ಕ್ಯಾಬ್‌ ಚಾಲಕನಿಗೆ ಟೆರರಿಸ್ಟ್‌ ಎಂದು ನಿಂದಿಸಿದ್ದ ಮಲೆಯಾಳಂ ನಟ ಜಯಕೃಷ್ಣನ್ ಬಂಧನ

Most read

ಮಂಗಳೂರು: ಮಂಗಳೂರಿನಲ್ಲಿ ಮುಸ್ಲಿಂ ಕ್ಯಾಬ್ ಚಾಲಕರೊಬ್ಬರನ್ನು ಮುಸ್ಲಿಂ ಭಯೋತ್ಪಾದಕ ಎಂದು ಅವಹೇಳನ ಮಾಡಿದ್ದ ಆರೋಪದಡಿಯಲ್ಲಿ ಮಲಯಾಳಂ ನಟ ಜಯಕೃಷ್ಣನ್, ಸಂತೋಷ್ ಅಬ್ರಹಾಂ ಮತ್ತು ವಿಮಲ್ ಎಂಬ ಮೂವರನ್ನು ಬಂಧಿಸಲಾಗಿದೆ. ಶುಕ್ರವಾರ ಇವರ ವಿರುದ್ಧ  ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಕ್ಯಾಬ್ಚಾಲಕನಿಗೆ ಕರೆ ಮಾಡಿಮುಸ್ಲಿಂ ಟೆರರಿಸ್ಟ್‌’ ಎಂದು ಅವಹೇಳನ ಮಾಡಿದ ಬಗ್ಗೆ ಕೇರಳದ ಸಂತೋಷ್ ಅಬ್ರಾಹಂ, ಜಯಕೃಷ್ಣನ್ ಮತ್ತು ವಿಮಲ್ ವಿರುದ್ಧ ಇಲ್ಲಿನ ಉರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇವರ ವಿರುದ್ಧ ಕ್ಯಾಬ್ ಚಾಲಕ ಅಹ್ಮದ್ ಶಫೀಕ್ ದೂರು ಸಲ್ಲಿಸಿದ್ದರು. ದೂರಿನಲ್ಲಿ ಅವರು, ಮಂಗಳೂರಿಗೆ ಬಂದಿದ್ದ ಜಯಕೃಷ್ಣನ್‌ ಸೇರಿದಂತೆ ಮೂವರು ರಾಪಿಡೊ  ಆ್ಯಪ್ ಮೂಲಕ ಕ್ಯಾಬ್ ಬುಕ್ ಮಾಡಿದ್ದರು. ವಾಹನ ಹತ್ತುವ ಸ್ಥಳವನ್ನು ಬಿಜೈ ನ್ಯೂ ರೋಡ್ಎಂದು ನಮೂದಿಸಿದ್ದರು. ನಾನು ಆ್ಯಪ್ಮೂಲಕ ಕರೆ ಮಾಡಿ ಸ್ಥಳದ ಬಗ್ಗೆ ವಿಚಾರಿಸಿದ್ದೆ. ಆಗ ಹಿಂದಿಯಲ್ಲಿ ಮಾತನಾಡಿದ ವ್ಯಕ್ತಿಯೊಬ್ಬ ನನಗೆ ಮುಸ್ಲಿಂ ಟೆರರಿಸ್ಟ್ ಎಂದು ನಿಂದಿಸಿದ್ದ. ಹಿಂದಿ ಹಾಗೂ ಮಲಯಾಳಂ ಭಾಷೆಯಲ್ಲಿ ನನ್ನ ತಾಯಿಗೂ ಅವಾಚ್ಯ ಶಬ್ಧಗಳನ್ನು ಬಳಸಿದ್ದ ಎಂದು ವಿವರಿಸಿದ್ದರು.

ಆರೋಪಿಗಳ ವಿರುದ್ಧ ಬಿಎನ್‌ ಎಸ್‌ ಸಾರ್ವಜನಿಕ ಶಾಂತಿಗೆ ಭಂಗ, ಅಪರಾಧ ಕೃತ್ಯಕ್ಕೆ ಪ್ರಚೋದನೆ, ಅವಮಾನ, ಧರ್ಮ, ಜನಾಂಗ ಅಥವಾ ಜಾತಿ ಆಧಾರದ ಮೇಲೆ ಸುಳ್ಳು ಮಾಹಿತಿ, ವದಂತಿ ಅಥವಾ ಆತಂಕಕಾರಿ ಸುದ್ದಿ ಹರಡುವ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

More articles

Latest article