ಮತಕಳ್ಳತನ ವಿರುದ್ಧ ಇಂಡಿಯಾ ಒಕ್ಕೂಟ ಪ್ರತಿಭಟನೆ; ಮೋದಿ ಸರ್ಕಾರ ಚುನಾವಣಾ ಆಯೋಗದ ವಿರುದ್ಧ ಆಕ್ರೋಶ

Most read

ನವದೆಹಲಿ: 2024ರ ಲೋಕಸಭೆ ಚುನಾವಣೆಯಲ್ಲಿ ‘ಮತ ಕಳ್ಳತನ’ ನಡೆದಿರುವುದು ಮತ್ತು ನವಂಬರ್‌ ನಲ್ಲಿ ವಿಧಾನಸಭಾ ಚುನಾವಣೆ ನಡೆಯಲಿರುವ ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ ಐ ಆರ್‌)  ಆರೋಪಗಳಿಗೆ ಸಂಬಂಧಿಸಿದಂತೆ  ಇಂಡಿಯಾ ಒಕ್ಕೂಟ ಪ್ರತಿಭಟನೆ ಹಮ್ಮಿಕೊಂಡಿತ್ತು. ಲೋಕಸಭೆ ವಿರೋದ ಪಕ್ಷದ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಇಂಡಿಯಾ ಮೈತ್ರಿಕೂಟದ ಸಂಸದರು ಸಂಸತ್‌ ಭವನದಿಂದ ಚುನಾವಣಾ ಆಯೋಗದ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ  ನಡೆಸಿದರು.

ಆದರೆ ಈ ಪ್ರತಿಭಟನೆಗೆ ಅನುಮತಿ ಪಡೆದಿಲ್ಲ ಎಂದು ಪೊಲೀಸರು ಪ್ರತಿಭಟನಾಕಾರನ್ನು ತಡೆದಿದ್ದಾರೆ. ಇದರಿಂದ ಕೆರಳಿದ ಹಲವು ಸಂಸದರು ಬ್ಯಾರಿಕೇಡ್‌ ಗಳನ್ನು  ಹತ್ತುವ ಪ್ರಯತ್ನ ನಡೆಸಿದ್ದಾರೆ. ಪ್ರತಿಭಟನೆಗೆ ಅನುಮತಿ ನೀಡದ ಹಿನ್ನೆಲೆಯಲ್ಲಿ ಇಂಡಿಯಾ ಒಕ್ಕೂಟದ ನಾಯಕರು ನಡುರಸ್ತೆಯಲ್ಲೇ ಕುಳಿತು ಚುನಾವಣಾ ಆಯೋಗ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ.

 ‘ಮತಕಳ್ಳತನ’ ಕುರಿತು ಪ್ರತಿಭಟನೆಯನ್ನು ಮತ್ತಷ್ಟು ತೀವ್ರಗೊಳಿಸಲು ಕಾಂಗ್ರೆಸ್‌ ಅಧ್ಯಕ್ಷ, ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ‘ಇಂಡಿಯಾ’ ಮೈತ್ರಿಕೂಟದ ಎಲ್ಲ ನಾಯಕರಿಗೆ ಇಂದು ರಾತ್ರಿ ಔತಣಕೂಟ ಏರ್ಪಡಿಸಿದ್ದಾರೆ. https://googleads.g.doubleclick.net/pagead/ads?us_privacy=1—&gpp_sid=-1&client=ca-pub-4861350176551585&output=html&h=280&adk=3209511924&adf=3619823719&w=752&abgtt=6&fwrn=4&fwrnh=100&lmt=1754895351&num_ads=1&rafmt=1&armr=3&sem=mc&pwprc=7132580783&ad_type=text_image&format=752×280&url=https%3A%2F%2Fwww.kannadaprabha.com%2Fnation%2F2025%2FAug%2F11%2Fvote-chori-allegations-oppositions-protest-march-to-election-commission-from-parliament&fwr=0&pra=3&rh=188&rw=752&rpe=1&resp_fmts=3&wgl=1&fa=27&uach=WyJXaW5kb3dzIiwiMTAuMC4wIiwieDg2IiwiIiwiMTM4LjAuNzIwNC4xODQiLG51bGwsMCxudWxsLCI2NCIsW1siTm90KUE7QnJhbmQiLCI4LjAuMC4wIl0sWyJDaHJvbWl1bSIsIjEzOC4wLjcyMDQuMTg0Il0sWyJHb29nbGUgQ2hyb21lIiwiMTM4LjAuNzIwNC4xODQiXV0sMF0.&dt=1754895351970&bpp=4&bdt=995&idt=4&shv=r20250805&mjsv=m202508050101&ptt=9&saldr=aa&abxe=1&cookie=ID%3D611e95d9c9cc6850%3AT%3D1732172671%3ART%3D1754895340%3AS%3DALNI_MakIBVoyu7fFrLQTogoL__2UotWCg&gpic=UID%3D00000f70711bc1a2%3AT%3D1732172671%3ART%3D1754895340%3AS%3DALNI_MbNmB9u6klFxXeYsT3TolTJc8PSWQ&eo_id_str=ID%3D9043691bf676ba38%3AT%3D1747807919%3ART%3D1754895340%3AS%3DAA-AfjalmN6Yq1bZJcwF_Xuj0A70&prev_fmts=0x0&nras=2&correlator=2418346824395&frm=20&pv=1&u_tz=330&u_his=50&u_h=1080&u_w=1920&u_ah=1040&u_aw=1920&u_cd=24&u_sd=1&dmc=8&adx=383&ady=1697&biw=1905&bih=953&scr_x=0&scr_y=0&eid=95362655%2C95366911%2C95368228%2C31093919%2C95368937%2C95359265&oid=2&pvsid=5624399615014752&tmod=1499232057&uas=0&nvt=1&ref=https%3A%2F%2Fwww.kannadaprabha.com%2Fnation&fc=1408&brdim=0%2C0%2C0%2C0%2C1920%2C0%2C1920%2C1040%2C1920%2C953&vis=1&rsz=%7C%7Cs%7C&abl=NS&fu=128&bc=31&bz=1&td=1&tdf=2&psd=W251bGwsbnVsbCxudWxsLDNd&nt=1&pgls=CAk.&ifi=11&uci=a!b&btvi=1&fsb=1&dtd=18

More articles

Latest article