ಬೆಂಗಳೂರು: ಧರ್ಮಸ್ಥಳ ಗ್ರಾಮದಲ್ಲಿ ಮಹಿಳೆಯರು ಸೇರಿದಂತೆ ನೂರಾರು ಹೆಣಗಳನ್ನು ಹೂತು ಹಾಕಿರುವುದಾಗಿ ಹೇಳಿಕೆ ನೀಡಿದ್ದ ಸಿ.ಎನ್. ಚಿನ್ನಯ್ಯ ಅವರನ್ನು ಮಹಜರು ನಡೆಸಲು ಬೆಂಗಳೂರಿಗೆ ಕರೆತರಲಾಗಿದೆ.
ಚಿನ್ನಯ್ಯ ಅವರಿಗೆ ಬೆಂಗಳೂರಿನಲ್ಲೇ ತಲೆ ಬುರುಡೆ ನೀಡಲಾಗಿತ್ತು ಎಂದೂ ಹೇಳಲಾಗುತ್ತಿದ್ದು, ಸ್ಥಳ ಮಹಜರು ನಡಸಲು ಇಂದು ಮುಂಜಾನೆ 6 ಗಂಟೆಗೆ ಚಿನ್ನಯ್ಯ ಅವರನ್ನು ಬೆಂಗಳೂರಿಗೆ ಎಸ್ ಐಟಿ ತಂಡ ಕರೆತಂದಿದೆ. ಆದರೆ ಯಾವ ಯಾವ ಸ್ಥಳದಲ್ಲಿ ಮಹಜರು ನಡೆಸಲಾಗಿದೆ ಎನ್ನುವುದನ್ನು ಎಸ್ ಐಟಿ ಗುಟ್ಟಾಗಿ ಇಟ್ಟಿದೆ. ಬಲ್ಲ ಮೂಲಗಳ ಪ್ರಕಾರ ಕಾಮಾಕ್ಷಿಪಾಳ್ಯದ ಮನೆಯೊಂದರಲ್ಲಿ ಸ್ಥಳ ಮಹಜರು ನಡೆಸಲಾಗಿದೆ ಎಂದು ತಿಳಿದು ಬಂದಿದೆ.
ಈ ಹಂತದಲ್ಲಿ ಯಾವುದೇ ಮಾಹಿತಿಯನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಎಸ್ ಐಟಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.