ಕೋಲಾರ: ನಗರದ ಅನೇಕ ಮನೆಗಳಲ್ಲಿ ಕಳ್ಳತನ ಮಾಡಿ 24 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ನಗರ ಠಾಣೆ ಪೋಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿಯನ್ನು ಶಾಹಿದ್ ನಗರ ನಿವಾಸಿ ರೈಲ್ವೆ ಹಳಿ ಸಮೀಪದ ಮಹಮದ್ ಹನೀಫ್ ಎಂದು ಗುರುತಿಸಲಾಗಿದ್ದು ಈತ 2001ರಲ್ಲಿ ಹಲವು ಮನೆ ಕಳ್ಳತನ ಪ್ರಕರಣಗಳಲ್ಲಿ ಬಾಗಿಯಾಗಿ ತಲೆಮರೆಸಿಕೊಂಡಿದ್ದ. ಈತನ ಪತ್ತೆಗಾಗಿ ಪೋಲೀಸರು ಹುಡುಕಾಟ ನಡೆಸುತ್ತಿದ್ದರು.
ಮೂಲತಃ ಕೋಲಾರದವನೇ ಆದ ಆರೋಪಿ ಮಹಮದ್ ಬೆಂಗಳೂರಿನಲ್ಲಿ ತಲೆಮರೆಸಿಕೊಂಡು ವಾಸವಾಗಿರುವ ಮಾಹಿತಿ ಪೊಲೀಸರಿಗೆ ಲಭ್ಯವಾಗಿತ್ತು. ನಗರ ಠಾಣೆ ಇನ್ಸ್ ಫೆಕ್ಟರ್ ಸದಾನಂದ ಮತ್ತು ಅವರ ಸಿಬ್ಬಂದಿ ಆರೋಪಿಯನ್ನು ಬಂಧಿಸಿದ್ದಾರೆˌ