ಸಾವಿನ 50 ವರ್ಷಗಳ ನಂತರವೂ ಡಿಎನ್‌ ಎ ಪರೀಕ್ಷೆ ಸಾಧ್ಯ: ಹೈಕೋರ್ಟ್‌ ವಕೀಲ ಹನುಮಂತರಾಯ ಅಭಿಪ್ರಾಯ

Most read

ಬೆಂಗಳೂರು: ಡಿಎನ್‌ಎ ಪರೀಕ್ಷೆಯ ಫಲಿತಾಂಶ ಅತ್ಯಂತ ನಿಖರವಾಗಿರುತ್ತದೆ ಮತ್ತು 10 ಲಕ್ಷ ಜನರಲ್ಲಿ ಕೇವಲ ಒಬ್ಬ ವ್ಯಕ್ತಿಯ ಫಲಿತಾಂಶ ಮಾತ್ರವೇ ತಪ್ಪು ಬರಬಹುದು ಎಂದು ಹೈಕೋರ್ಟ್‌ ಹಿರಿಯ ವಕೀಲ ಸಿ.ಎಚ್‌.ಹನುಮಂತರಾಯ ಅಭಿಪ್ರಾಯ ಪಟ್ಟಿದ್ದಾರೆ.

ಧರ್ಮಸ್ಥಳ ಗ್ರಾಮದಲ್ಲಿ ಗುರುವಾರ ಪತ್ತೆಯಾಗಿರುವ ಮೂಳೆಗಳ ಮರಣೋತ್ತರ ಪರೀಕ್ಷೆಯ ನಂತರ ನಡೆಯುವ ಕಾನೂನು ಪ್ರಕ್ರಿಯೆ ಕುರಿತು ಅವರು ಮಾಹಿತಿ ನೀಡಿದ್ದಾರೆ.

ತನಿಖೆಯಲ್ಲಿ ಡಿಎನ್‌ಎ ಬಹುಮುಖ್ಯ ಪಾತ್ರ ವಹಿಸಲಿದೆ. ಸಾವಿನ ನಿಖರ ಕಾರಣ ಪತ್ತೆಹಚ್ಚುವ ವಿವಿಧ ಪರೀಕ್ಷೆಗಳನ್ನೂ ನಡೆಸಬಹುದಾಗಿದೆ. ಅವುಗಳಲ್ಲಿ ಬಹುಮುಖ್ಯವಾಗಿ ಮೂಳೆಗಳಲ್ಲಿನ ಮೃದುವಾದ ರಕ್ತಾವೃತ ಕೋಶವನ್ನು (ಬೋನ್‌ ಮ್ಯಾರೊ) ತೆಗೆದುಕೊಂಡು ಡಿಎನ್‌ ಎ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಮೃತರ ಪೋಷಕರು, ಸಂಬಂಧಿಗಳ ಜೊತೆ ಹೋಲಿಕೆ ಮಾಡಲಾಗುತ್ತದೆ. ವಿಶೇಷ ಎಂದರೆ ಸಾವಿನ 50 ವರ್ಷಗಳ ನಂತರವೂ ಮೂಳೆಗಳಲ್ಲಿನ ಮೃದು ಕೋಶವನ್ನು ಪಡೆಯಲು ಸಾಧ್ಯವಿದೆ ಎಂದು ಅವರು ತಿಳಿಸುತ್ತಾರೆ.

More articles

Latest article