RSS ಅನ್ನು ಕೂಡಲೇ ನೊಂದಾಯಿಸಿ, ವ್ಯವಹಾರವನ್ನು ಬಹಿರಂಗಗೊಳಿಸಲಿ:ಜಾಗೃತ ಕರ್ನಾಟಕ ಆಗ್ರಹ

Most read

ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್‌)ವನ್ನು ಅಧಿಕೃತವಾಗಿ ನೊಂದಾಯಿದಿಕೊಳ್ಳಬೇಕು ಮತ್ತು ಅದರ ವ್ಯವಹಾರಗಳ ಲೆಕ್ಕಪತ್ರಗಳನ್ನು ಬಹಿರಂಗಗೊಳಿಸಬೇಕು ಎಂದು ಜಾಗೃತ ನಾಗರೀಕರು ಕರ್ನಾಟಕ ಸಂಘಟನೆ ಅಗ್ರಹಿಸಿದೆ.

ಶಾಲಾ ಕಾಲೇಜು ಸೇರಿದಂತೆ ಸರ್ಕಾರಿ ಸ್ಥಳಗಳಲಿ ಆರ್‌ಎಸ್‌ಎಸ್‌ ಚಟುವಟಿಕೆಗಳನ್ನು ನಿಷೇಧಿಸಬೇಕು ಎಂದು ಆರ್‌ ಡಿಪಿಆರ್‌ ಸಚಿವ ಪ್ರಿಯಾಂಕ್ ಖರ್ಗೆ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬರೆದ ಪತ್ರವನ್ನು ಜಾಗೃತ ಕರ್ನಾಟಕ ಸಂಘಟನೆ ಬೆಂಬಲಿಸಿ ಈ ಹೇಳಿಕೆ ನೀಡಿದೆ.

ಕೆ.ಮರುಳಸಿದ್ದಪ್ಪ, ಎಸ್.ಜಿ.ಸಿದ್ದರಾಮಯ್ಯ, ಜಿ.ರಾಮಕೃಷ್ಣ, ಬಂಜಗೆರೆ ಜಯಪ್ರಕಾಶ, ವಿಜಯಾ, ಮಾವಳ್ಳಿ ಶಂಕರ್, ಮೀನಾಕ್ಷಿ ಬಾಳಿ, ಜಾಣಗೆರೆ ವೆಂಕಟರಾಮಯ್ಯ, ವಸುಂಧರಾ ಭೂಪತಿ, ಶ್ರೀಪಾದ ಭಟ್, ವಿಮಲಾ ಕೆ.ಎಸ್. ಎನ್.ಗಾಯತ್ರಿ ಮೊದಲಾದವರು ಈ ಹೇಳಿಕೆಗೆ ಸಹಿ ಮಾಡಿದ್ದಾರೆ.

ಸರ್ಕಾರದ ಸ್ಥಳಗಳಲ್ಲಿ ಆರ್‌ಎಸ್‌ಎಸ್‌ ಚಟುವಟಿಕೆಗಳಿಗೆ ಅವಕಾಶ ನೀಡಬಾರದು ಎಂಬ ಅಭಿಪ್ರಾಯ ಸಂವಿಧಾನದ ಆಶಯಕ್ಕೆ ಪೂರಕವಾಗಿದೆ. ಆದರೆ ಬಿಜೆಪಿಯ ನಾಯಕರು ಪ್ರಿಯಾಂಕ್ ಖರ್ಗೆ ಅವರ ಹೇಳಿಕೆಯನ್ನು ತಿರುಚಿ, ಅಪಪ್ರಚಾರ ಮಾಡುತ್ತಿದೆ. ಖರ್ಗೆ ಅವರು ಆರ್‌ಎಸ್‌ ಎಸ್ ಅನ್ನು ನಿಷೇಧಿಸಬೇಕು ಎಂದು ಎಲ್ಲಿಯೂ ಹೇಳಿಲ್ಲಇಂತಹ ಕಪೋಲಕಲ್ಪಿತ ಅಪಪ್ರಚಾರವನ್ನು ಸಂಘ ಪರಿವಾರ ನಿಲ್ಲಿಸಬೇಕು ಎಂದು ಒತ್ತಾಯಿಸಿದ್ದಾರೆ.

ಮುಖ್ಯಮಂತ್ರಿಗಳು ತ್ವರಿತವಾಗಿ ಸರ್ಕಾರಕ್ಕೆ ಸೇರಿದ ಜಾಗಗಳಲ್ಲಿ ಆರ್‌ಎಸ್‌ಎಸ್ ಚಟುವಟಿಕೆಗಳಿಗೆ ನಿಷೇಧ ಹೇರಿ ಆದೇಶ ಹೊರಡಿಸಬೇಕು.  ಆರ್‌ ಎಸ್‌ ಎಸ್‌ ಸೇರಿದಂತೆ ಯಾವುದೇ ಸಂಘಟನೆ ದೊಣ್ಣೆ ಸೇರಿ ಯಾವುದೇ ಆಯುಧ ಹಿಡಿದು ಅಥವಾ ಹಿಂಸೆಗೆ ಪ್ರಚೋದಿಸುವ ಘೋಷಣೆ ಕೂಗುತ್ತಾ ಸಾರ್ವಜನಿಕ ರಸ್ತೆಗಳಲ್ಲಿ ಮೆರವಣಿಗೆ ಮಾಡಲು ಅವಕಾಶ ನೀಡಬಾರದು ಎಂದು ಅವರು ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.

More articles

Latest article