ಬೆಂಗಳೂರು: ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರ ಅಧ್ಯಕ್ಷತೆಯಲ್ಲಿ ನಡೆದ 6ನೇ ರಾಜ್ಯಮಟ್ಟದ ನಾರ್ಕೋ ಸಮನ್ವಯ ಸಮಿತಿ ಸಭೆ ನಡೆಯಿತು. ಈ ಸಭೆಯಲ್ಲಿ ಮಾದಕವಸ್ತು ತಡೆಗಟ್ಟುವಿಕೆಗೆ ಸಂಬಂಧಿಸಿದ ಹಲವು ಮಹತ್ವದ ತೀರ್ಮಾನಗಳು ಕೈಗೊಳ್ಳಲಾಗಿದೆ. ಆ ತೀರ್ಮಾನಗಳು ಹೀಗಿವೆ.
ವೈಬ್ಸೈಟ್ ಅಭಿವೃದ್ಧಿ ಮತ್ತು ಬಳಕೆ: ಡ್ರಗ್ಸ್ ತಡೆಗೆ ಸಂಬಂಧಿಸಿದ ಮಾಹಿತಿ ಕನ್ನಡದಲ್ಲಿಯೂ ಲಭ್ಯವಾಗುವಂತೆ ವೆಬ್ಸೈಟ್ ನವೀಕರಣೆ. ಜಿಲ್ಲಾಧಿಕಾರಿಗಳಿಗೆ ಪಾಸ್ ವರ್ಡ್ ನೀಡಲಾಗಿದ್ದು ವರದಿಯ ಆಧಾರದಲ್ಲಿ ಕ್ರಮ ಕೈಗೊಳ್ಳುವುದು.
ಮಾದಕ ಮುಕ್ತ ರಾಜ್ಯ ಗುರಿ: ಎಲ್ಲಾ ಪೋಲೀಸ್ ಠಾಣೆಗಳು ಮತ್ತು ಇಲಾಖೆಗೆ ಮ್ಯಾಪ್-ಡ್ರಗ್ಸ್ ಆ್ಯಪ್ ಕುರಿತು 6 ತಿಂಗಳಲ್ಲಿ ತರಬೇತಿ. ಪ್ರತಿಯೊಂದು ಜಿಲ್ಲೆಯಲ್ಲಿ ಮಾದಕ ವಸ್ತು ನಿಯಂತ್ರಣಕ್ಕೆ ಗುರಿ ನಿಗದಿಪಡಿಸುವುದು.
ಮಾದರಿ ಅನುಸರಣೆ: ಬೆಳಗಾವಿ ಜಿಲ್ಲೆಯ ಮಾದರಿ ಕ್ರಮವನ್ನು ಇತರೆ ಜಿಲ್ಲೆಗಳು ಅನುಸರಿಸಲು ಸೂಚನೆ. ಈ ಸಂಬಂಧ ಬೆಳಗಾವಿಯಿಂದ ವರದಿ ಹಂಚಿಕೆ.
ವಿಮಾನ ನಿಲ್ದಾಣಗಳಲ್ಲಿ ತಪಾಸಣೆ: ಮಾದಕ ವಸ್ತುಗಳ ಕಳ್ಳ ಸಾಗಾಣಿಕೆ ತಡೆಯಲು ಕಸ್ಟಮ್ಸ್ ಅಧಿಕಾರಿಗಳನ್ನು ಸಮಿತಿಗೆ ಆಹ್ವಾನಿಸುವುದು.
ಅಕ್ರಮ ಔಷಧ ತಡೆ: ನೋಂದಾಯಿತವಲ್ಲದ ಔಷಧ ಕಂಪನಿಗಳನ್ನು ಗುರುತಿಸಿ ಕ್ರಮ. ಔಷಧ ಅಂಗಡಿಗಳ ಮುಂದೆ “ವೈದ್ಯರ ಅನುಮತಿಯಿಲ್ಲದೆ ಮಾರಾಟ ನಿಷೇಧ’ ಫಲಕ ಕಡ್ಡಾಯ. SOP ರೂಪಿಸಿ ಸಾರ್ವಜನಿಕರಿಗೆ ಮಾಹಿತಿ ನೀಡುವುದು. ಜಿಲ್ಲಾಧಿಕಾರಿಗಳು ಪ್ರತಿ ತಿಂಗಳು ಒಂದು ಕೇಂದ್ರಕ್ಕೆ ಭೇಟಿ ನೀಡಿ. ವರದಿ ಸಲ್ಲಿಸುವುದು.
ವಿದ್ಯಾರ್ಥಿಗಳ ರಕ್ಷಣೆಗೆ ಕ್ರಮ: ಹಾಸ್ಟೆಲ್ಗಳಲ್ಲಿ ಡ್ರಗ್ ಟೆಸ್ಟಿಂಗ್ ಕಿಟ್ ಬಳಸಿ ಪರೀಕ್ಷೆ. ಪಾಸಿಟಿವ್ ಪ್ರಕರಣಗಳ ವಿರುದ್ಧ ಕ್ರಮ. ಜಿಲ್ಲಾ ಮಟ್ಟದ ಉಪ ಸಮಿತಿಗಳ ರಚನೆ. ANTF ಮಾದರಿಯಲ್ಲಿ ಜಿಲ್ಲಾವಾರು ಉಪ-ಸಮಿತಿಗಳು ರಚನೆ.
ನಿಷೇಧಿತ ಔಷಧಗಳ ಮಾರಾಟದ ಮೇಲ್ವಿಚಾರಣೆ: ಕೆಂಪುಪಟ್ಟಿಯ ಔಷಧಗಳ ನಿಯಂತ್ರಣ ಇನ್ನಷ್ಟು ಬಲಪಡಿಸಬೇಕು.