ಧರ್ಮಸ್ಥಳ ಹತ್ಯೆಗಳು; ಗೃಹ ಸಚಿವರಿಗೆ ತನಿಖೆಯ ವಿವರ ನೀಡಿದ ಎಸ್‌ ಐಟಿ ಮುಖ್ಯಸ್ಥ ಪ್ರಣವ್ ಮೊಹಾಂತಿ

Most read

ಬೆಂಗಳೂರು: ಧರ್ಮಸ್ಥಳ ಗ್ರಾಮದಲ್ಲಿ ಅಪರಾಧ ಕೃತ್ಯ ಎಸಗಿ ಮೃತದೇಹಗಳನ್ನು ಹೂತು ಹಾಕಲಾಗಿರುವ ಪ್ರಕರಣ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡದ (ಎಸ್‌ ಐಟಿ) ಮುಖ್ಯಸ್ಥ ಪ್ರಣವ್ ಮೊಹಾಂತಿ ಅವರು ಗೃಹ ಸಚಿವ ಡಾ.ಜಿ. ಪರಮೇಶ್ವರ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ.

ಧರ್ಮಸ್ಥಳದಲ್ಲಿ ಶವಗಳನ್ನು ಊತು ಹಾಕಿರುವುದಾಗಿ ಸಾಕ್ಷಿ ದೂರುದಾರನೊಬ್ಬ ಹಲವು ಸ್ಥಳಗಳನ್ನು ತೋರಿಸಿದ್ದು ಆ ಜಾಗಗಳಲ್ಲಿ ಲಭ್ಯವಾಗಿರುವ ಅವಶೇಷಗಳ ಮಾಹಿತಿ ನೀಡಿದ್ದಾರೆ. ಪ್ರಕರಣ ಕುರಿತು ಇದುವರೆಗೂ ನಡೆದ ತನಿಖೆ, ಲಭ್ಯವಾಗಿರುವ ಸಾಕ್ಷ್ಯಗಳು, ಎಸ್‌ಐಟಿ ಕೈಗೊಂಡ ತನಿಖಾ ವಿಧಾನಗಳನ್ನು ಕುರಿತು ಗೃಹ ಸಚಿವರಿಗೆ ಮಾಹಿತಿ ನೀಡಿದ್ದಾರೆ. ಈ ಸಂದರ್ಭದಲ್ಲಿ ಎಸ್‌ಐಟಿ ಸದಸ್ಯರಲ್ಲಿ ಒಬ್ಬರಾದ ನೇಮಕಾತಿ ವಿಭಾಗದ ಡಿಐಜಿ ಎಂ.ಎನ್.ಅನುಚೇತ್ ಅವರೂ ಉಪಸ್ಥಿತರಿದ್ದರು.

ನಂತರ ಗೃಹ ಸಚಿವರು ಪ್ರಣವ್‌ ಮೊಹಾಂತಿ ಅವರು ನೀಡಿದ ಮಾಹಿತಿಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಹಂಚಿಕೊಂಡರು ಎಂದು ಗೃಹ ಇಲಾಖೆಯ ಮೂಲಗಳು ಖಚಿತಪಡಿಸಿವೆ.

More articles

Latest article