ಹೈಕೋರ್ಟ್‌ ನ್ಯಾಯಮೂರ್ತಿ ಹುದ್ದೆಗೆ ಬಿಜೆಪಿ ವಕ್ತಾರೆ ಆಯ್ಕೆ; ಎನ್‌ ಸಿಪಿ, ಕಾಂಗ್ರೆಸ್‌ ಆಕ್ಷೇಪ

Most read

ನವದೆಹಲಿ: ಸುಪ್ರೀಂ ಕೋರ್ಟ್ ಕೊಲಿಜಿಯಂ ಮುಂಬೈ ಹೈಕೋರ್ಟ್‌ ನ್ಯಾಯಮೂರ್ತಿಗಳ ಹುದ್ದೆಗೆ ಬಿಜೆಪಿ ವಕ್ತಾರೆಯಾಗಿದ್ದ ಆರತಿ ಸಾಥೆ ಅವರನ್ನು ಶಿಫಾರಸು ಮಾಡಿರುವುದಕ್ಕೆ ಎನ್ ಸಿಪಿ ಮತ್ತು ಕಾಂಗ್ರೆಸ್ ಬಿಜೆಪಿಯನ್ನು ತರಾಟೆಗೆ ತಗೆದುಕೊಂಡಿವೆ.

ಸಾರ್ವಜನಿಕ ವೇದಿಕೆಯಲ್ಲಿ ಆಡಳಿತ ಪಕ್ಷವನ್ನು ಬೆಂಬಲಿಸಿದ ವ್ಯವಕೀಲೆಯನ್ನು ನ್ಯಾಯಮೂರ್ತಿಯಾಗಿ ನೇಮಿಸುವುದು ಪ್ರಜಾಪ್ರಭುತ್ವಕ್ಕೆ ದೊಡ್ಡ ಪೆಟು ಎಂದು ರೋಹಿತ್ ವ್ಯಾಖ್ಯಾನಿಸಿದ್ದಾರೆ. ಇದು ಭಾರತೀಯ ನ್ಯಾಯಾಂಗ ವ್ಯವಸ್ಥೆಯ ನಿಷ್ಪಕ್ಷಪಾತ ನ್ಯಾಯದಾನಕ್ಕೆ ದೂರಗಾಮಿ ಪರಿಣಾಮಗಳನ್ನು ಬೀರುತ್ತದೆ ಎಂದು ಅವರು ಹೇಳಿದ್ದಾರೆ.

ಎನ್‌ಸಿಪಿ ಪ್ರಧಾನ ಕಾರ್ಯದರ್ಶಿ, ಶಾಸಕ ರೋಹಿತ್ ಪವಾರ್ ಆರತಿ ಅವರ ನೇಮಕ ಕುರಿತು ಆಕ್ಷೇಪ ವ್ಯಕ್ತಪಡಿಸಿದ್ದಾರೆ.  ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ. ಆರತಿ ಸಾಥೆ ಫೋಟೋವನ್ನು ಅವರು ಪೋಸ್ಟ್ ಮಾಡಿದ್ದಾರೆ. ಅದರಲ್ಲಿ ಆಗಿನ ಬಿಜೆಪಿ ರಾಜ್ಯ ಅಧ್ಯಕ್ಷ ಚಂದ್ರಶೇಖರ್ ಬವಾಂಕುಲೆ ಬಿಡುಗಡೆ ಮಾಡಿದ ರಾಜ್ಯ ವಕ್ತಾರರ ಪಟ್ಟಿ ಗೋಚರಿಸುತ್ತದೆ. ಆರತಿ ಸಾಥೆ ಅವರು ಬಿಜೆಪಿ ಮಹಾರಾಷ್ಟ್ರ ವಕ್ತಾರೆಯಾಗಿ ನೇಮಕಗೊಂಡಿದ್ದಾರೆ.

ಹೈಕೋರ್ಟ್‌ನಲ್ಲಿ ನ್ಯಾಯಮೂರ್ತಿಗಳ ಹುದ್ದೆಗೆ ನೇಮಕವಾಗುವ ವ್ಯಕ್ತಿ ರಾಜಕೀಯ ಹಿನ್ನೆಲೆಯನ್ನು ಹೊಂದಿದ್ದರೆ ಮತ್ತು ಆಡಳಿತ ಪಕ್ಷದ ಸ್ಥಾನವನ್ನು ಹೊಂದಿದ್ದರೆ, ತೀರ್ಪು ನೀಡುವ ಪ್ರಕ್ರಿಯೆಯನ್ನು ರಾಜಕೀಯ ರೀತಿಯಲ್ಲಿ ನಡೆಸಲಾಗುವುದಿಲ್ಲ ಎಂದು ಯಾರು ಖಾತರಿಪಡಿಸುತ್ತಾರೆ? ರಾಜಕೀಯ ವ್ಯಕ್ತಿಯ ನೇಮಕಾತಿಯು ಇಡೀ ನ್ಯಾಯ ವಿತರಣಾ ಪ್ರಕ್ರಿಯೆಯ ಮೇಲೆ ಪ್ರಶ್ನಾರ್ಥಕ ಚಿಹ್ನೆಯನ್ನು ಸೃಷ್ಟಿಸುವುದಿಲ್ಲವೇ ಎಂದು ಪ್ರಶ್ನಿಸಿದ್ದಾರೆ.

ಮಹಾರಾಷ್ಟ್ರ ಕಾಂಗ್ರೆಸ್ ಕೂಡಾ ಆರತಿ ಅವರ ಆಯ್ಕೆಯನ್ನು ಪ್ರಶ್ನಿಸಿದೆ. ಇದು ನಾಚಿಕೆಗೇಡಿನ ಕೃತ್ಯ. ಬಿಜೆಪಿ ವಕ್ತಾರರನ್ನು ನ್ಯಾಯಮೂರ್ತಿಗಳ ಹುದ್ದೆಗಳಿಗೆ ಆಯ್ಕೆ ಮಾಡಲಾಗುತ್ತಿದೆ. ಇದು ಬಿಜೆಪಿ ಬಹಿರಂಗಪಡಿಸಿದ ಪ್ರಜಾಪ್ರಭುತ್ವದ ಕ್ರೂರ ಜೋಕ್ ಎಂದು ಟೀಕಿಸಿದೆ.

More articles

Latest article