ತಿರುವನಂತಪುರ: ಕೇರಳ ಮಾಜಿ ಮುಖ್ಯಮಂತ್ರಿ, ಸಿಪಿಐ (ಎಂ)ನ ಹಿರಿಯ ಮುಖಂಡ ವಿ. ಎಸ್. ಅಚ್ಯುತಾನಂದನ್ ಅವರು ಇಂದು ನಿಧನ ಹೊಂದಿದ್ದಾರೆ. ಜೂನ್ 23ರಂದು ಹೃದಯಾಘಾತದ ನಂತರ ಅವರನ್ನು ತಿರುವನಂತಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. 101 ವರ್ಷದ ಅಚ್ಯುತಾನಂದನ್ ಅವರಿಗೆ ತಜ್ಞ ವೈದ್ಯರು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡುತ್ತಿದ್ದರು. ಅಲಪ್ಪುಳದಲ್ಲಿ ಬುಧವಾರ ಅಂತ್ಯಕ್ರಿಯೆ ನಡೆಸಲಾಗುತ್ತದೆ ಎಂದು ತಿಳಿದು ಬಂದಿದೆ.
10 ಚುನಾವಣೆಗಳನ್ನು ಎದುರಿಸಿ ಏಳು ಬಾರಿ ವಿಧಾನಸಭೆ ಪ್ರವೇಶಿಸಿದ್ದ ಅಚ್ಯುತಾನಂದನ್, 2006ರಿಂದ 2011ರವರೆಗೆ ಕೇರಳ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು. ಕಮ್ಯುನಿಸ್ಟ್ ಪಕ್ಷದ ವಿಭಜನೆಯ ನಂತರ 1964ರಲ್ಲಿ ಭಾರತದ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ವಾದಿ)ವನ್ನು ಸ್ಥಾಪನೆಗೆ ಇವರು ಪ್ರಮುಖ ಕಾರಣರಾಗಿದ್ದಾರೆ.