ಸೈಬರ್‌ ಕ್ರೈಂ ನಡೆದ 1 ಗಂಟೆಯೊಳಗೆ ದೂರು ನೀಡಿದರೆ ಅಪರಾಧಿಗಳನ್ನು ಪತ್ತೆಹಚ್ಚಲು ಸಾಧ್ಯ: ಬೆಂಗಳೂರು ಪೊಲೀಸ್‌ ಆಯುಕ್ತ  ಸೀಮಂತ್‌ ಕುಮಾರ್‌ ಸಿಂಗ್

Most read

ಬೆಂಗಳೂರು ಸೈಬರ್‌ ಅಪರಾಧಗಳಿಗೆ ಒಳಗಾದವರು ಅಪರಾಧ ಸಂಭವಿಸಿದ ಒಂದು ಗಂಟೆಯೊಳಗೆ ದೂರು ನೀಡಿದರೆ ಅಪರಾಧ, ಅಪರಾಧಿಗಳನ್ನು ಪತ್ತೆಹಚ್ಚಲು ಸಾಧ್ಯ ಎಂದು ಬೆಂಗಳೂರು ನಗರ ಪೊಲೀಸ್‌‍ ಆಯುಕ್ತ ಸೀಮಂತ್‌ಕುಮಾರ್‌ ಸಿಂಗ್‌ ಹೇಳಿದ್ದಾರೆ.

ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಪರಾಧ ನಡೆದ ಒಂದು ಗಂಟೆಯನ್ನು ಗೋಲ್ಡನ್‌ ಅವರ್‌ ಎಂDU ಕರೆಯಲಾಗುತ್ತದೆ. ಆ ಅವಧಿಯೊಳಗೆ ಪೊಲೀಸರಿಗೆ ಮಾಹಿತಿ ನೀಡಿದರೆ ತಕ್ಷಣ ಅದನ್ನು ಪತ್ತೆಹಚ್ಚಲು ನೆರವಾಗುತ್ತದೆ ಎಂದು ಹೇಳಿದರು.

ಡಾ.ರೆಡ್ಡೀಸ್‌‍ ಲ್ಯಾಬೋರೇಟರೀಸ್‌‍ ಔಷಧಿ ಕಂಪನಿಯ ಇ-ಮೇಲ್‌ ಐಡಿಯನ್ನು ಬಳಸಿ ರೂ.2.16 ಕೋಟಿ ಹಣವನ್ನು ಗುಜರಾತ್‌ ರಾಜ್ಯದ ಅಹಮದಬಾದ್‌ ಮ್ಯೂಲ್‌ ಬ್ಯಾಂಕ್‌ ಖಾತೆಗೆ ವರ್ಗಾವಣೆ ಆಗಿರುವುದು ಪತ್ತೆಯಾಯಿತು. ಅಪರಾಧ ಸಂಭವಿಸಿದ 15 ನಿಮಿಷದೊಳಗೆ ದೂರುದಾರರು ಸಿಸಿಬಿ ಸೈಬರ್‌ ಕ್ರೈಂ ಪೊಲೀಸರಿಗೆ ಮಾಹಿತಿ ನೀಡಿದ್ದರು. ಕೂಡಲೇ ಪೊಲೀಸರು ಕಾರ್ಯಾಚರಣೆ ಕೈಗೊಂಡು ವರ್ಗಾವಣೆಯಾಗಿರುವ ಬ್ಯಾಂಕ್‌ ಖಾತೆಯ ವಿವರ ಪಡೆದು ಬ್ಯಾಂಕ್‌ ಅಧಿಕಾರಿಗಳನ್ನು ಸಂಪರ್ಕಿಸಿ ಹಣ ವರ್ಗಾವಣೆ ಆಗುವುದನ್ನು ತಪ್ಪಿಸಲಾಗಿದೆ. ಹಾಗೆ ಮಾಡಿದ್ದರಿಂದ ವಂಚಕರ ಖಾತೆಗೆ ಹಣ ಹೋಗದೆ ಉಳಿದಿದೆ ಎಂದು ಈ ಪ್ರಕರಣವನ್ನು ವಿವರಿಸಿದರು.

ಹಣ ಅಹಮದಾಬಾದ್‌ನ ಮಹಿಳೆಯೊಬ್ಬರ ಖಾತೆಗೆ ಹೋಗಿರುವುದನ್ನು ಪತ್ತೆ ಹಚ್ಚಲಾಗಿತ್ತು. ಆ ಮಹಿಳೆಯನ್ನು ಶೀಘ್ರದಲ್ಲಿ ಬಂಧಿಸಲಾಗುತ್ತದೆ. ವಿದೇಶದಲ್ಲಿ ಕುಳಿತು ವಂಚಕರು ಸೈಬರ್‌ ವಂಚನೆ ಮಾಡಿರುವುದು ಗೊತ್ತಾಗಿದೆ. ವಿದೇಶದಲ್ಲಿರುವ ಆರೋಪಿಗಳ ಬಂಧನಕ್ಕೂ ಕ್ರಮ ಕೈಗೊಳ್ಳುತ್ತೇವೆ ಎಂದರು.

More articles

Latest article