ನವದೆಹಲಿ: ದೆಹಲಿಯ ರೆಡ್ ಫೋರ್ಟ್ ಬಳಿ ಸಂಭವಿಸಿದ ಐ-20 ಕಾರು ಸ್ಫೋಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ರಾಷ್ಟ್ರೀಯ ತನಿಖಾ ದಳ( ಎನ್ ಐಎ) ಅಅಧಿಕಾರಿಗಳು ಇಂದು ಬೆಳಗ್ಗೆಯಿಂದಲೇ ಕಾಶ್ಮೀರ ಕಣಿವೆಯಾದ್ಯಂತ ಹಲವು ಸ್ಥಳಗಳಲ್ಲಿ ಶೋಧ ಕಾರ್ಯ ನಡೆಸಿದ್ದಾರೆ.
ಕಾಶ್ಮೀರ ಪ್ರದೇಶದ ಪುಲ್ವಾಮಾ, ಕುಲ್ಲಾಮ್ ಮತ್ತು ಶೋಪಿಯಾನ್ ಜಿಲ್ಲೆಗಳ ಸುಮಾರು 8 ಸ್ಥಳಗಳಲ್ಲಿ ಶೋಧಕಾರ್ಯ ಆರಂಭಿಸಲಾಗಿದೆ ಎನ್ ಐಎ ಮೂಲಗಳು ತಿಳಿಸಿವೆ.
ಭಯೋತ್ಪಾದಕ ಸಂಘಟನೆಗಳಿಗೆ ಆರ್ಥಕ ನೆರವು ಸೇರಿದಂತೆ ಇತಹ ಸಹಾಯ ಒದಗಿಸುವ ವ್ಯವಸ್ಥೆಗಳ ಸಂಚು ಭೇದಿಸುವ ಹಿನೆಲೆಯಲ್ಲಿ ಶಂಕಿತ ಆರೋಪಿಗಳು ಮತ್ತು ಅವರ ಸಹಚರರಿಗೆ ಸೇರಿದ ನಿವಾಸಗಳು, ಕಚೇರಿಗಳನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆಸಲಾಗಿದೆ.
ಶೋಪಿಯಾನ್ ನಲ್ಲಿರುವ ಮೌಲ್ವಿ ಇರ್ಫಾನ್ ಅಹ್ಮದ್ ನಿವಾಸ ಮತ್ತು ಪುಲ್ವಾಮಾ ಜಿಲ್ಲೆಯ ಕೊಯಿಲ್, ಚಂದ್ ಗಮ್, ಮಲಂಗ್ ಪೋರಾ ಮತ್ತು ಸಂಬೂರಾ ಪ್ರದೇಶಗಳಲ್ಲಿಯೂ ದಾಳಿ ನಡೆಸಲಾಗಿದೆ. ಇರ್ಫಾನ್ ಅಹ್ಮದ್ ಕೆಂಪುಕೋಟೆಯ ಮೇಲೆ ದಾಳಿಯ ಪ್ರಮುಖ ರೂವಾರಿ. ಫರೀದಾಬಾದ್ ನ ಅಲ್-ಫಲಾಹ್ ವಿಶ್ವವಿದ್ಯಾಲಯದ ‘ವೈಟ್ ಕಾಲರ್’ ಭಯೋತ್ಪಾದನೆಯ ಜಾಲದ ಮಾಸ್ಟರ್ ಮೈಂಡ್ ಎಂದು ಗುರುತಿಸಲಾಗಿದೆ ಎನ್‌ಐಎ ಅಧಿಕಾರಿಗಳು ತಿಳಿಸಿದ್ದಾರೆ.
ನವೆಂಬರ್ 10ರಂದು ನವದೆಹಲಿಯ ಕೆಂಪುಕೋಟೆ ಬಳಿ ಐ-20 ಕಾರು ಸ್ಫೋಟ ಸಂಭವಿಸಿತ್ತು. ಈ ಸ್ಫೋಟದಲ್ಲಿ 15 ಮಂದಿ ಸಾರ್ವಜನಿಕರು ಅಸು ನೀಗಿ 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ ಏಳು ಶಂಕಿತರನ್ನು ಬಂಧಿಸಲಾಗಿದೆ.

