ಬೆಂಗಳೂರು: ನಂದಿನಿ ಉತ್ಪನ್ನಗಳ ದರಗಳನ್ನು ಇಳಿಕೆ ಮಾಡಲಾಗಿದೆ. ಹಿನ್ನೆಲೆ. ಕೆಎಂಎಫ್ ವ್ಯವಸ್ಥಾಪಕ ನಿರ್ದೆಶಕ ಶಿವಸ್ವಾಮಿ ಮಾಹಿತಿ ನೀಡಿದ್ದು, ಕೇಂದ್ರ ಸರ್ಕಾರ ಜಿಎಸ್ ಟಿ ಇಳಿಸಿದ್ದು, ದರ ಪರಿಷ್ಕರಣೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಹಾಲು ಮತ್ತು ಮೊಸರಿನ ದರದಲ್ಲಿ ಯಾವುದೇ ವ್ಯತ್ಯಾಸ ಇರುವುದಿಲ್ಲ. ಉಳಿದಂತೆ ನಂದಿನಿ ಉತ್ಪನ್ನಗಳ ದರ ಪರಿಷ್ಕರಣೆ ಮಾಡಲಾಗಿದೆ. ಸೆ.22ರಿಂದ ಪರಿಷ್ಕರಣೆ ದರ ಜಾರಿಗೆ ಬರುವಂತೆ ಆದೇಶಿಸಲಾಗಿದೆ. ಈ ಹಿಂದೆ 12% ಇದ್ದ ಜಿಎಸ್ ಟಿ ಯನ್ನು 5% ಗೆ ಇಳಿಸಲಾಗಿದೆ.
ಯಾವುದರ ಬೆಲೆ ಎಷ್ಟು? ಇಲ್ಲಿದೆ ಮಾಹಿತಿ:
# ಕೆಜಿ ನಂದಿನಿ ತುಪ್ಪ ದರ 650ರಿಂದ 610ಕ್ಕೆ ಇಳಿಕೆ.
# ಅರ್ಧ ಕೆಜಿ ಬೆಣ್ಣೆ ದರ 305ರಿಂದ 286ಕ್ಕೆ ಇಳಿಕೆ.
# ಕೆಜಿ ಪನ್ನೀರ್ ದರ 425ರಿಂದ 408ಕ್ಕೆ ಇಳಿಕೆ.
# ಲೀ.ಗುಡ್ ಲೈಫ್ ಹಾಲು 70ರಿಂದ 68ಕ್ಕೆ ಇಳಿಕೆ.
# 1 ಕೆಜಿ ಚೀಸ್ ದರ 480ರಿಂದ 450ರೂ.ಗೆ ಇಳಿಕೆ.
# ಕೆಜಿ ವೆನಿಲ್ಲಾ ಟಬ್ ಐಸ್ ಕ್ರೀಂ 178ಕ್ಕೆ ಇಳಿಕೆ.
# 5 ಕೆಜಿ ಫ್ಯಾಮಿಲಿ ಪ್ಯಾಕ್ ಐಸ್ ಕ್ರೀಂ 574ಕ್ಕೆ ಇಳಿಕೆ.