ಟನಲ್‌ ರಸ್ತೆಗೆ ಲಾಲ್‌ಬಾಗ್ ಭೂಮಿ ಬಳಕೆ ಇಲ್ಲ; ಡಿಸಿಎಂ ಡಿಕೆ ಶಿವಕುಮಾರ್‌ ಸ್ಪಷ್ಟನೆ

ಬೆಂಗಳೂರು: ಲಾಲ್‌ಬಾಗ್‌ ನ ಅಭಿವೃದ್ಧಿಗೆ ರೂ.10 ಕೋಟಿ ಅನುದಾನವನ್ನು ಗ್ರೇಟರ್‌ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ನೀಡಲಾಗುವುದು ಎಂದು ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ಉಸ್ತುವಾರಿ ಡಿಕೆ ಶಿವಕುಮಾರ್‌ ತಿಳಿಸಿದ್ದಾರೆ. ಟನಲ್ ರಸ್ತೆಗೆ ಲಾಲ್ ಬಾಗ್‌ ನ 6 ಎಕರೆ ಭೂಮಿ ಅಗತ್ಯವಿಲ್ಲ. ಬಳಸುವುದೂ ಇಲ್ಲ ಎಂದು ಸ್ಪಷ್ಟಪಡಿಸಿದರು.

ನಿನ್ನೆ ಜಿಬಿಎ ಮೊದಲ ಸಭೆ ನಡೆದ ನಂತರ ಇಂದು ಅವರು ಲಾಲ್‌ ಬಾಗ್‌ ಗೇ ಭೇಟಿ ನೀಡಿ ಸಾರ್ವಜನಿಕರೊಂದಿಗೆ ಸಮಾಲೋಚನೆ ನಡೆಸಿದರು.

ನಂತರ ಮಾತನಾಡಿದ ಅವರು, ಸಾರ್ವಜನಿಕರ ಮನವಿಯಂತೆ ಲಾಲ್‌ ಬಾಗ್‌ ನಲ್ಲಿ ಉಚಿತ ಶೌಚಾಲಯ, ಜಿಮ್ ಹಾಗೂ ಮುಂಜಾಣೆಯಿಂದ ಮುಸ್ಸಂಜೆವರೆಗೂ ವೈದ್ಯರು ಮತ್ತು ಆಂಬುಲೆನ್ಸ್ ಸೇವೆ ಒದಗಿಸಲಾಗುವುದು. ಲಾಲ್‌ಬಾಗ್ ಮಾದರಿಯಲ್ಲಿ ನಗರದ ಇತರ ಭಾಗಗಳಲ್ಲಿಯೂ ಟ್ರೀ ಪಾರ್ಕ್‌ಗಳನ್ನು ಅಭಿವೃದ್ಧಿಪಡಿಸಲು ಆರ್ಥಿಕ ಬೆಂಬಲ ನೀಡುವುದಾಗಿ ಪ್ರಕಟಿಸಿದರು.

ಸಾರ್ವಜನಿಕರ ಆಸ್ತಿಯಾದ ಲಾಲ್‌ಬಾಗ್ ಉದ್ಯಾನಕ್ಕೆ ಯಾವುದೇ ಹಾನಿಯಾಗದಂತೆ ನೋಡಿಕೊಳ್ಳುವುದು ನಮ್ಮ ಪ್ರಥಮ ಆದ್ಯತೆ. ಟನಲ್ ರಸ್ತೆಯ ಪ್ರವೇಶ-ನಿರ್ಗಮನಕ್ಕೆ ಕೇವಲ ಅರ್ಧ ಎಕರೆ ಪ್ರದೇಶ ಮಾತ್ರ ಬಳಸಲಾಗುತ್ತದೆ. ಪಾರ್ಕಿಂಗ್ ಜಾಗವನ್ನು ತಾತ್ಕಾಲಿಕವಾಗಿ ಉಪಯೋಗಿಸಿ, ನಂತರ ಅದನ್ನು ಉದ್ಯಾನಕ್ಕೆ ಹಿಂದಿರುಗಿಸಲಾಗುವುದು. ಉತ್ತಮ ಆಡಳಿತ ನೀಡಲು ಎಲ್ಲಾ ಸಲಹೆಗಳನ್ನು ಪರಿಗಣಿಸಿ, ಯೋಜನೆಯ ಟೆಂಡರ್ ಪ್ರಕ್ರಿಯೆಯನ್ನು ಪಾರದರ್ಶಕವಾಗಿ ನಡೆಸಲಾಗುವುದು ಎಂದರು.

More articles

Latest article

Most read