ಕೋಲಾರ. ಕಳೆದ ತಿಂಗಳ 31 ರಂದು ಬೆಂಗಳೂರಿನ ಕಾಡುಗೋಡಿ ಪೋಲೀಸ್ ಠಾಣಾ ವ್ಯಾಪ್ತಿಯ ವೈಟ್ ಫೀಲ್ಡ್ ನಲ್ಲಿ ಬೇರೆಯವರು ಕೊಲೆ ಮಾಡಿದ್ದ ಮೃತದೇಹವನ್ನು ಆಂಬ್ಯುಲೆನ್ಸ್ ನಲ್ಲಿ ಕೋಲಾರಕ್ಕೆ ತಂದು ಸುಟ್ಟ ಹಾಕಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಲಾಗಿದೆ. ಕಾಡುಗೋಡಿ ಪೋಲೀಸರು ಕೋಲಾರದ ಎಸ್ ಎನ್ ಆರ್ ಆಸ್ಪತ್ರೆಯ ವೆಂಟಾಚಲಪತಿ, ಸೇರಿದಂತೆ ಕೀಲುಕೋಟೆ ನಿವಾಸಿ ಮಹೇಶ್, ಹಾಗೂ ಆಂಬ್ಯುಲೆನ್ಸ್ ಚಾಲಕರಾದ ನಂದೀಶ್ ಮತ್ತು ಚಂದ್ರಶೇಖರ್ ಎಂಬುವರನ್ನು ಬಂಧಿಸಿದ್ದಾರೆ.
ಆರೋಪಿ ಕೀಲುಕೋಟೆ ನಿವಾಸಿ ಮಹೇಶ್ ಬೇರೆಯವರು ಮಾಡಿದ್ದ ಕೊಲೆಯ ಶವವನ್ನು ಸುಡಲು ಸಂಚು ರೂಪಿಸಿದ್ದ. ಈತನಿಗೆ ಮೂವರು ಸಹಕರಿಸಿದ್ದರು. ಈ ಕೃತ್ಯಕ್ಕೆ ಸುಮಾರು ರೂ.ಮೂರು ಲಕ್ಷ ಸುಪಾರಿ ಪಡೆದಿದ್ದರು ಎಂದು ಪೊಲೀಸರು ಹೇಳಿದ್ದಾರೆ. ಬೇರೆ ಆರೋಪಿಗಳು ಕೊಲೆ ಮಾಡಿದ್ದ ಮೃತವ್ಯಕ್ತಿಯ ದೇಹವನ್ನು ಆಂಬ್ಯುಲೆನ್ಸ್ ನಲ್ಲಿ ಕಾಡುಗೋಡಿಯಿಂದ ಕೋಲಾರದ ಎಸ್ ಎನ್ ಆರ್ ಆಸ್ಪತ್ರೆ ಬಳಿಗೆ ತಂದು ನಂತರ ಸಮೀಪದ ಸ್ಮಶಾನದಲ್ಲಿ ಸುಟ್ಟು ಹಾಕಿದ್ದರು.