ನವದೆಹಲಿ: ಏರ್ ಇಂಡಿಯಾ ವಿಮಾನ ಸಂಸ್ಥೆ ಮತ್ತೆ ಸುದ್ದಿಯಲ್ಲಿದೆ. ಕೇರಳದ ತಿರುವನಂತಪುರದಿಂದ ದೆಹಲಿಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಪರಿಣಾಮ ಚೆನ್ನೈಗೆ ಹಿಂತುಗಿದೆ ಎಂದು ತಿಳಿದು ಬಂದಿದೆ. ಹವಾಮಾನ ವೈಪರೀತ್ಯದ ಮತ್ತು ವಿಮಾನದಲ್ಲಿ, ತಾಂತ್ರಿಕ ದೋಷ ಕಂಡುಬಂದಿತ್ತು. ಅದ್ದರಿಂದ ಏರ್ ಇಂಡಿಯಾ ‘ಏರ್ ಬಸ್ ಎ320’ ವಿಮಾನವು ಎರಡು ಗಂಟೆಗಳಿಗೂ ಹೆಚ್ಚು ಕಾಲ ಹಾರಾಟ ನಡೆಸಿ ಚೆನ್ನೈನಲ್ಲಿ ತುರ್ತು ಭೂಸ್ಪರ್ಶ ಮಾಡಿದೆ ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ.
ಈ ವಿಮಾನದಲ್ಲಿ ಕಾಂಗ್ರೆಸ್ ಹಿರಿಯ ಮುಖಂಡ ಕೆ.ಸಿ. ವೇಣುಗೋಪಾಲ್ ಅವರೂ ಪ್ರಯಾಣಿಸುತ್ತಿದ್ದರು. ಈ ಘಟನೆಯ ನಂತರ ಅವರು ವಿಮಾನಯಾನದ ಸುರಕ್ಷತೆ ಕುರಿತು ಎಕ್ಸ್ ನಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ.
ಈ ವಿಮಾನವು ನಿನ್ನೆ ಸಂಜೆ ಸಂಜೆ ತಿರುವನಂತಪುರದಿಂದ ದೆಹಲಿಗೆ ಹೊರಟಿತ್ತು. ವಿಮಾನದಲ್ಲಿ ತಾಂತ್ರಿಕ ಸಮಸ್ಯೆ ಮತ್ತು ಜತೆಗೆ ಹವಾಮಾನವು ವೈಪರೀತ್ಯವೂ ಕಂಡು ಬಂದಿದ್ದರಿಂದ ವಿಮಾನವನ್ನು ಚೆನ್ನೈನಲ್ಲಿ ತುರ್ತಾಗಿ ಇಳಿಸಲಾಯಿತು ಎಂದು ತಿಳಿಸಿದೆ. ವಿಮಾನದಲ್ಲಿ ಸೇರಿದಂತೆ ನೂರಕ್ಕೂ ಹೆಚ್ಚು ಪ್ರಯಾಣಿಕರು ಇದ್ದರು.
ವೇಣುಗೋಪಾಲ್ ಅವರು ಎಕ್ಸ್ ನಲ್ಲಿ ಆರಂಭದಲ್ಲೇ ವಿಮಾನವು ತಡವಾಗಿ ಹೊರಟಿತು..ವಿಮಾನ ಟೇಕ್ ಆಫ್ ಆದ ಒಂದು ಗಂಟೆಯ ನಂತರ ವಿಮಾನದಲ್ಲಿ ಸಿಗ್ನಲ್ ಸಮಸ್ಯೆ ಇದೆ ಎಂದು ಪೈಲಟ್ ಘೋಷಿಸಿ ವಿಮಾನವನ್ನು ಚೆನ್ನೈಗೆ ತಿರುಗಿಸಿದರು. ತಾಂತ್ರಿಕ ದೋಷ ಇದ್ದರೂ, ವಿಮಾನವು ಸುಮಾರು 2 ಗಂಟೆ ವಿಮಾನ ನಿಲ್ದಾಣದ ಸುತ್ತ ಸುತ್ತುತ್ತಾ ಇತ್ತು. ಲ್ಯಾಂಡಿಂಗ್ ಮಾಡಲು ಅನುಮತಿ ಸಿಕ್ಕಿತು. ಆದರೆ ಲ್ಯಾಂಡಿಂಗ್ ಮಾಡುವಾಗ ಅದೇ ರನ್ ವೇಯಲ್ಲಿ ಮತ್ತೊಂದು ವಿಮಾನ ಇತ್ತು. ಹೀಗಾಗಿ ಪೈಲಟ್ ಮತ್ತೊಮ್ಮೆ ವಿಮಾನವನ್ನು ಮತ್ತೆ ಟೇಕ್ ಆಫ್ ಮಾಡಿದರು. ಎರಡನೇ ಬಾರಿ ವಿಮಾನವನ್ನು ಸುರಕ್ಷಿತವಾಗಿ ಲ್ಯಾಂಡ್ ಮಾಡಲಾಯಿತು. ನಾವೆಲ್ಲರೂ ಅದೃಷ್ಟವಶಾತ್ ಬದುಕುಳಿದಿದ್ದೇವೆ ಎಂದು ಬರೆದುಕೊಂಡಿದ್ದಾರೆ.