ಬೆಂಗಳೂರು: ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಶೂ ಎಸೆದ ವಕೀಲನಿಗೆ ಬೆಂಬಲ ಸೂಚಿಸಿ ಆತನ ಕೃತ್ಯವನ್ನು ಹೊಗಳಿದ್ದ ಮಾಜಿ ಐಪಿಎಸ್ ಅಧಿಕಾರಿ ಮತ್ತು ಬಿಜೆಪಿ ನಾಯಕ ಭಾಸ್ಕರ್ ರಾವ್ ಅವರು ತಮ್ಮ ಹೇಳಿಕೆಗೆ ಕ್ಷಮೆಯಾಚಿಸಿದ್ದಾರೆ.
ಭಾಸ್ರ್ ರಾರ್ ಅವರು, ಬಿ.ಆರ್. ಗವಾಯಿ ಅವರ ಮೇಲೆ ಶೂ ಎಸೆದ ವಕೀಲ ರಾಕೇಶ್ ಕಿಶೋರ್ ಅವರ ಕೃತ್ಯವನ್ನು ಪ್ರಶಂಶಿಸಿ ಎಕ್ಸ್ ಮೂಲಕ ಹರ್ಷ ವ್ಯಕ್ತಪಡಸಿದ್ದರು. ಇದು ಕಾನೂನಿನ ಪ್ರಕಾರ ತಪ್ಪಾದರೂ, ಇಳಿ ವಯಸ್ಸಿನಲ್ಲಿ ಯಾವುದೇ ಪರಿಣಾಮಗಳನ್ನು ಲೆಕ್ಕಿಸದೆ ಇಂತಹ ದೃಢ ನಿಲುವು ತೆಗೆದುಕೊಂಡ ನಿಮ್ಮ ಧೈರ್ಯವನ್ನು ನಾನು ಮೆಚ್ಚುತ್ತೇನೆ ಎಂದು ಹೊಗಳಿದ್ದರು.
ಇವರ ಅಭಿಪ್ರಾಯಕ್ಕೆ ವಿರೋಧ ವ್ಯಕ್ತವಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಭಾಸ್ಕರ್ ರಾವ್, ನಾನು ಸುಪ್ರೀಂ ಕೋರ್ಟ್, ಮುಖ್ಯ ನ್ಯಾಯಮೂರ್ತಿ ಅಥವಾ ಯಾವುದೇ ಸಮುದಾಯವನ್ನು ಅವಮಾನಿಸಿಲ್ಲ. ನನ್ನ ಪೋಸ್ಟ್‌ನಿಂದ ಕೋಪಗೊಂಡಿದ್ದರೆ ಅಥವಾ ನೋವಾಗಿದ್ದರೆ ಕ್ಷಮಿಸಿ ಎಂದು ಬರೆದು ಕೊಂಡಿದ್ದಾರೆ.