ಇಪಿಎಫ್‌ಒ ಸ್ಟಾಫ್‌ ಕ್ರೆಡಿಟ್‌ ಕೋ-ಆಪರೇಟಿವ್‌ ಸೊಸೈಟಿ: ಉದ್ಯೋಗಿಗಳಿಂದಲೇ ರೂ.70 ಕೋಟಿ ವಂಚನೆ

Most read


ಬೆಂಗಳೂರು: ನಗರದ ರಾಜಾರಾಮ್‌ ಮೋಹನ್‌ ರಾಯ್‌ ರಸ್ತೆಯಲ್ಲಿರುವ ಇಪಿಎಫ್‌ಒ ಸ್ಟಾಫ್‌ ಕ್ರೆಡಿಟ್‌ ಕೋ-ಆಪರೇಟಿವ್‌ ಸೊಸೈಟಿಯಲ್ಲಿ ರೂ.70 ಕೋಟಿ ವಂಚನೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಕಬ್ಬನ್‌ ಪಾರ್ಕ್‌ ಠಾಣೆ ಪೊಲೀಸರು ರಿಚ್‌ಮಂಡ್‌ ಸರ್ಕಲ್‌ ಬಳಿಯ ಕಚೇರಿ ಹಾಗೂ ಆರೋಪಿಗಳು ವಾಸವಾಗಿದ್ದ ಆರ್‌ಆರ್‌ನಗರ, ಜೆಪಿ ನಗರ ಮತ್ತು ಅಂಜನಾಪುರದಲ್ಲಿರುವ ನಾಲ್ವರು ಆರೋಪಿಗಳ ಮನೆಗಳ ಮೇಲೆ ದಾಳಿ ನಡೆಸಿದಾಗ ಅಪಾರ ಪ್ರಮಾಣದ ಚಿನ್ನಾಭರಣ, ನಗದು, ವಿವಿಧ ದಾಖಲೆಗಳು ಮತ್ತು ಹೂಡಿಕೆ ಪತ್ರಗಳು ಪತ್ತೆಯಾಗಿವೆ. ತಮ್ಮ ಭವಿಷ್ಯಕ್ಕೆ ನೆರವಾಗಲಿದೆ ಎಂದು ತಾವೇ ರಚಿಸಿಕೊಂಡಿದ್ದ  ಇಪಿಎಫ್‌ಒ ಸ್ಟಾಫ್‌ ಕ್ರೆಡಿಟ್‌ ಕೋ- ಅಪರೇಟಿವ್‌ ಸೊಸೈಟಿಯಲ್ಲಿ ಹೂಡಿಕೆ ಮಾಡಿದ್ದರು.

ಆರಂಭದಲ್ಲಿ ಇಪಿಎಫ್‌ಒ ಸ್ಟಾಫ್‌ ಕ್ರೆಡಿಟ್‌ ಕೋ- ಅಪರೇಟಿವ್‌ ಸೊಸೈಟಿ ಚೆನ್ನಾಗಿ ನಡೆಯುತ್ತಿತ್ತು. ಪ್ರತಿ ತಿಂಗಳು ಹೂಡಿಕೆದಾರರಿಗೆ ಬಡ್ಡಿಯೂ ಸಂದಾಯವಾಗತ್ತಿತ್ತು. ಆದರೆ ಕಳೆದ ಮೂರು ತಿಂಗಳಿಂದ ಬಡ್ಡಿ ಬಂದಿರಲಿಲ್ಲ. ಇದರಿಂದ ಅನುಮಾನಗೊಂಡ ಹೂಡಿಕೆದಾರರು ಸೊಸೈಟಿಯಲ್ಲಿ ಹಣದ ವಹಿವಾಟು ಪರಿಶೀಲಿಸಿದಾಗ ರೂ. 73 ಕೋಟಿ ಹಣದ ಪೈಕಿ ರೂ.70 ಕೋಟಿ ಗುಳುಂ ಮಾಡಿ ಸೊಸೈಟಿಯ ಖಾತೆಯಲ್ಲಿ ಕೇವಲ 3 ಕೋಟಿ ಹಣವನ್ನಷ್ಟೇ ಬಿಟ್ಟಿದ್ದಾರೆ.

ಈ ಹಿನ್ನೆಲೆಯಲ್ಲಿ ಸೊಸೈಟಿಯ ಸಿಇಓ ಹಾಗೂ ಅಕೌಂಟೆಂಟ್‌ ವಿರುದ್ಧ ಹೂಡಿಕೆದಾರರು ದೂರು ನೀಡಿದ್ದರು.ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಕಬ್ಬನ್‌ ಪಾರ್ಕ್‌ ಠಾಣೆ ಪೊಲೀಸರು ಓರ್ವ ಮಹಿಳೆ ಸೇರಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಸೊಸೈಟಿಯ ಅಕೌಂಟೆಟ್‌ ಗೆ ಕೇವಲ ರೂ.21 ಸಾವಿರ ಸಂಬಳವಿತ್ತು. ಹೀಗಿದ್ದರೂ ಆತನ ಮನೆಯಲ್ಲಿ ಐಷಾರಾಮಿ ಕಾರುಗಳು, ಆತನ ಪತ್ನಿ ಖಾತೆಯಲ್ಲಿ ಕೋಟ್ಯಂತರ ರೂ.ವಹಿವಾಟು ನಡೆದಿರುವುದು ತನಿಖೆಯಿಂದ ತಿಳಿದು ಬಂದಿದೆ. ಅವರ ಬ್ಯಾಂಕ್‌ ಖಾತೆಗಳನ್ನು ಪರಿಶೀಲಿಸಿದಾಗ ಸೊಸೈಟಿಯ ಖಾತೆಯಿಂದ ಹಣ ವರ್ಗಾವಣೆಯಾಗಿರುವುದು ಕಂಡು ಬಂದಿದೆ.

More articles

Latest article