ಕಾರ್ಯಕ್ರಮಗಳಲ್ಲಿ ಜನದಟ್ಟಣೆ ನಿಯಂತ್ರಣ ಬಿಲ್‌ ಮಂಡನೆ; ಅನುಮತಿ ಪಡೆಯದಿದ್ದರೆ 7 ವರ್ಷ ಜೈಲು

Most read

ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಭವಿಸಿದ ಕಾಲ್ತುಳಿತ ಸಂಭವಿಸಿ 11 ಮಂದಿ ಮೃತಪಟ್ಟ ನಂತರ ಎಚ್ಚೆತ್ತ ಸರ್ಕಾರ ಜನಸಂದಣಿಯನ್ನು ನಿಯಂತ್ರಿಸುವ ಮತ್ತು ಉಲ್ಲಂಘಿಸುವವರಿಗೆ ಶಿಕ್ಷೆ ವಿಧಿಸುವ ವಿದೇಯಕವನ್ನು ಮಂಡಿಸಿದೆ.

ಗೃಹ ಸಚಿವ ಡಾ. ಜಿ ಪರಮೇಶ್ವರ್ ಅವರು ವಿಧಾನಸಭೆಯಲ್ಲಿ ಕರ್ನಾಟಕ ಜನಸಂದಣಿ ನಿಯಂತ್ರಣ (ಕಾರ್ಯಕ್ರಮಗಳು ಮತ್ತು ಸಭೆ ನಡೆಯುವ ಸ್ಥಳಗಳಲ್ಲಿ ಜನಸಂದಣಿಯನ್ನು ನಿರ್ವಹಿಸುವುದು) ವಿಧೇಯಕವನ್ನು ಮಂಡಿಸಿದರು.

ಜೂನ್ 4ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಭವಿಸಿದ ಕಾಲ್ತುಳಿ ದುರಂತದಿಂದ ಎಚ್ಚೆತ್ತ ರಾಜ್ಯ ಕಾಂಗ್ರೆಸ್ ಸರ್ಕಾರದ ಈ ಮಸೂದೆಯನ್ನು ರೂಪಿಸಿದೆ.

ಪ್ರಸ್ತಾವಿತ ಕಾನೂನು ಪ್ರತಿಭಟನೆಗಳನ್ನು ಮೊಟಕುಗೊಳಿಸಬಹುದು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಮೇಲೆ ಪರಿಣಾಮ ಬೀರಬಹುದು ಎಂದು ವಿರೋಧ ಪಕ್ಷದ ಶಾಸಕರು ಕಳವಳ ವ್ಯಕ್ತಪಡಿಸಿದ ನಂತರ ಮಸೂದೆಯನ್ನು ಸದನ ಸಮಿತಿಗೆ ಕಳುಹಿಸಲು ಸರ್ಕಾರ ಒಪ್ಪಿಕೊಂಡಿದೆ.

ಮಸೂದೆ ಮಂಡಿಸಿ ಮಾತನಾಡಿದ ಗೃಹ ಸಚಿವ ಡಾ. ಜಿ ಪರಮೇಶ್ವರ್, ಜೂನ್ 4ರಂದು ಚಿನ್ನಸ್ವಾಮಿ ಕ್ರೀಡಾಂಗಣದ ದುರಂತ  ಸರ್ಕಾರಕ್ಕೆ ಎಚ್ಚರಿಕೆಯ ಗಂಟೆಯಾಗಿದೆ. ಪ್ರಸ್ತಾವಿತ ಮಸೂದೆ ಪ್ರಕಾರ ಮುಂದೆ ಇಂತಹ ದುರಂತಗಳು ಸಂಭವಿಸಿದರೆ ಕಾರ್ಯಕ್ರಮ ಆಯೋಜಕರೇ ಹೊಣೆಗಾರಾಗುತ್ತಾರೆ ಎಂದರು.

ಕನಿಷ್ಠ 7,000 ಜನರು ಸೇರುವ ಯಾವುದೇ ಕಾರ್ಯಕ್ರಮಕ್ಕೆ ಪೊಲೀಸ್ ಅನುಮತಿಯನ್ನು ಕಡ್ಡಾಯವಾಗಿ ಪಡೆಯಬೇಕು. ಕಾರ್ಯಕ್ರಮ ಆಯೋಜಕರು ಉದ್ದೇಶಿತ ಕಾರ್ಯಕ್ರಮಕ್ಕೆ 10 ದಿನಗಳ ಮೊದಲು ಅನುಮತಿಗಾಗಿ ಅರ್ಜಿ ಸಲ್ಲಿಸಬೇಕು. ಕಾರ್ಯಕ್ರಮ ಸಂಘಟಕರು 1 ಕೋಟಿ ರೂಪಾಯಿಗಳ ಪರಿಹಾರ ಬಾಂಡ್ ಸಲ್ಲಿಸಬೇಕು ಎಂದು ಸದನಕ್ಕೆ ವಿವರಿಸಿದರು.

ಒಂದು ವೇಳೆ ಅನುಮತಿಯಿಲ್ಲದೆ ಕಾರ್ಯಕ್ರಮ ಆಯೋಜಿಸಿದರೆ ಆಯೋಜಕರು 7 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು 1 ಕೋಟಿ ರೂಪಾಯಿ ದಂಡ ತೆರಬೇಕಾಗುತ್ತದೆ. ಒಂದು ವೇಳೆ  ಗಾಯಗಳಾದರೆ ಏಳು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ಸಾವು ನೋವುಗಳಿಗೆ 10 ವರ್ಷ ಅಥವಾ ಜೀವಾವಧಿ ಶಿಕ್ಷೆ ವಿಧಿಸಬಹುದಾಗಿರುತ್ತದೆ. ಕಾರ್ಯಕ್ರಮದಲ್ಲಿ ಗಲಭೆ ಉಂಟುಮಾಡಿದರೆ ಅಥವಾ ಶಾಂತಿ ಕದಡಿದರೆ 3 ವರ್ಷ ಜೈಲು ಶಿಕ್ಷೆ ಮತ್ತು 50,000 ರೂ. ದಂಡ ವಿಧಿಸಲಾಗುತ್ತದೆ ಎಂದು ಮಸೂದೆಯಲ್ಲಿ ಹೇಳಲಾಗಿದೆ.  

ಖಾಸಗಿ ಸ್ಥಳಗಳಲ್ಲಿ ನಡೆಸುವ ಮದುವೆಗಳಂತಹ ಕೌಟುಂಬಿಕ ಕಾರ್ಯಕ್ರಮಗಳಿಗೆ ಮಸೂದೆಯ ನಿಬಂಧನೆಗಳ ಅಡಿಯಲ್ಲಿ ವಿನಾಯಿತಿ ಇದೆ.

ಇತ್ತೀಚೆಗೆ, ಯಾವುದೇ ಕಾನೂನು ಚೌಕಟ್ಟು ಇಲ್ಲದೆ ಅಪಾರ ಜನರನ್ನು ಸೇರಿಸಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಶನದ ಸಮಯದಲ್ಲಿ ರೈತರ ಮೇಲೆ ಲಾಠಿ ಪ್ರಹಾರ ಮಾಡಲಾಯಿತು. ಅಂತಹ ಸಂದರ್ಭಕ್ಕೆ ಕಾರಣಗಳೇನು? ಅನುಮತಿ ಪಡೆಯಲಾಗಿತ್ತೇ? ಎಂಬಂತಹ ಹಲವಾರು ಪ್ರಶ್ನೆಗಳು ಉದ್ಭವಿಸುತ್ತವೆ. ಪ್ರತಿಭಟನೆ ಒಂದು ಹಕ್ಕು. ಆದರೆ ಅದು ಸಾರ್ವಜನಿಕ ಜೀವನವನ್ನು ಅನಾನುಕೂಲಗೊಳಿಸಬಾರದುಗೃಹ ಸಚಿವ ಪರಮೇಶ್ವರ್ ವಿವರಣೆ ನೀಡಿದರು.

ಆದರೆ ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಮಸೂದೆಯನ್ನು ಅಂತ್ಯಂತ ಕಠಿಣ ಎಂದು ಟೀಕಿಸಿವೆ. 

ಆಗ ಸಚಿವರು 10 ದಿನಗಳ ಷರತ್ತನ್ನು 5 ದಿನಗಳಿಗೆ ಮತ್ತು ಧಾರ್ಮಿಕ ಕಾರ್ಯಕ್ರಮಗಳಿಗೆ ಪರಿಹಾರ ಬಾಂಡ್ ಅನ್ನು ಅರ್ಧಕ್ಕೆ ಇಳಿಸುತ್ತೇವೆ ಎಂದು ಭರವಸೆ ನೀಡಿದರು. ನಂತರ ಧಾರ್ಮಿಕ ಕಾರ್ಯಕ್ರಮಗಳು, ಸಾಮೂಹಿಕ ವಿವಾಹಗಳು ಮತ್ತು ಸರ್ಕಾರಿ ಕಾರ್ಯಕ್ರಮಗಳಿಗೆ ವಿನಾಯಿತಿ ನೀಡಲಾಗುವುದು ಎಂದರು. ಅಂತಿಮವಾಗಿ ವಿರೋಧ ಪಕ್ಷಗಳ ಆಗ್ರಹಕ್ಕೆ ಮಣಿದ ಸಚಿವ ಪರಮೇಶ್ವರ್‌ ಅವರು, ಮಸೂದೆಯನ್ನು

More articles

Latest article