Friday, September 19, 2025

ಗದಗದಲ್ಲಿ ಭೀಕರ ಅಪಘಾತ; ಹಸೆಮಣೆ ಏರಬೇಕಿದ್ದ ಇಬ್ಬರು ಸೇರಿ ಮೂವರು ಪೊಲೀಸರು ಸಾವು

Most read

ಗದಗ: ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಕಾನ್ ಸ್ಟೇಬಲ್ ​ಗಳು ಸೇರಿದಂತೆ ಮೂವರು ದಾರುಣವಾಗಿ ಮೃತಪಟ್ಟ ಘಟನೆ ಗದಗ ತಾಲೂಕಿನ ಹರ್ಲಾಪುರ ಸಮೀಪದ ರಾಷ್ಟ್ರೀಯ ಹೆದ್ದಾರಿ- 67ರಲ್ಲಿ ನಡೆದಿದೆ.

ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಪೊಲೀಸ್ ಕಾನ್ ಸ್ಟೇಬಲ್ ಗಳಾದ ಅರ್ಜುನ್ ನೆಲ್ಲೂರ(29) ಮತ್ತು ವೀರೇಶ್ ಉಪ್ಪಾರ(31) ಮತ್ತು ಅರ್ಜುನ್ ಚಿಕ್ಕಪ್ಪ ರವಿ ನೆಲ್ಲೂರ(43) ಮೃತರಾಗಿದ್ದಾರೆ.

ಈ ಮೂವರೂ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಕಾರಿನ ವೇಗೆ ಮಿತಿ ಮೀರಿದ್ದರಿಂದ ಕಾರು ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್​ಗೆ ಡಿಕ್ಕಿ ಹೊಡೆದು ನಂತರ ಬಸ್​ಗೆ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಪಘಾತದ ಭೀಕರತೆಗೆ ಕಾರು ಗುರುತು ಸಿಗಲಾರದಷ್ಟು ಚೂರು ಚೂರಾಗಿದೆ.

ಈ ಮೂವರ ಪೈಕಿ ಇಬ್ಬರು ಪೊಲೀಸ್ ಕಾನ್ ಸ್ಟೇಬಲ್ ಗಳ ವಿವಾಹ ನಿಶ್ಚಯವಾಗಿತ್ತು. ಅರ್ಜುನ ನೆಲ್ಲೂರ ಮತ್ತು ವೀರೇಶ್ ಉಪ್ಪಾರ ಶೀಘ್ರದಲ್ಲೇ ಹಸೆಮಣಿ ಏರುವವರಿದ್ದರು. ಇವರಿಬ್ಬರೂ ಪೊಲೀಸ್ ಇಲಾಖೆ ಸೇರಿ ಏಳು ವರ್ಷವಾಗಿತ್ತು ಎಂದು ತಿಳಿದು ಬಂದಿದೆ.

ಅರ್ಜುನ್ ನೆಲ್ಲೂರ ಹಾವೇರಿ ಜಿಲ್ಲಾ ಪೊಲೀಸ್ ವೈರ್‌ ಲೆಸ್‌ ವಿಭಾಗದಲ್ಲಿ ವೀರೇಶ್ ಉಪ್ಪಾರ ಕೊಪ್ಪಳ‌ ಜಿಲ್ಲಾ ಪೊಲೀಸ್​​​ ವೈರ್‌ ಲೆಸ್‌ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿದ್ದರು.

ಬಸ್‌ ಚಾಲಕ ದಿಲೀಪ್ ಅಪಘಾತದ ತೀವ್ರತೆಯನ್ನು ಹಂಚಿಕೊಂಡಿದ್ದಾರೆ. ಕಾರು ಅತಿಯಾದ ವೇಗವಾಗಿ ಬರುತ್ತಿತ್ತು. ಡಿವೈಡರ್ ​ಗೆ ಡಿಕ್ಕಿ ಹೊಡೆದು ಕಾರು ಬಾಲ್‌ ನಂತೆ ನೆಗೆದು ‌ ಫುಟ್‌ಬಾಲ್ ​​ನಂತೆ ಬಸ್​​ಗೆ ಡಿಕ್ಕಿ ಹೊಡೆಯಿತು. ಬಸ್‌ ಇಳಿದು ನೋಡಿದಾಗ  ಮೂವರು ಸಾವನ್ನಪ್ಪಿದ್ದರು ಎಂದು ತಿಳಿಸಿದ್ದಾರೆ.

More articles

Latest article