ಅಂಬೇಡ್ಕರ್‌ ಸ್ಕೂಲ್‌ ಆಫ್‌ ಎಕನಾಮಿಕ್ಸ್‌ ನಲ್ಲಿ ವಿದ್ಯಾರ್ಥಿನಿಯರ ಮೇಲೆ ನಾಯಿಗಳ ದಾಳಿ

Most read

ಬೆಂಗಳೂರು: ಬೆಂಗಳೂರಿನ ನಾಗರಬಾವಿಯಲ್ಲಿರುವ ಪ್ರತಿಷ್ಠಿತ ಡಾ. ಬಿ.ಆರ್.ಅಂಬೇಡ್ಕರ್‌ ಸ್ಕೂಲ್‌ ಆಪ್‌ ಎಕನಾಮಿಕ್ಸ್‌ ಕಾಲೇಜಿನಲ್ಲಿ ಎಂಎಸ್ಸಿ ಇಂಟೆಗ್ರೇಟೆಡ್‌ ಕೋರ್ಸ್ ಓದುತ್ತಿರುವ ಇಬ್ಬರು ವಿದ್ಯಾರ್ಥಿನಿಯರಿಗೆ ಹತ್ತಾರು ಬೀದಿ ನಾಯಿಗಳು ದಾಳಿ ಮಾಡಿ ತೀವ್ರವಾಗಿ ಗಾಯಗೊಳಿಸಿರುವ ಘಟನೆ ಇಂದು ಕಾಲೇಜು ಕ್ಯಾಂಪಸ್ಸಿನಲ್ಲಿ ನಡೆದಿದೆ. ಗಾಯಗೊಂಡಿರುವ ವಿದ್ಯಾರ್ಥಿನಿಯರು ನಾಗರಬಾವಿ ಫೋರ್ಟಿಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಬ್ಬರು ತೀವ್ರವಾಗಿ ಗಾಯೊಂಡಿದ್ದು ICU ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇಂದು ಬೆಳಿಗ್ಗೆ ಕಾಲೇಜಿನಲ್ಲಿ ರೆಸಿಡೆನ್ಷಿಯಲ್‌ ವಿದ್ಯಾರ್ಥಿಗಳಾಗಿ MSc ಮೂರನೇ ವರ್ಷದಲ್ಲಿ ವ್ಯಾಸಂಗ ನಡೆಸುತ್ತಿರುವ ಹಾವೇರಿಯ ಸೌಜನ್ಯ ಮತ್ತು ತೆಲಂಗಾಣದ ರೇಗಾ ನಿಕ್ಷಿತಾ ಎಂಬ ವಿದ್ಯಾರ್ಥಿನಿಯರು ನಡೆದು ಬರುತ್ತಿದ್ದಾಗ ದಿಢೀರನೆ 15-20 ನಾಯಿಗಳು ದಾಳಿ ನಡೆಸಿವೆ. ಕೈ ಕಾಲುಗಳಿಗೆಲ್ಲಾ ಕಚ್ಚಿರುವ ನಾಯಿಗಳ ದಾಳಿಯಿಂದ ವಿದ್ಯಾರ್ಥಿನಿಯರು ತತ್ತರಿಸಿ ಹೋಗಿದ್ದಾರೆ.

ನಂತರ ಅವರ ಸಹಪಾಠಿಗಳು ಇಬ್ಬರನ್ನೂ ಅಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಈ ದಾಳಿಯ ನಂತರ ಆಸ್ಪತ್ರೆಯ ಆಡಳಿತ ಮಂಡಳಿ ಯಾವುದೇ ಜವಾಬ್ದಾರಿ ತೆಗೆದುಕೊಳ್ಳದೇ ವರ್ತಿಸಿದ್ದಾಗಿ ತಿಳಿದು ಬಂದಿದೆ. ನಂತರದಲ್ಲಿ ಈ ವಿಷಯ ಹೊರಗೆ ಹೋಗಿ ವಿವಾದವಾಗುತ್ತದೆ ಎಂದು ಹೆದರಿಕೊಂಡು ಆಸ್ಪತ್ರೆಯ ಖರ್ಚು ವೆಚ್ಚ ನೋಡಿಕೊಳ್ಳುವುದಾಗಿ ಭರವಸೆ ನೀಡಿದೆ ಎನ್ನಲಾಗಿದೆ.

ಇಂತಹ ಪ್ರತಿಷ್ಠಿತ ಕಾಲೇಜಿನಲ್ಲಿ ಅಷ್ಟೊಂದು ನಾಯಿಗಳು ದಾಳಿ ನಡೆಸುವಂತ ಪರಿಸ್ಥಿತಿ ಹೇಗೆ ಉಂಟಾಯಿತು, ವಿದ್ಯಾರ್ಥಿನಿಯರಿಗೆ ಸುರಕ್ಷತೆ ಇಲ್ಲದ ವಾತಾವರಣ ಯಾಕೆ ಉಂಟಾಗಿತ್ತು ಎಂಬುದನ್ನು ಆಡಳಿತ ಮಂಡಳಿಯೇ ವಿವರಿಸಬೇಕು.

More articles

Latest article