ಧರ್ಮಸ್ಥಳ ಪ್ರಕರಣ: ಮಹತ್ವದ 13ನೇ ಸ್ಥಳದಲ್ಲಿ ಜಿಪಿಆರ್ ನೆರವಿನಿಂದ ಶೋಧ ಆರಂಭ

Most read

ಮಂಗಳೂರು: ಧರ್ಮಸ್ಥಳ ಗ್ರಾಮದಲ್ಲಿ ಅಪರಾಧ ಕೃತ್ಯ ಎಸಗಿ ಶವಗಳನ್ನು ಹೂತುಹಾಕಿರುವ ಆರೋಪಕ್ಕೆ ಸಂಬಂಧಪಟ್ಟಂತೆ  ಅನಾಮಿಕ ಸಾಕ್ಷಿ ದೂರುದಾರ ತೋರಿಸಿದ್ದ 13ನೇ ಸ್ಥಳದಲ್ಲಿ ಗ್ರೌಂಡ್ ಪೆನೆಟ್ರೇಟಿಂಗ್ ರಾಡಾರ್ (ಜಿಪಿಆರ್) ಸಾಧನವನ್ನು ಬಳಸಿ ಭೂಮಿಯನ್ನು ಅಗೆಯುವ ಕೆಲಸ ಇಂದು ಮಧ್ಯಾಹ್ನ ಆರಂಭವಾಗಿದೆ.

ಈ ಸ್ಥಳವನ್ನು ಅಗೆಯುವುದಕ್ಕೂ ಮುನ್ನ ಭೂಮಿಯೊಳಗೆ ಮೃತದೇಹಗಳ ಅವಶೇಷಗಳು ಇವೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಗ್ರೌಂಡ್ ಪೆನೆಟ್ರೇಟಿಂಗ್ ರಾಡಾರ್ (ಜಿಪಿಆರ್) ಸಾಧನವನ್ನು ಬಳಸಿ ತಪಾಸಣೆ ನಡೆಸಲಾಗಿತ್ತು. ನಂತರ ಜಿಪಿಆರ್ ಮೂಲಕ ಸಂಗ್ರಹಿಸಿರುವ ಭೂಮಿಯೊಳಗಿನ ಚಿತ್ರಗಳನ್ನು ತಜ್ಞರು ಪರಿಶೀಲನೆ ನಡೆಸಿದ್ದರು. ನಂತರ ಸಣ್ಣ ಯಂತ್ರದ ಮೂಲಕ ನೆಲವನ್ನು ಅಗೆಯುವ ಕೆಲಸ ಆರಂಭಿಸಲಾಗಿತ್ತು. ನಂತರ ಜೆಸಿಬಿ ಮೂಲಕ ಭೂಮಿ ಅಗೆಯುವ ಕೆಲಸ ಮುಂದುವರೆದಿದೆ.

ಎಸ್ ಐ ಟಿ ಮಖ್ಯಸ್ಥ ಡಿಜಿಪಿ ಪ್ರಣವ್ ಮೊಹಾಂತಿ ಸ್ಥಳಕ್ಕೆ ಭೇಡಿ ನೀಡಿ ಕೆಲವು ಸಲಹೆ ಸೂಚನೆಗಳನ್ನು ನೀಡಿ ತೆರಳಿದ್ದಾರೆ.

ಸ್ಥಳದಲ್ಲಿರುವ ಸಾಕ್ಷಿ ದೂರುದಾರ ಎಲ್ಲೆಲ್ಲಿ ಅಗೆಯಬೇಕೆಂದು ಸೂಚನೆ ನೀಡುತ್ತಿದ್ದಾರೆ. ವಿಶೇಷ ತನಿಖಾ ದಳ (ಎಸ್ಐಟಿ) ಎಸ್.ಪಿ ಜಿತೇಂದ್ರ ಕುಮಾರ್ ದಯಾಮ, ಪುತ್ತೂರು ಉಪವಿಭಾಗಾಧಿಕಾರಿ ಸ್ಟೆಲ್ಲಾ ವರ್ಗೀಸ್ ಅವರೂ ಮಾರ್ಗ ದರ್ಶನ ಮಾಡುತ್ತಿದ್ದಾರೆ.

More articles

Latest article