ಕೊಲೆ ಆರೋಪ; ಕಲಬುರಗಿ ಬಿಜೆಪಿ  ಮುಖಂಡ ಮಣಿಕಂಠ ರಾಠೋಡ್‌ ಬಂಧನ

Most read

ಕಲಬುರಗಿ: ಕೊಲೆ ಯತ್ನ ಆರೋಪದ ಹಿನ್ನೆಲೆಯಲ್ಲಿ ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ನನ್ನು ಪೊಲೀಸರು ಬಂಧಿಸಿದ್ದಾರೆ. ಜೇವರ್ಗಿ ತಾಲೂಕಿನ ನೆಲೋಗಿ ಪೊಲೀಸ್‌ ಠಾಣೆ ಪೊಲೀಸರು ಅಫಜಲಪುರ ತಾಲೂಕಿನ ಮಾಶಾಳ ಗ್ರಾಮದಲ್ಲಿ ತಡರಾತ್ರಿ ಮಣಿಕಂಠ ರಾಠೋಡ್​ ನನ್ನು ಬಂಧಿಸಿದ್ದಾರೆ. ಆತನನ್ನು ನ್ಯಾಯಾಲಯವು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ನಾಟಿ ಔಷಧಿ ನೀಡುತ್ತಿದ್ದ ರಶೀದ್ ಮತ್ಯಾ ಎಂಬಾತನನ್ನು ಬಂಧಿಸುವಂತೆ ಆಗ್ರಹಿಸಿ ಮಣಿಕಂಠ ಜೇವರ್ಗಿ ತಾಲೂಕಿನ ನಾರಾಯಣಪುರ ಗ್ರಾಮದಲ್ಲಿ ರಶೀದ್ ಬೆಂಬಲಿಗರೊಂದಿಗೆ ಮಾತಿನ ಚಕಮಕಿ ನಡೆಸಿದ್ದ. ಆಗ ರಶೀದ್ ಮತ್ಯಾ ಕಾರು ಚಾಲಕನ ತಲೆಗೆ ಕಲ್ಲೇಟು ಬಿದ್ದು ಗಂಭೀರ ಗಾಯವಾಗಿತ್ತು. ರಶೀದ್ ಮತ್ಯಾ ಚಾಲಕ ನೀಡಿದ ದೂರಿನನ್ವಯ ಕೊಲೆ ಯತ್ನ ಆರೋಪದಲ್ಲಿ ಮಣಿಕಂಠ ರಾಠೋಡ್​​ ನನ್ನು ಬಂಧಿಸಲಾಗಿದೆ.

More articles

Latest article