ಸ್ಮಶಾನಭೂಮಿ ಒತ್ತುವರಿ ಆರೋಪ:ಚರ್ಚೆಗೆ ಸಿದ್ಧ ಎಂದು ಸವಾಲು ಹಾಕಿದ ಸಚಿವ ಕೃಷ್ಣ ಬೈರೇಗೌಡ

Most read

ಬೆಳಗಾವಿ: ತಮ್ಮ ಮೇಲೆ ಕೇಳಿ ಬಂದಿರುವ ಸ್ಮಶಾನಭೂಮಿ ಒತ್ತುವರಿ ಆರೋಪ ಕುರಿತು ಸದನದಲ್ಲಿ ಚರ್ಚೆಗೆ ಸಿದ್ದ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ. ವಿಧಾನಸಭೆಯಲ್ಲಿ ಇಂದು ಶೂನ್ಯ ಚರ್ಚೆಯ ವೇಳೆ ಕಲಾಪ ನಡೆಯುತ್ತಿರುವಾಗ ಈ ವಿಷಯ ಪ್ರಸ್ತಾಪಿಸಿದ ಪ್ರತಿಪಕ್ಷ ನಾಯಕ ಆರ್. ಅಶೋಕ ಅವರು ಚರ್ಚೆಗೆ ಅವಕಾಶ ನೀಡುವಂತೆ ಸಭಾದ್ಯಕ್ಷರನ್ನು ಒತ್ತಾಯಿಸಿದರು.

ಆಗ ಮಧ್ಯಪ್ರವೇಶಿಸಿದ ಕೃಷ್ಣ ಬೈರೇಗೌಡ ಅವರು, ಅಧಿವೇಶನದ ಸಂದರ್ಭದಲ್ಲಿ ಸದನದ ಸದಸ್ಯರ ಬಗ್ಗೆ ಯಾವುದೇ ವೈಯಕ್ತಿಕ ವಿಚಾರ ಪ್ರಸ್ತಾಪ ಮಾಡಬೇಕಿದ್ದರೆ ನಿಯಮಾವಳಿಗಳನ್ನು ಪಾಲಿಸಬೇಕಿದೆ. ಒಂದು ವಾರ ಮುಂಚಿತವಾಗಿ ಸದಸ್ಯರಿಗೆ ನೋಟೀಸ್ ನೀಡಬೇಕು. ಆದರೆ, ಈ ವಿಷಯದಲ್ಲಿ ತುರ್ತು ಚರ್ಚೆಗೆ ಅವಕಾಶ ಕೇಳುತ್ತಿದ್ದಾರೆ. ಆದರೂ ನಾನು ಸದನದ ನನ್ನ ಹಕ್ಕನ್ನು ಬಿಟ್ಟುಕೊಟ್ಟು ಚರ್ಚೆಗೆ ಸಿದ್ಧನಿದ್ದೇನೆ. ಅವರ ಆರೋಪಗಳಿಗೆ ಉತ್ತರವನ್ನೂ ನೀಡುತ್ತೇನೆ ಎಂದರು.

ತಮ್ಮ ಪ್ರತಿಕ್ರಿಯೆ ನೀಡಿದ ಸಭಾಧ್ಯಕ್ಷ ಯು.ಟಿ. ಖಾದರ್ ಅವರು ಅನೇಕ ಮಸೂದೆಗಳು ಮಂಡನೆಗೆ ಬಾಕಿ ಉಳಿದಿವೆ. ಅವೆಲ್ಲವೂ ಪೂರ್ಣಗೊಂಡ ನಂತರ ಈ ಪ್ರಕರಣವನ್ನು ಕುರಿತು ಚರ್ಚಿಸಲು ಅವಕಾಶ ನೀಡುವುದಾಗಿ ಭರವಸೆ ನೀಡಿದರು.

More articles

Latest article