ಧರ್ಮಸ್ಥಳ ಹತ್ಯೆಗಳು: ಬಾಹುಬಲಿ ಬೆಟ್ಟದ ಸಮೀಪದಲ್ಲಿ ಶೋಧ ಆರಂಭ: ಕುತೂಹಲ ಮೂಡಿಸಿರುವ ಈ ಪಾಯಿಂಟ್‌

Most read

ಧರ್ಮಸ್ಥಳ ಹತ್ಯೆಗಳು: ಬಾಹುಬಲಿ ಬೆಟ್ಟದ ಸಮೀಪದಲ್ಲಿ ಶೋಧ ಆರಂಭ: ಕುತೂಹಲ ಮೂಡಿಸಿರುವ ಈ ಪಾಯಿಂಟ್‌

ಮಂಗಳೂರು: ಧರ್ಮಸ್ಥಳ ಗ್ರಾಮದಲ್ಲಿ ಹತ್ಯೆ ಮಾಡಿರುವ ಶವಗಳನ್ನು ಹೂತುಹಾಕಿರುವುದಾಗಿ ಹೇಳಿರುವ ಅನಾಮಿಕ ಸಾಕ್ಷಿ ದೂರುದಾರ ತೋರಿಸಿರುವ ಹೊಸ ಜಾಗದಲ್ಲಿ ವಿಶೇಷ ತನಿಖಾ ತಂಡ (ಎಸ್‌ಐಟಿ) ಇಂದು ಶೋಧ ಕಾರ್ಯ ಆರಂಭಿಸಿದೆ. ಧರ್ಮಸ್ಥಳದ ಬಾಹುಬಲಿ ಬೆಟ್ಟಕ್ಕೆ ತೆರಳುವ ದಾರಿಯ ಸಮೀಪದಲ್ಲಿರುವ ಬೋಳಿಯಾರು ಎಂಬಲ್ಲಿ ಸ್ಥಳವನ್ನು ತೋರಿಸಿದ್ದಾನೆ. ಇಂದು ಅಲ್ಲಿ ಅಗೆಯಲಾಗುತ್ತಿದೆ. ಈ ಈ ಸ್ಥಳಕ್ಕೆ 15 ನೇ ಪಾಯಿಂಟ್‌ ಎಂದು ಹೆಸರಿಸಲಾಗಿದೆ. ಈ ಸ್ಥಳದಲ್ಲಿ ಶವಗಳ ಅವಶೇಷ ಪತ್ತೆಯಾಗಲಿದೆಯೇ ಎಂದು ಕಾದುನೋಡಬೇಕಿದೆ.

ಪುತ್ತೂರು ಉಪವಿಭಾಗಾಧಿಕಾರಿ ಸ್ಟೆಲ್ಲಾ ವರ್ಗೀಸ್‌ ಎಸ್‌.ಪಿ. ಜಿತೇಂದ್ರ ಕುಮಾರ್ ದಯಾಮ, ವಿಧಿ ವಿಜ್ಞಾನ ತಜ್ಞರು ಅವರ ಉಸ್ತುವಾರಿಯಲ್ಲಿ ಶೋಧಕಾರ್ಯ ಆರಂಭವಾಗಿದೆ.

ಇದುವರೆಗೂ ಸಾಕ್ಷಿ ದೂರುದಾರ ಧರ್ಮಸ್ಥಳ ಗ್ರಾಮದಲ್ಲಿ ಮೃತ ದೇಹಗಳನ್ನು ಹೂತಿಟ್ಟಿರುವ 15 ಜಾಗಗಳನ್ನು ತೋರಿಸಿದ್ದು 14 ಜಾಗಗಳಲ್ಲಿ ಶೋಧಕಾರ್ಯ ಪೂರ್ಣಗೊಂಡಿದೆ. ಈ ಪೈಕಿ ಎರಡು ಸ್ಥಳದಲ್ಲಿ ಮಾತ್ರ ಮೃತದೇಹಗಳ ಕುರುಹು ಪತ್ತೆಯಾಗಗಿದೆ.

ಆರಂಭದಲ್ಲಿ ಗುರುತಿಸಿದ್ದ 13ನೇ ಸ್ಥಳದಲ್ಲಿ ಇನ್ನೂ ಉತ್ಖನನ ನಡೆಯಬೇಕಿದೆ.

More articles

Latest article