ಕೋಲಾರ:. ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಗೆ ಬರುವ ಇಲ್ಲಿನ ಜಿಲ್ಲಾಧಿಕಾರಿ ಕಚೇರಿಗೆ ಬಾಂಬ್ ಬೆದರಿಕೆಯ ಸಂದೇಶ ಬಂದಿದ್ದು,ಕೆಲಕಾಲ ಆತಂಕ ಮೂಡಿತ್ತು. ಜಿಲ್ಲಾಧಿಕಾರಿಗಳವರ ಕಚೇರಿಯ ಇ-ಮೇಲ್ ವಿಳಾಸಕ್ಕೆ ಬೆದರಿಕೆ ಸಂದೇಶ ಬಂದಿದ್ದು ಕಚೇರಿ ಸಿಬ್ಬಂದಿ ಮಧ್ಯಾಹ್ನ ಈ ಸಂದೇಶವನ್ನು ಗಮನಿಸಿದ್ದಾರೆ. ನಂತರ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಬಾಂಬ್ ನಿಷ್ಕ್ರಿಯ ದಳ ಹಾಗೂ ಶ್ವಾನದಳ ಇಡೀ ಕಚೇರಿಯನ್ನು ತಪಾಸಣೆ ಮಾಡಿದೆ. ಶೋಧ ಕಾರ್ಯ ನಡೆಯುವಾಗ ಸಿಬ್ಬಂದಿ ಮತ್ತು ಇತರ ನೌಕರರನ್ನು ಹೊರಗೆ ಕಳುಹಿಸಲಾಗಿತ್ತು. ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ

