ದಲಿತ ಮಹಿಳೆಗೆ ಅವಹೇಳನ ಮಾಡಿದ ಆರೋಪ: ಯತ್ನಾಳ ವಿರುದ್ಧ ಎಫ್‌ಐಆರ್‌

Most read

ಕೊಪ್ಪಳ: ದಲಿತ ಮಹಿಳೆ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ವಿಜಯಪುರ ಕ್ಷೇತ್ರದ ಶಾಸಕ ಬಸನಗೌಡ ಪಾಟೀಲ ಯತ್ನಾಳ ವಿರುದ್ಧ ಕೊಪ್ಪಳ ನಗರ ಪೊಲೀಸ್‌ ಠಾಣೆಯಲ್ಲಿ ಮಂಗಳವಾರ ಎಫ್‌ಐಆರ್‌ ದಾಖಲಾಗಿದೆ.

ಸುದ್ದಿ ವಾಹಿನಿಯೊಂದಕ್ಕೆ ಸಂದರ್ಶನ ನೀಡುತ್ತಿದ್ದ ಯತ್ನಾಳ ನಾಡಹಬ್ಬ ದಸರಾ ಉದ್ಘಾಟನೆ ಹೇಗೆ ನಡೆಯಬೇಕು ಎಂದು ವಿವರಿಸುತ್ತಿದ್ದರು. ಗ ಅವರು ಸನಾತನ ಧರ್ಮದವರು ಮಾತ್ರ ದಸರಾದಲ್ಲಿ ಚಾಮುಂಡಿ ದೇವಿಗೆ ಹೂ ಮುಡಿಸಬೇಕು. ಈ ಕೆಲಸಕ್ಕೆ ದಲಿತ ಮಹಿಳೆಗೂ ಅವಕಾಶವಿಲ್ಲ ಎಂದಿದು ಹೇಳಿದ್ದರು.

ದಲಿತ ಮಹಿಳೆಯರಿಗೆ ಹೂ ಮುಡಿಸಲು ಅವಕಾಶವಿಲ್ಲ ಎಂದು ಬಹಿರಂಗವಾಗಿ ಹೇಳಿಕೆ ನೀಡುವ ಮೂಲಕ ದಲಿತ ಸಮುದಾಯಕ್ಕೆ ಯತ್ನಾಳ ಅವಮಾನ ಮಾಡಿದ್ದಾರೆ. ವರು ದಿನತ್ಯ ಪ್ರಚೋದನಕಾರಿ ಹಾಗೂ ಕೋಮು ಸಂಘರ್ಷದ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಆದ್ದರಿಂದ ಯತ್ನಾಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ದಲಿತ ಸಮುದಾಯುದ ಯುವಮುಖಂಡ ಮಲ್ಲಿಕಾರ್ಜುನ ಪೂಜಾರ ನೀಡಿದ್ದರು. ಈ ದೂರು ಆಧರಿಸಿ ಯತ್ನಾಳ ವಿರುದ್ಧ  ಎಫ್‌ಐಆರ್‌ ದಾಖಲಾಗಿದೆ.

More articles

Latest article