ನವದೆಹಲಿ: ಸೌದಿ ಅರೇಬಿಯಾದಲ್ಲಿ ಖಾಸಗಿ ಬಸ್ ಮತ್ತು ಟ್ಯಾಂಕರ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ 20 ಮಹಿಳೆಯರು 12 ಮಕ್ಕಳು ಸೇರಿ 45 ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಮೆಕ್ಕಾ ಮದೀನ ರಸ್ತೆಯಲ್ಲಿ ತಡರಾತ್ರಿ 1.30ರ ಸುಮಾರಿಗೆ ಈ ದುರಂತ ಸಂಭವಿಸಿದ್ದು ಮೃತಪಟ್ಟವರಲ್ಲಿ ಹೆಚ್ಚಿನ ಮಂದಿ ಭಾರತದ ತೆಲಂಗಾಣ ರಾಜ್ಯದವರಾಗಿದ್ದಾರೆ.
ಪ್ರಯಾಣಿಕರಿದ್ದ ಬಸ್, ಟ್ಯಾಂಕರ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಬಸ್ ಹೊತ್ತಿ ಉರಿದಿದ್ದು 20 ಮಹಿಳೆಯರು 12 ಮಕ್ಕಳು 42 ಕ್ಕೂ ಹೆಚ್ಚು ಮಂದಿ ಸ್ಥಳದಲ್ಲೇ ಅಸು ನೀಗಿದ್ದಾರೆ. ಬಸ್ ನಲ್ಲಿ 46 ಮಂದಿ ಪ್ರಯಾಣಿಕರಿದ್ದು ಮೃತಪಟ್ಟವರಲ್ಲಿ 16 ಮಂದಿ ಭಾರತೀಯರು ಎಂದು ತಿಳಿದು ಬಂದಿದೆ.
ಈ ದುರಂತ ಘಟನೆಗೆ ತೆಲಂಗಾಣ ಸಿಎಂ ರೇವಂತ್ ರೆಡ್ಡಿ ತೀವ್ರ ಆಘಾತ ವ್ಯಕ್ತಪಡಿಸಿದ್ದು, ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ರಿಯಾದ್‌ನಲ್ಲಿರುವ ಭಾರತದ ರಾಯಭಾರ ಕಚೇರಿ ಜೊತೆ ನಿರಂತರ ಸಂಪರ್ಕ ಸಾಧಿಸಿ ಸಂತ್ರಸ್ತರ ನೆರವಾಗುಔಂತೆ ಅವರು ನಿರ್ದೇಶನ ನೀಡಿದ್ದಾರೆ.
ಎಐಎಂಐಎಂ ಪಕ್ಷದ ಮುಖಂಡ, ಹೈದರಾಬಾದ್ ಸಂಸದ ಅಸಾದುದ್ದೀನ್ ಒವೈಸಿ ಅಪಘಾತವನ್ನು ಖಚಿತಪಡಿಸಿದ್ದು, ಖಚಿತಪಡಿಸಿದ್ದು, ಮೃತದೇಹಗಳನ್ನು ಭಾರತಕ್ಕೆ ಕರೆತರಲು ವಿದೇಶಾಂಗ ಇಲಾಖೆ ತ್ವರಿತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.
ಇವರೆಲ್ಲರೂ ನವೆಂಬರ್ 9ರಂದು ಮೆಕ್ಕಾ-ಮೇದಿನಾ ಯಾತ್ರೆಗೆ ತೆರಳಿದ್ದರು. ಮೆಕ್ಕಾದಲ್ಲಿ ಉಮ್ರಾ ಯಾತ್ರೆ ಮುಗಿಸಿಕೊಂಡು ಭಾನುವಾರ ಮದಿನಾಕ್ಕೆ ಖಾಸಗಿ ಬಸ್‌ನಲ್ಲಿ ತೆರಳುತ್ತಿದ್ದರು. ಮದೀನಾ ತಲುಪಲು ಕೇವಲ 25 ಕಿಮೀ ಬಾಕಿ ಇರುವಾಗ ಈ ದುರಂತ ಸಂಭವಿಸಿದೆ ಎಂದು ಮಾಧ್ಯಮಗಳು ತಿಳಿಸಿವೆ.

