ʼರಾಜʼ ಎಂಬ ಪರಿಕಲ್ಪನೆಯನ್ನು ವಿರೋಧಿಸುತ್ತೇನೆ: ರಾಹುಲ್‌ ಗಾಂಧಿ

Most read

ನವದೆಹಲಿ: ನಾನು ರಾಜನಾಗಲು ಬಯಸುವುದಿಲ್ಲ. ಆ ಪರಿಕಲ್ಪನೆಯನ್ನೇ ವಿರೋಧಿಸುತ್ತೇನೆ ಎಂದು ಕಾಂಗ್ರೆಸ್ ಮುಖಂಡ ಲೋಕಸಭೆ ವಿಪಕ್ಷ ನಾಯಕ  ರಾಹುಲ್ ಗಾಂಧಿ ಹೇಳಿದ್ದಾರೆ.

ಇಂದು ಇಲ್ಲಿನ ವಿಜ್ಞಾನ ಭವನದ ಸಭಾಗಂಣದಲ್ಲಿ ನಡೆದ ಪಕ್ಷದ ವಾರ್ಷಿಕ ಕಾನೂನು ಸಮಾವೇಶವನ್ನು ಉದ್ದೇಶಿಸಿ ಅವರು ಮಾತನಾಡಿದರು.

ರಾಹುಲ್‌ ಗಾಂಧಿ ಭಾಷಣ ಆರಂಭಿಸುತ್ತಿದ್ದಂತೆಯೇ ಸಭಾಂಗಣದಲ್ಲಿ ಕುಳಿತಿದ್ದ ಸಭಿಕರು ದೇಶದ ರಾಜ ಹೇಗಿರಬೇಕು? ರಾಹುಲ್ ಗಾಂಧಿ ಹಾಗಿರಬೇಕು (ಇಸ್ ದೇಶ್ ಕಾ ರಾಜಾ ಕೈಸಾ ಹೋ, ರಾಹುಲ್ ಗಾಂಧಿ ಜೈಸಾ ಹೋ) ಎಂದು ಘೋಷಣೆಗಳನ್ನು ಕೂಗಲಾರಂಭಿಸಿದರು.

ಆಗ ಪ್ರತಿಕ್ರಿಯೆ ನೀಡಿದ  ರಾಹುಲ್, ಇಲ್ಲ ಬಾಸ್‌, ನಾನು ರಾಜನಲ್ಲ. ನಾನು ರಾಜನಾಗಲು ಬಯಸುವುದಿಲ್ಲ. ನಾನು ಅದರ ವಿರುದ್ಧ. ಆ ಪರಿಕ್ಷಲನೆಯನ್ನೇ ವಿರೋಧಿಸುತ್ತೇನೆ ಎಂದರು.

ಕೆಲವು ದಿನಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ‘ರಾಜ’ ಎಂದು ಟೀಕಿಸಿದ್ದ ರಾಹುಲ್ ಗಾಂಧಿ, ಅವರು ಜನರ ಧ್ವನಿಯನ್ನು ಅಲಿಸುತ್ತಿಲ್ಲ ಎಂದು ಆರೋಪಿಸಿದ್ದರು

More articles

Latest article