ಸೀರೆ ಕದ್ದ ಆರೋಪ; ಮಹಿಳೆಗೆ ಥಳಿಸಿದ ಅಂಗಡಿ ಮಾಲೀಕ ಬಂಧನ

Most read

ಬೆಂಗಳೂರು: ಅಂಗಡಿಯಲ್ಲಿ ಸೀರೆ ಕದ್ದಿದ್ದಾಳೆಂದು ಎಂದು ಆರೋಪಿಸಿ ಬೆಂಗಳೂರಿನ ಅವೆನ್ಯೂ ರಸ್ತೆಯ ಸೀರೆ ಅಂಗಡಿಯ ಮಲೀಕನೊಬ್ಬ ಮಹಿಳೆಯೊಬ್ಬರಿಗೆ ಕಾಲಿನಿಂದ ಒದ್ದು, ಅಮಾನುಷವಾಗಿ ಹಲ್ಲೆ ನಡೆಸಿರುವ ಘಟನೆ ವರದಿಯಾಗಿದೆ. ನಗರದ ಅವೆನ್ಯೂ ರಸ್ತೆಯಲ್ಲಿ ನಡೆದಿದೆ.

ಈ ದುಷ್ಕೃತ್ಯ ನಡೆಸಿದವನನ್ನು ಮಾಯಾ ಸಿಲ್ಕ್ ಸ್ಯಾರೀಸ್ ಅಂಗಡಿ ಮಾಲೀಕ ಬಾಬುಲಾಲ್ ಎಂದು ಗುರುತಿಸಲಾಗಿದೆ. ಆತ ಹಲ್ಲೆ ನಡೆಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು ಕ್ರಮ ಕೈಗೊಳ್ಲೂವಂತೆ ಆಗ್ರಹಿಸಲಾಗುತ್ತಿದೆ.

ಮಹಿಳೆಯು ನೋವಿನಿಂದ ಅಂಗಾಲಾಚಿ ಬೇಡಿಕೊಂಡರೂ ಈತ ಹೊಡೆಯುವುದನ್ನು ಬಿಟ್ಟಿಲ್ಲ.

ಈ ನಡುವೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು, ಮಹಿಳೆ ಮೇಲೆ ಹಲ್ಲೆ ನಡೆಸಿದ ಅಂಗಡಿ ಮಾಲೀಕ ಮತ್ತು ಮಹಿಳೆಯನ್ನು ಬಂಧಸಿದ್ದಾರೆ.

ಮಹಿಳೆಯ ಮೇಲಿನ ಹಲ್ಲೆಯ ಘಟನೆಗೆ ಸಂಬಂಧಿಸಿದಂತೆ ದಿನಾಂಕ 25/9/2025 ರಂದು ಸಿಟಿ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಮೊ.ಸಂ 196/2025 , ಕಲಂ 74, 76, 79,115(2), 133, 126(2), 351 (2),  3(5) BNS ಅಡಿಯಲ್ಲಿ ಪ್ರರಣ ದಾಖಲಾಗಿದ್ದು,  ಇಬ್ಬರು ಆರೋಪಿಗಳನ್ನು ದಸ್ತಗಿರಿ ಮಾಡಲಾಗಿರುತ್ತದೆ. ತನಿಖೆಯು ಪ್ರಗತಿಯಲ್ಲಿರುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

More articles

Latest article