ಹಸು ಕಳವು ಮಾಡುತ್ತಿದ್ದ ಕಳ್ಳರ ಬಂಧನ: ನಗದು, ವಾಹನ ಜಪ್ತಿ

Most read

ಕೋಲಾರ: ಹಸುಗಳನ್ನು ಕಳವು ಮಾಡಿ ಸಾಗಿಸುತ್ತಿದ್ದ ಐವರು ಕಳ್ಳರನ್ನು ಕೋಲಾರ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ. ಅವರಿಂದ 51000 ರೂ.ನಗದು  ಹಾಗೂ ಹಸುಗಳ ಸಾಗಾಣಿಕೆಗೆ ಬಳಸುತ್ತಿದ್ದ  ಬೊಲೇರೋ ವಾಹನವನ್ನು  ವಶಕ್ಕೆ ಪಡೆದಿದ್ದಾರೆ.

ಸೈಯದ್ ನಿಜಾಂ, ಮುಹೀನ್ ಪಾಷ ಮತ್ತು ಮುಷ್ಟಾಕ್, ಆಸೀಫ್ ಪಾಷ ಬಂಧಿತ ಆರೋಪಿಗಳು.  ಇವರೆಲ್ಲರೂ ಕಾರ್ಮಿಕರಾಗಿ ದುಡಿಯುತ್ತಿದ್ದರು.

ಗ್ರಾಮಾಂತರ ಪೊಲೀಸ್ ಇನ್ಸಪೆಕ್ಟರ್ ಕಾಂತರಾಜು ಮತ್ತು ಅವರ ತಂಡ ಗಸ್ತು ತಿರುಗುತ್ತಿದ್ದಾಗ ರಾಷ್ರ್ಟೀಯ ಹೆದ್ದಾರಿ  ಕೊಂಡರಾಜನಹಳ್ಳಿ ಗೇಟ್ ಬಳಿ ಅನುಮಾನಾಸ್ಪದವಾಗಿ ಕೋಲಾರ ಕಡೆಯಿಂದ ಬೆಂಗಳೂರು ರಸ್ತೆಗೆ ಹೋಗುತ್ತಿದ್ದ ಬೊಲೆರೋ ಗೂಡ್ಸ್ ವಾಹನವನ್ನು ಪರಿಶೀಲನೆ ನಡೆಸಿದಾಗ  ಈ ಕಳವು ಬೆಳಕಿಗೆ ಬಂದಿದೆ.

ಮನೆ ಬೀಗ ಮುರಿದು ಚಿನ್ನಾಭರಣ ನಗದು ಕಳವು:

ನಗರದ ಗರ್ ಪೇಟೆ ಪೋಲೀಸ್ ಠಾಣೆ ವ್ಯಾಪ್ತಿಯ ಕಾರಂಜಿ ಕಟ್ಟೆಯ ಮನೆಯೊಂದರ ಬೀಗ ಮುರಿದು ನುಗ್ಗಿದ ಕಳ್ಳರು ಬೀರುವನ್ನು ಒಡೆದು ಅದರಲ್ಲಿದ್ದ ಚಿನ್ನಾಭರಣ ಹಾಗೂ 20 ಸಾವಿರ ರೂ. ಹಣವನ್ನು ದೋಚಿದ್ದಾರೆ. ಈ ಮನೆಯ ಒಡತಿ  ಭವ್ಯ ಅವರು ಅನಾರೋಗ್ಯದ ಕಾರಣ ರಾತ್ರಿ ತನ್ನ ತಾಯಿಯ ಮನೆಯಲ್ಲಿ ಮಲಗಲು ಹೋಗಿದ್ದಾಗ  ಕಳ್ಳತನ ನಡೆದಿದೆ. ಇವರ ಅಕ್ಕಪಕ್ಕದ ಮನೆಗಳಿಗೆ ಮುಂಬಾಗಿನ ಚಿಲಕಗಳನ್ನು ಹಾಕಿ ಭವ್ಯ ಅವರ ಮನೆಯಲ್ಲಿ ಕಳ್ಳತನ ಮಾಡಿದ್ದಾರೆ.

More articles

Latest article