ಸಿಎಂ, ಡಿಸಿಎಂ ಉಪಹಾರ ಸಭೆ ಮುಕ್ತಾಯ; ಹೈಕಮಾಂಡ್‌ ತೀರ್ಮಾನಕ್ಕೆ ಬದ್ಧರಾಗಲು ಸಮ್ಮತಿ

ಬೆಂಗಳೂರು: ಅಧಿಕಾರ ಹಂಚಿಕೆ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಇದೀಗ ಸಭೆ ನಡೆಸಿದ್ದಾರೆ. ಮುಖ್ಯಮಂತ್ರಿಗಳ ಕಾವೇರಿ ನಿವಾಸದಲ್ಲಿ ಈ ಸಭೆ ನಡೆದಿದ್ದು, ಇಬ್ಬರೇ ಮಾತಕತೆ ನಡೆಸಿದ್ದಾರೆ. ಬೇರೆ ಯಾರೊಬ್ಬರಿಗೂ ಅವಕಾಶ ಇರಲಿಲ್ಲ.

ಒಂದು ರೀತಿಯಲ್ಲಿ ಒನ್ ಟು ಒನ್ ಮೀಟಿಂಗ್ ಆಗಿತ್ತು. ಇಬ್ಬರೂ ಇಡ್ಲಿ, ವಡೆ, ಪೊಂಗಲ್, ಉಪ್ಪಿಟ್ಟು ಮತ್ತು ಮಸಾಲದೋಸೆ ಮೆಲ್ಲುತ್ತಾ  ಸುದೀರ್ಘ ಚರ್ಚೆ ನಡೆಸಿದ್ದಾರೆ.

ಸಿದ್ದರಾಮಯ್ಯ ಅವರೇ ಖುದ್ದಾಗಿ ಡಿ.ಕೆ.ಶಿವಕುಮಾರ್ ಅವರನ್ನು ಸ್ವಾಗತಿಸಿದ್ದಾರೆ. ಬಲ್ಲ ಮೂಲಗಳ ಪ್ರಕಾರ ಹೈಕಮಾಂಡ್‌ ನಿರ್ದೇಶನದಂತೆ ನಡೆದುಕೊಳ್ಳಲು ಇಬ್ಬರೂ ಮುಖಂಡರು ಸಮ್ಮತಿಸಿದ್ದಾರೆ ಎಂದು ತಿಳಿದು ಬಂದಿದೆ. ಹೈಕಮಾಂಡ್‌ ಯಾವ ನಿರ್ಧಾರ ಕೈಗೊಳ್ಳಲಿದೆ ಎನ್ನುವುದು ಯಕ್ಷ ಪ್ರಶ್ನೆಯಾಗಿದೆ.

ನಿನ್ನೆ ಪ್ರತಿಕ್ರಿಯೆ ನೀಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ  ಅವರು ನನ್ನ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಪಕ್ಷದ ವರಿಷ್ಠರು ಹೇಳಿದಂತೆ ನಡೆದುಕೊಳ್ಳುವುದಾಗಿ ಈಗಾಗಲೇ ತಿಳಿಸಿದ್ದೇನೆ. ಈಗಲೂ ಮತ್ತು ನಾಳೆಯೂ ಅದನ್ನೇ ಹೇಳುತ್ತೇನೆ ಎಂದು ಪುನರುಚ್ಚರಿಸಿದ್ದರು. ವರಿಷ್ಠರು ಕರೆದರೆ ನವದೆಹಲಿಗೆ ತೆರಳುವುದಾಗಿಯೂ ಅವರು ತಿಳಿಸಿದ್ದರು.

More articles

Latest article

Most read