಿ ಅವರು ಪ್ರತಿಕ್ರಿಯಿಸಿ, ನಾವು ಈ ಮನೆಗಾಗಿ ಬರೋಬ್ಬರಿ 13 ವರ್ಷಗಳ ಹಿಂದೆ ಅರ್ಜಿಯನ್ನು ಸಲ್ಲಿಸಿದ್ದೆವು. ಅಂದಿನಿಂದ ಇಂದಿನವರೆಗೆ ನಮ್ಮ ಸ್ವಂತ ಮನೆಯ ಕನಸು ಕೈಗೂಡಬಹುದು ಎಂಬ ನಿರೀಕ್ಷೆಯಲ್ಲಿದ್ದೆವು, ಯೋಜನೆಯ ನಿಯಮದಂತೆ ಅಂದೇ 78 ಸಾವಿರ ರೂಪಾಯಿಗಳನ್ನು ಕಂತಿನ ರೂಪದಲ್ಲಿ ಪಾವತಿಸಲಾಗಿತ್ತು. ಈಗ ಮನೆ ಕೈಸೇರುತ್ತಿರುವುದು ನೆಮ್ಮದಿ ತಂದಿದೆ ಎಂದು ಅವರು ತಿಳಿಸಿದರು. ಇಷ್ಟು ವರ್ಷಗಳ ನಂತರ ನಮ್ಮ ಹಕ್ಕು ನಮಗೆ ಸಿಕ್ಕಿದೆ. ಹೊಸ ಮನೆಯನ್ನು ಹಸ್ತಾಂತರಿಸುತ್ತಿರುವ ಸರ್ಕಾರಕ್ಕೆ ನಾವು ಹೃದಯಪೂರ್ವಕ ಧನ್ಯವಾದಗಳನ್ನು ಹೇಳುತ್ತೇವೆ ಎಂದರು.

ಮೋದಿನಸಾಬ ಜಂಡಿರಸಾಬ ಕಾಗದಗರ ಅವರು, ದೈಹಿಕ ಅಶಕ್ತತೆಯಿಂದಾಗಿ ನಮಗೆ ಬೇರೆಯವರಂತೆ ದುಡಿಯಲು ಆಗುವುದಿಲ್ಲ. ಸ್ವಂತ ಮನೆ ಎಂಬುದು ನಮಗೆ ಕನಸಾಗಿತ್ತು. ನಮ್ಮ ಕಷ್ಟವನ್ನು ಅರಿತ ಸರ್ಕಾರವು ನಮಗೆ ಮನೆ ಮಂಜೂರು ಮಾಡಿದೆ. ಈಗ ನಾವ ನೆಮ್ಮದಿಯಿಂದ ತಲೆ ಚಾಚಲು ಒಂದು ಆಸರೆ ಸಿಕ್ಕಿದೆ ಎಂದು ಹೇಳಿದರು.

ಸುಧಾ ಸೀತಾರಾಮ  ಸರ್ವದೇ ಅವರು, ಇಷ್ಟು ದಿನ ಬಾಡಿಗೆ ಕಟ್ಟಲು ಸಾಧ್ಯವಾಗದೆ ನಾವು ಪಡಬಾರದ ಕಷ್ಟ ಪಟ್ಟಿದ್ದೇವೆ. ಸಂಸಾರ ನಡೆಸುವುದು ಒಂದು ದೊಡ್ಡ ಸವಾಲಾಗಿತ್ತು. ಅಂತಹ ಸಂದರ್ಭದಲ್ಲಿ ಸ್ವಂತ ಮನೆ ಕಟ್ಟಿಕೊಳ್ಳುವುದು ನಮಗೆ ಕೇವಲ ಕನಸಿನ ಮಾತಾಗಿತ್ತು. ಆದರೆ ಇಂದು ನಮಗೆ ಆಸರೆಯಾಗಿ ನಿಂತು ಮನೆ ಕಟ್ಟಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು ಎಂದರು.

ಕಮಲವ್ವ ಭರಮಪ್ಪ ಚಲವಾದಿ ಪ್ರತಿಕ್ರಿಯಿಸಿ, ಬಿಸಿಲಿನಲ್ಲಿ ಬೆಂದು ಸುಸ್ತಾದವನಿಗೆ ತಂಪಾದ ನೆರಳು ಸಿಕ್ಕಂತಾಗಿದ ಇವು ಸರ್ಕಾರದಿಂದ ಮನೆ ಪಡೆದ ಫಲಾನುಭವಿಯೊಬ್ಬರ ಮನದಾಳದ ಮಾತುಗಳು. ದೀರ್ಘಕಾಲದ ಕಾಯುವಿಕೆಯ ನಂತರ ತಮಗೆ ಮಂಜೂರಾದ ಮನೆಯನ್ನು ಕಂಡು ಹರ್ಷ ವ್ಯಕ್ತಪಡಿಸಿದ ಜನರು, ಸರ್ಕಾರದ ಈ ಜನಪರ ಕಾರ್ಯಕ್ಕೆ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸಿದ್ದಾರೆ. ಬಿಸಿಲಿನಲ್ಲಿ ಅಲೆಯುವವರಿಗೆ ನೆರಳು ಸಿಕ್ಕರೆ ಎಷ್ಟು ಖುಷಿಯಾಗುತ್ತದೆಯೋ, ಅಷ್ಟೇ ಸಂತೋಷ ನಮಗೆ ಈ ಮನೆ ಸಿಕ್ಕಿದ್ದಕ್ಕೆ ಆಗಿದೆ. ನಮಗೆ ಆಸರೆ ನೀಡಿದ ಸರ್ಕಾರಕ್ಕೆ ಧನ್ಯವಾದಗಳು. ಬಡ ಮತ್ತು ಮಧ್ಯಮ ವರ್ಗದ ಜನರ ಸ್ವಂತ ಮನೆಯ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ಸರ್ಕಾರವು ಇತ್ತೀಚಿನ ದಿನಗಳಲ್ಲಿ ವಸತಿ ಯೋಜನೆಗಳಿಗೆ ಹೆಚ್ಚಿನ ವೇಗ ನೀಡುತ್ತಿರುವುದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

More articles

Latest article

Most read