ಕೌಟುಂಬಿಕ ಕಲಹ: ಇಬ್ಬರು ಮಕ್ಕಳನ್ನು ಕೊಂದು ಆತ್ಮಹತ್ಯೆಗೆ ಶರಣಾದ ತಾಯಿ

Most read

ಬೆಂಗಳೂರು: ಇಬ್ಬರು ಪುಟ್ಟ ಮಕ್ಕಳನ್ನು ಕೊಂದು ಹೆತ್ತತಾಯಿಯೊಬ್ಬಳು ತಾನೂ ಆತ್ಮಹತ್ಯೆ ಮಾಡಿಕೊಂಡ ಹೃದಯವಿದ್ರಾವಕ ಘಟನೆ ನಗರದ ಹೆಸರ ಘಟ್ಟ ರಸ್ತೆಯ ಬಾಗಲಗುಂಟೆ ಸಮೀಪದ ಭುವನೇಶ್ವರಿ ನಗರದಲ್ಲಿ ನಡೆದಿದೆ.

ತಾಯಿ ವಿಜಯಲಕ್ಷ್ಮಿ ತನ್ನ ಮಕ್ಕಳಾದ ಭುವನ್ (1)ಹಾಗೂ ಬೃಂದಾ (4)ಳನ್ನು ಕೊಂದು ಅತ್ಮಹತ್ಯಗೆ ಶರಣಾಗಿದ್ದಾಳೆ. ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕಳೆದ ರಾತ್ರಿ ವಿಜಯಲಕ್ಷ್ಮಿ ಸಹೋದರಿ  ಮನೆಗೆ ಬಂದು ನೋಡಿದಾಗ ಈ ಘಟನೆ ಬೆಳಕಿಗೆ ಬಂದಿದೆ. ಕೌಟುಂಬಿಕ ಕಲಹದಿಂದ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಬಾಗಲಗುಂಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

https://df0a5e7d4d7df49c05e1a00b0674ae50.safeframe.googlesyndication.com/safeframe/1-0-45/html/container.html ರಾಯಚೂರು ಜಿಲ್ಲೆ ಮಸ್ಕಿ ಮೂಲದ ವಿಜಯಲಕ್ಷ್ಮಿ ಅದೇ ಜಿಲ್ಲೆಯ ರಮೇಶ್ ಅವರನ್ನು ವಿವಾಹವಾಗಿದ್ದರು. ಇವರಿಗೆ ವಿವಾಹವಾಗಿ ಐದು ವರ್ಷವಾಗಿತ್ತು. ರಮೇಶ್ ಮಾಲ್ ನಲ್ಲಿ ಕೆಲಸ ಮಾಡುತ್ತಿದ್ದರು.

ಮರಣೋತ್ತರ ಪರೀಕ್ಷೆಗಾಗಿ ಮೃತದೇಹಗಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಆತ್ಮಹತ್ಯೆಗೆ ಪತಿಯೇ ಕಾರಣ ಎಂದು ವಿಜಯಲಕ್ಷ್ಮಿ ಸಂಬಂಧಿಕರು ಆರೋಪಿಸಿದ್ದಾರೆ.

ರಮೇಶ್‌ ಎರಡನೇ ಮದುವೆ ಮಾಡಿಕೊಂಡಿದ್ದು, ವಿವಾಹ ವಿಚ್ಚೇದನ  ನೀಡುವಂತೆ ವಿಜಯಲಕ್ಷ್ಮಿಗೆ ಕಿರುಕುಳ ನೀಡುತ್ತಿದ್ದ. ಇಬ್ಬರ ನಡುವೆ ಜಗಳ ನಡೆಯುತಿತ್ತು. ಈ ವಿಷಯವನ್ನು ವಿಜಯಲಕ್ಷ್ಮಿ ಸಂಬಂಧಿಕರ ಬಳಿ ಹೇಳಿ ಕೊಂಡಿದ್ದಳು. ರಮೇಶ್ ಹಿಂಸೆಯಿಂದ ಬೇಸತ್ತು ವಿಜಯಲಕ್ಷ್ಮಿ ತನ್ನ ಮಕ್ಕಳನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ದೂರಿನಲ್ಲಿ ಹೇಳಿದ್ದಾರೆ.

More articles

Latest article