13 ವರ್ಷದ ಬಾಲಕನಿಂದ ಆರೋಪಿಗೆ ಗುಂಡಿಕ್ಕುವ ಶಿಕ್ಷೆ : ತಾಲಿಬಾನ್‌ ಆಡಳಿತ ವೈಖರಿ

Most read

ಕಾಬೂಲ್ (ಅಫ್ಘಾನಿಸ್ತಾನ): ಒಂದೇ ಕುಟುಂಬದ 13 ಮಂದಿಯನ್ನು ಕೊಂದು ಹಾಕಿದ್ದ ಹಂತಕನನ್ನು ತಾಲಿಬಾನ್‌ ಆಡಳಿತ ಬಹಿರಂಗವಾಗಿ ಗುಂಡಿಟ್ಟು ಕೊಂದಿದೆ. ವಿಶೇಷ ಎಂದರೆ 13 ಮಂದಿ ಕುಟುಂಬಕ್ಕೆ ಸೇರಿದ 13 ವರ್ಷದ ಬಾಲಕನಿಂದ ಅಪರಾಧಿಯನ್ನು ಹತ್ಯೆ ಮಾಡಿಸಲಾಗಿದೆ. ಸಾರ್ವಜನಿಕವಾಗಿ ಶಿಕ್ಷಿಸಲಾದ ಈ ಕೃತ್ಯಗಳನ್ನು ಸುಮಾರು 80 ಸಾವಿರ ಮಂದಿ ವೀಕ್ಷಿಸಿದ್ದಾರೆ. ತಾಲಿಬಾನ್‌ ಆಡಳಿತ ಆರಮಭವಾದಾಗಿನಿಂದ ಇದು 11ನೇ ಮರಣದಂಡನೆ ಇದಾಗಿದೆ.

ಅಫ್ಘಾನ್ ಸುಪ್ರೀಂ ಕೋರ್ಟ್ ಆದೇಶ ಮತ್ತು ತಾಲಿಬಾನ್‌ನ ಸರ್ವೋಚ್ಚ ನಾಯಕ ಹಿಬತುಲ್ಲಾ ಅಖುಂಡ್‌ಜಾದಾ ಅನುಮೋದಿಸಿದ ಸಾರ್ವಜನಿಕ ಮರಣದಂಡನೆಯನ್ನು ಸುಮಾರು 80,000 ಜನರು ವೀಕ್ಷಿಸಿದ್ದಾರೆ.

ಅಬ್ದುಲ್ ರೆಹಮಾನ್, ಆತನ ಕುಟುಂಬದ ಮಹಿಳೆಯರು ಮತ್ತು ಹಾಗೂ ಮಕ್ಕಳು ಸೇರಿದಂತೆ 13 ಮಂದಿಯನ್ನು ಮಂಗಲ್ ಎಂಬ ವ್ಯಕ್ತಿ ಕೊಂದು ಹಾಕಿದ್ದ.  ಇದೀಗ ಮಂಗಲ್‌ ಗೆ ಶಿಕ್ಷೆ ವಿಧಿಸಲಾಗಿದೆ. ಆಫ್ಗಾನಿಸ್ತಾನದ ಸರ್ವೋಚ್ಚ ನಾಯಕ ಹಿಬತುಲ್ಲಾ ಅಖುಂಜಾದಾ ಈ ಶಿಕ್ಷೆಯನ್ನು ಅನುಮೋದಿಸಿದ್ದಾರೆ

ಸಂತ್ರಸ್ತರ ಕುಟುಂಬಕ್ಕೆ ಕ್ಷಮೆ ಮತ್ತು ಶಿಕ್ಷೆಯ ಆಯ್ಕೆಯನ್ನು ನೀಡಲಾಗಿತ್ತು. ಆದರೆ, ಸಂತ್ರಸ್ತ ಕುಟುಂಬ ಕಿಸಾಕ್‌ (ಕಣ್ಣಿಗೆ ಕಣ್ಣು ಎಂಬ ಇಸ್ಲಾಮಿಕ್ ತತ್ವ) ಅಐದುಕೊಂಡಿತ್ತು. ನಂತರ, ಮರಣದಂಡನೆ ಆದೇಶ ನೀಡಲಾಗಿದೆ ಎಂದು ತಿಳಿದುಬಂದಿದೆ. ಮೊದಲಿಗೆ ಹಂತಕ ಮಂಗಲ್‌ ನನ್ನು ಮೈದಾನಕ್ಕೆ ಕರೆತರಲಾಗಿತ್ತು. ವೈದ್ಯರು ಅತನ ತಪಾಸಣೆ ನಡೆಸಿದ ಬಳಿಕ ಷರಿಯಾ ಕಾನೂನಿನ ಪ್ರಕಾರ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಈ ಮಧ್ಯೆ  ವಿಶ್ವಸಂಸ್ಥೆಯ ವಿಶೇಷ ವರದಿಗಾರ ರಿಚರ್ಡ್ ಬೆನೆಟ್ ಅವರು, ಇದು ಅಮಾನವೀಯ, ಕ್ರೂರ ಮತ್ತು ಅಂತಾರಾಷ್ಟ್ರೀಯ ಕಾನೂನಿಗೆ ವಿರುದ್ಧ ಎಂದು ಪ್ರತಿಕ್ರಿಯಿಸಿದ್ದಾರೆ

More articles

Latest article