ಪ್ರಿಯಕರ ತನ್ನ ಸ್ನೇಹಿತೆ ಜತೆ ಇದ್ದುದನ್ನು ನೋಡಿ ನೇಣಿಗೆ ಶರಣಾದ ವಿವಾಹಿತ ಮಹಿಳೆ

Most read

ಬೆಂಗಳೂರು: ಈಕೆ ಇಟ್ಟುಕೊಂಡಿದ್ದೇ ಅಕ್ರಮ ಸಂಬಂಧ. ಪತಿ ಮಕ್ಕಳು ಇದ್ದರೂ ಮತ್ತೊಬ್ಬ ಪುರುಷನ ಜತೆ ಪ್ರೀತಿ ಪ್ರೇಮ ಮುಂದುವರೆಸಿದ್ದಳು.  ತನ್ನ ಪ್ರಿಯಕರನನ್ನು ತನ್ನ ಆತ್ಮೀಯ ಸ್ನೇಹಿತೆಗೂ ಪರಿಚಯಿಸಿದ್ದಳು. ಸ್ವಲ್ಪ ದಿನಗಳ ನಂತರ ಪ್ರಿಯಕರ ತನ್ನಿಂದ ಅಂತರ ಕಾಯ್ದುಕೊಳ್ಳುತ್ತಿರುವುದು ಅರಿವಿಗೆ ಬಂದಿತ್ತು. ತನ್ನ ಸ್ನೇಹಿತೆ ತನ್ನ ಪ್ರಿಯಕರನ ಜೊತೆ ರೆಡ್‌ ಹ್ಯಾಂಡ್‌ ಆಗಿ ಜತೆಯಲ್ಲಿ ಇರುವುದನ್ನು ನೋಡಿ ಈ ವಿವಾಹಿತ ಮಹಿಳೆ ಆತ್ಮಹತ್ಯೆಗೆ ಶರಣಾಗಿರುವ ಸಿನೀಮಿಯ ಘಟನೆ ನಗರದ ಮಾಗಡಿ ರಸ್ತೆ ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿ ವರದಿಯಾಗಿದೆ.

ಆತಹತ್ಯೆ ಮಾಡಿಕೊಂಡ ಗೃಹಿಣಿಯನ್ನು ಯಶೋಧಾ (38) ಎಂದು ಗುರುತಿಸಲಾಗಿದೆ. ಈಕೆಗೆ ಪತಿ ಮತ್ತು ಇಬ್ಬರು ಮಕ್ಕಳಿದ್ದಾರೆ. ಆದರೂ ಯಶೋಧಾ ಆಡಿಟರ್‌ ವಿಶ್ವನಾಥ್‌ ಎಂಬಾತನ ಜತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಳು. ಆಡಿಟರ್‌ ನನ್ನು ತನ್ನ ಗೆಳತಿಗೆ ಪರಿಚಯ ಮಾಡಿಸಿದ್ದಳು.

ನಂತರ ಯಶೋಧಾಳಿಂದ ಆಡಿಟರ್‌ ವಿಶ್ವನಾಥ್‌ ಅಂತರ ಕಾಯ್ದುಕೊಳ್ಳಲು ಆರಂಭಿಸಿದ್ದ. ಇದರಿಂದ ಅನುಮಾನಗೊಂಡ ಯಶೋಧಾಳಿಗೆ ತನ್ನ ಸ್ನೇಹಿತೆಯೇ ಆಡಿಟರ್‌ ಜತೆಗೆ ಸಂಬಂಧ ಮುಂದುವರೆಸಿದ್ದ ಮಾಹಿತಿ ಸಿಕ್ಕಿದೆ.

ಎರಡು ದಿನಗಳ ಹಿಂದೆ ರಾತ್ರಿ ವೇಳೆ ವಿಶ್ವನಾಥ್‌ ಹಾಗೂ ತನ್ನ ಸ್ನೇಹಿತೆ ಹೌಸಿಂಗ್‌ ಬೋರ್ಡ್‌ನಲ್ಲಿರುವ ವಸತಿ ಗೃಹವೊಂದಕ್ಕೆ ಹೋಗಿರುವ ಮಾಹಿತಿ ಯಶೋಧಾಗೆ ತಿಳಿದಿದೆ. ಕೂಡಲೇ ಆಕೆ ಅಲ್ಲಿಗೆ ತೆರಳಿ ನೋಡಿದಾಗ ಇಬ್ಬರು ಜತೆಯಲ್ಲಿ ಇರುವುದು ಕಂಡು ಬಂದಿದೆ. ಕೂಡಲೇ ಆಕೆ ಅವರಿದ್ದ ಕೊಠಡಿ ಪಕ್ಕದಲ್ಲೇ ಮತ್ತೊಂದು ರೂಂ ಬಾಡಿಗೆಗೆ ಪಡೆದು ಫ್ಯಾನ್‌ ಗೆ ನೇಣು ಬಿಗಿದುಕೊಂಡು ಆತಹತ್ಯೆ ಮಾಡಿಕೊಂಡಿದ್ದಾರೆ.

ಈ ವಿಷಯ ವಿಶ್ವನಾಥ್‌ಗೆ ತಿಳಿದು ಬಂದು  ಯಶೋಧಾಳನ್ನು ಕೆಳಗೆ ಇಳಿಸಿ ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ಯಶೋಧಾ ಪತಿ ದೂರು ದಾಖಲಿಸಿದ್ದು, ತನಿಖೆ ಮುಂದುವರೆಸಿದ್ದಾರೆ.

More articles

Latest article