ಆಂಧ್ರ‌ದಲ್ಲಿ ಭೀಕರ ಅಪಘಾತ, ಮಂತ್ರಾಲಯಕ್ಕೆ ತೆರಳುತ್ತಿದ್ದ ಐವರ ದುರ್ಮರಣ

ಕೋಲಾರ: ಆಂಧ್ರ‌ ಪ್ರದೇಶದ ‌ಕರ್ನೂಲ್ ಜಿಲ್ಲೆಯ ಯಮ್ಮಿಗನೂರು ಎಂಬಲ್ಲಿ ಇಂದು ಮುಂಜಾನೆ ಸಂಭವಿಸಿದ ಬೀಕರ ಕಾರು ಅಪಘಾತದಲ್ಲಿ ಇಬ್ಬರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ಐವರು ಅಸುನೀಗಿದ್ದಾರೆ.

ಇಬ್ಬರು ಮಕ್ಕಳಾದ ಬನಿತ್ ಗೌಡ (5) ಹಾಗೂ ರಿತ್ವಿಕ್‌(4) ಸೇರಿದಂತೆ ವೆಂಕಟೇಶಪ್ಪ (70), ಸತೀಶ್ ಕುಮಾರ್ (34), ಮೀನಾಕ್ಷಿ (32) ಮೃತ ದುರ್ದೈವಿಗಳು. ಗಾಯಗೊಂಡಿರುವ ಚಾಲಕ ಚೇತನ್ ಸೇರಿದಂತೆ ಇಬ್ಬರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರಲ್ಲಿ ಒಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ಕರ್ನೂಲ್  ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಮಾಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಷ್ಟ್ರೀಯ ಹೆದ್ದಾರಿ 167 ರಲ್ಲಿ ಯಮ್ಮಿಗನೂರು ಮಂಡಲದ ಕೋಟೆಕಲ್‌ ಗ್ರಾಮದ ಬಳಿ ಇಂದು ನಸುಕಿನ 4.30 ರ ವೇಳೆಗೆ ಅಪಘಾತ ಸಂಭವಿಸಿದೆ. ಅಪಘಾತಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಮಬ್ಬು ಕತ್ತಲು ಅಥವಾ ಅತಿ ವೇಕ ಕಾರಣ ಇರಬಹುದು ಎಂದು ಪೊಲೀಸರು ತಿಳಿಸಿದ್ದಾರೆ.

More articles

Latest article

Most read