ಮಂಗಳೂರು: ಧರ್ಮಸ್ಥಳ ಗ್ರಾಮದಲ್ಲಿ ನಡೆದಿರುವ ಹತ್ಯೆಗಳ ಕುರುಹುಗಳನ್ನು ಪತ್ತೆ ಹಚ್ಚಲು ಪೆನೆಟ್ರೇಟಿಂಗ್ ರಾಡಾರ್ (ಜಿಪಿಆರ್) ಬಳಸಲು ಎಸ್ ಐಟಿ ನಿರ್ಧರಿಸಿದೆ. ಈಗಾಗಲೇ ಜಿಪಿಆರ್ ಇಂದು ಬೆಳ್ತಂಗಡಿಗೆ ಆಗಮಿಸಿದ್ದು ನಾಳೆ ಅನಾಮಿಕ ಸಾಕ್ಷಿ ದೂರುದಾರ ತೋರಿಸಿರುವ 13ನೇ ಸ್ಥಳದಲ್ಲಿ ಅವಶೇಷಗಳಿಗಾಗಿ ಹುಡುಕಾಟ ನಡೆಯಲಿದೆ.
13ನೇ ಸ್ಥಳ ತೀವ್ರ ಕುತೂಲಹ ಕೆರಳಿಸಿದೆ. ಈಸ್ಥಳದಲ್ಲಿ ಅತಿ ಹೆಚ್ಚು ಶವಗಳನ್ನು ಹೂತಿರುವುದಾಗಿ ಸಾಕ್ಷಿ ದೂರುದಾರ ಹೇಳಿದ್ದಾನೆ.
ಇದುವರೆಗೆ, ಅನಾಮಿಕ ದೂರುದಾರ ತೋರಿಸಿದ 15 ಸ್ಥಳಗಳಲ್ಲಿ ಎಸ್ ಐಟಿ ಶೋಧ ನಡೆಸಿದ್ದು, 6 ನೇ ಜಾಗದಲ್ಲಿ ಮಾತ್ರ ಮಾನವ ದೇಹದ ಅವಶೇಷಗಳು ಪತ್ತೆಯಾಗಿವೆ. ಉಳಿದ ಸ್ಥಳಗಳಲ್ಲಿ ಕುರುಹುಗಳು ಪತ್ತೆಯಾಗದ ಹಿನ್ನೆಲೆಯಲ್ಲಿ ಜಿಪಿಆರ್ ತಂತ್ರಜ್ಞಾನ ಬಳಸಲು ಎಸ್ಐಟಿ ನಿರ್ಧರಿಸಿದೆ.